ರಾಜ್ಯ

ಬೆಂಗಳೂರು: ಮಲ್ಲೇಶ್ವರಂನಲ್ಲಿ 'ಸೀರೆ ಉಟ್ಟ ನಾರಿಯರ ಓಟ': ಸಚಿವ ಡಾ. ಅಶ್ವತ್ಥ ನಾರಾಯಣ ಚಾಲನೆ

Nagaraja AB

ಬೆಂಗಳೂರು:  ಜಯನಗರ ಜಾಗ್ವಾರ್ಸ್ ಸಂಸ್ಥೆ ಇಂದು ಬೆಳಗ್ಗೆ ಮಲ್ಲೇಶ್ವರಂನಲ್ಲಿ ಏರ್ಪಡಿಸಿದ್ದ 3 ಕಿಲೋ ಮೀಟರ್ ಉದ್ದದ 'ಸೀರೆ ಉಟ್ಟ ನಾರಿಯರ ಓಟದ ಸ್ಪರ್ಧೆಗೆ ಕ್ಷೇತ್ರದ ಶಾಸಕರು ಆಗಿರುವ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥ ನಾರಾಯಣ ಚಾಲನೆ ನೀಡಿದರು. 18ನೇ ಅಡ್ಡರಸ್ತೆಯ ಮೈದಾನದಿಂದ ಆರಂಭವಾದ ಈ ಸ್ಪರ್ಧೆಯಲ್ಲಿ ಸಾವಿರಾರು ನಾರಿಯರು ಉತ್ಸಾಹದಿಂದ ಪಾಲ್ಗೊಂಡರು. 

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಆರೋಗ್ಯದ ಗುಟ್ಟನ್ನು ಅರಿತರೆ ಬದುಕಿನ ಗುಟ್ಟನ್ನೇ ತಿಳಿಯಬಹುದು. ದೇಶಿ ಉಡುಪಿನಲ್ಲೂ ಮಹಿಳೆಯರು ಆಟೋಟಗಳಲ್ಲಿ ಭಾಗವಹಿಸಬಹುದು.ಇಂತಹ ಚಟುವಟಿಕೆಗಳಿಂದ ಮಹಿಳೆಯರಿಗೂ ಖುಷಿ ಸಿಗುತ್ತದೆ ಎಂದು ಅವರು ತಿಳಿಸಿದರು. 

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ದೈಹಿಕ ಶಿಕ್ಷಣ ಮತ್ತು ಯೋಗಕ್ಷೇಮಕ್ಕೂ ಆದ್ಯತೆ ನೀಡಲಾಗಿದೆ. ಸದೃಢ ಆರೋಗ್ಯದಿಂದ ಸದೃಢ  ಭಾರತ ನಿರ್ಮಿಸಬಹುದು ಎಂದು ಅವರು ನುಡಿದರು.  ಆದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತ ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

SCROLL FOR NEXT