ರಾಜ್ಯ

ಕರ್ನಾಟಕದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ವರಾಲೆ ನೇಮಕ

Srinivas Rao BV

ಬೆಂಗಳೂರು: ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಪಿ ಬಿ ವರಾಲೆ ಅವರನ್ನು ನೇಮಕ ಮಾಡಲಾಗಿದೆ. 

ಸುಪ್ರೀಂ ಕೋರ್ಟ್‌ ಕೊಲಿಜಿಯಂ ಶಿಫಾರಸ್ಸು ಮಾಡಿದ ಆಧಾರದಲ್ಲಿ ನ್ಯಾ. ಪಿಬಿ ವರಾಲೆ ಅವರನ್ನು ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಆದೇಶ ಹೊರಡಿಸಿದೆ.

ಪ್ರಸನ್ನ ಬಿ ವರಾಲೆ ಅವರು ಈ ಹಿಂದೆ ಬಾಂಬೆ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ್ದರು. ನ್ಯಾ. ವರಾಲೆ ಅವರು 1985ರ ಆಗಸ್ಟ್‌ನಲ್ಲಿ ವಕೀಲರಾಗಿ ನೋಂದಾಯಿಸಿಕೊಂಡರು.

ವೃತ್ತಿಯ ಆರಂಭದಲ್ಲಿ ವಕೀಲರಾದ ಎಸ್‌ ಎನ್‌ ಲೋಯಾ ಅವರ ಬಳಿ ಕಿರಿಯ ವಕೀಲರಾಗಿ ವರಾಲೆ ಪ್ರಾಕ್ಟೀಸ್‌ ಆರಂಭಿಸಿದರು.1992ರವರೆಗೆ ಔರಂಗಾಬಾದ್‌ನ ಅಂಬೇಡ್ಕರ್‌ ಕಾನೂನು ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದ್ದರು. 2008ರ ಜುಲೈ 18ರಲ್ಲಿ ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 

SCROLL FOR NEXT