ರಾಜ್ಯ

ಬೆಳೆ ನಷ್ಟದ ಪ್ರಮಾಣ ಆಧರಿಸಿ ಪರಿಹಾರ: ಬಿ ಎಸ್ ಯಡಿಯೂರಪ್ಪ

Sumana Upadhyaya

ಚಿತ್ರದುರ್ಗ: ರಾಜ್ಯದಲ್ಲಿ ಇತ್ತೀಚೆಗಷ್ಟೇ ಸುರಿದ ನಿರಂತರ ಮಳೆಯಿಂದ ಕೃಷಿ ಕ್ಷೇತ್ರಕ್ಕೆ ಭಾರಿ ಹಾನಿಯಾಗಿದ್ದು, ಬೆಳೆ ನಷ್ಟಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ತರಳಬಾಳು ಜಗದ್ಗುರು ಶಿವಕುಮಾರ ಶಿವಾಚಾರ್ಯ ಸ್ವಾಮಿಗಳ ಪುಣ್ಯಸ್ಮರಣೆ ನಿಮಿತ್ತ ಸಿರಿಗೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, ದೇಶದಲ್ಲಿ 26 ಸಾವಿರ ಕೋಟಿ ರೂಪಾಯಿಗಳಷ್ಟು ಬೆಳೆ ಭಾರೀ ಮಳೆ ಪ್ರವಾಹಕ್ಕೆ ನಷ್ಟವಾಗಿದೆ, ಬೆಳೆ ಪರಿಹಾರವಾಗಿ 1 ಲಕ್ಷ ಕೋಟಿಯನ್ನು ವಿವಿಧ ವಿಮಾ ಕಂಪನಿಗಳು ವಿತರಿಸಿವೆ.

ತಾವು ಸಿಎಂ ಆಗಿದ್ದ ಅವಧಿಯಲ್ಲಿ ಭರಮಸಾಗರ ಏತ ನೀರಾವರಿ ಯೋಜನೆಗೆ 565 ಕೋಟಿ ರೂಪಾಯಿ, ಜಗಳೂರು ಏತ ನೀರಾವರಿ ಯೋಜನೆಗೆ 725 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದ್ದು, ಇದರಿಂದ ಈ ಪ್ರದೇಶಕ್ಕೆ ನೀರು ಸಾಕಾಗುತ್ತದೆ ಎಂದರು.

SCROLL FOR NEXT