ರಾಜ್ಯ

ಹಳೆಯ ಮಾದರಿಯಲ್ಲಿ ಎಸ್ಎಸ್ ಎಲ್ ಸಿ ಪರೀಕ್ಷೆ ವಿಧಾನ, ಇನ್ನು ಮುಂದೆ ಬಹು ಆಯ್ಕೆ ಪ್ರಶ್ನೆಗಳು

Sumana Upadhyaya

ಬೆಂಗಳೂರು: ಕರ್ನಾಟಕ ಸರ್ಕಾರವು ಹೊರಡಿಸಿದ ಹೊಸ ಮಾರ್ಗಸೂಚಿಗಳ ಪ್ರಕಾರ, ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಹಿಂದಿನ ಮಾದರಿಗೆ ಮರಳಲಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಸರಿಯಾಗಿ ಪಾಠಗಳು ನಡೆಯದಿದ್ದುದರಿಂದ ಕಳೆದ ಎರಡು ವರ್ಷ ಬಹು ಆಯ್ಕೆಯ ಪ್ರಶ್ನೆಗಳನ್ನು ನೀಡಲಾಗಿತ್ತು. (MCQ) 

ಆದರೆ ಈ ವರ್ಷದಿಂದ 10ನೇ ತರಗತಿ ವಿದ್ಯಾರ್ಥಿಗಳು ಹಿಂದಿನ ಮಾದರಿಗೆ ಮರಳಬೇಕಾಗಿದೆ. ಪ್ರಬಂಧ-ಮಾದರಿಯ ಪ್ರಶ್ನೆಗಳಿಗೆ ವಿವರವಾದ ಉತ್ತರಗಳನ್ನು ಇನ್ನು ಮುಂದೆ ನೀಡಬೇಕು. ಪಠ್ಯಕ್ರಮವನ್ನು ಕಡಿತಗೊಳಿಸುವ ನಿರ್ಧಾರವೂ ಹಿಂಪಡೆಯಲಿದ್ದು, ವಿದ್ಯಾರ್ಥಿಗಳು ಸಂಪೂರ್ಣ ಪಠ್ಯಕ್ರಮವನ್ನು ಅಧ್ಯಯನ ಮಾಡಬೇಕಾಗುತ್ತದೆ. ಜತೆಗೆ ವರ್ಷದಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿರುವ ಪರಿಷ್ಕೃತ ಪಠ್ಯಪುಸ್ತಕಗಳೂ ವಿದ್ಯಾರ್ಥಿಗಳಿಗೆ ಕಲಿಸುವ ಪಠ್ಯಕ್ರಮದ ಭಾಗವಾಗಲಿದೆ.

ಶೇಕಡಾ 75ರಷ್ಟು ಹಾಜರಾತಿ ಕಡ್ಡಾಯ
ಕೋವಿಡ್ ಕಾರಣದಿಂದ ಕಳೆದ ವರ್ಷ 2021-22ರ  ಜೂನ್-ಜುಲೈನಲ್ಲಿ ನಡೆದ ವಾರ್ಷಿಕ ಪರೀಕ್ಷೆಗಳು ಈ ವರ್ಷದಿಂದ ಮುಂಚೆ ಇದ್ದಂತೆ ಮುಂದಿನ ವರ್ಷ ಮಾರ್ಚ್ -ಏಪ್ರಿಲ್ ನಲ್ಲಿ ನಡೆಯಲಿದೆ. ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಶೇಕಡಾ 75ರಷ್ಟು ಹಾಜರಾತಿ ಕಡ್ಡಾಯವಾಗಿರುತ್ತದೆ. 2019-2020ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಸ್ವರೂಪವನ್ನು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ (2022-23) ಯಾವುದೇ ಬದಲಾವಣೆಗಳಿಲ್ಲದೆ ಅನುಸರಿಸಲಾಗುವುದು ಎಂದು ಮಾರ್ಗಸೂಚಿಗಳು ತಿಳಿಸಿವೆ.

ಪುನರಾವರ್ತಿತ ವಿದ್ಯಾರ್ಥಿಗಳು ಈ ವರ್ಷ ನಿಗದಿಪಡಿಸಿದ ಸಂಪೂರ್ಣ ಪಠ್ಯಕ್ರಮವನ್ನು ಅಧ್ಯಯನ ಮಾಡಬೇಕಾಗುತ್ತದೆ ಎಂದು ಸರ್ಕಾರದ ಮಾರ್ಗಸೂಚಿ ತಿಳಿಸಿದೆ.

SCROLL FOR NEXT