ರಾಜ್ಯ

ಅದಾನಿ ವಿಚಾರದಲ್ಲಿ ಪ್ರಧಾನಿ ವಿರುದ್ಧ ಆರೋಪ: ರಾಹುಲ್ ಗಾಂಧಿ 'ಪುನರಾವರ್ತಿತ ಅಪರಾಧಿ' ಎಂದ ನಿರ್ಮಲಾ ಸೀತಾರಾಮನ್ 

Ramyashree GN

ಬೆಂಗಳೂರು: ಅದಾನಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ತೀವ್ರವಾಗಿ ಟೀಕಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಅಂತಹ ಆರೋಪಗಳನ್ನು ಹೊರಿಸುವಲ್ಲಿ ರಾಹುಲ್ 'ಪುನರಾವರ್ತಿತ ಅಪರಾಧಿ' ಎಂದು ಗುರುವಾರ ಬಣ್ಣಿಸಿದ್ದಾರೆ.

ಅದಾನಿ ಅವರಿಗೆ ಎಲ್ಲಾ ವಿಷಯಗಳಲ್ಲಿ ಅನಾವಶ್ಯಕ ಅನುಕೂಲಗಳನ್ನು ಮಾಡಿಕೊಡಲಾಗಿದೆ ಎಂದು ಎಂದು ರಾಹುಲ್ ಗಾಂಧಿ ನಿಜವಾಗಿಯೂ ಭಾವಿಸಿದರೆ, ಅದು ನಿಜವಲ್ಲ ಎಂದು ಸೀತಾರಾಮನ್ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

ಪ್ರಧಾನಿ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುವ ವಿಷಯದಲ್ಲಿ ಅವರು ಈಗ ಪುನರಾವರ್ತಿತ ಅಪರಾಧಿಯಾಗುತ್ತಿದ್ದಾರೆ ಎಂದು ನಾನು ಹೇಳುತ್ತೇನೆ. 2019ರ ಚುನಾವಣೆಗೆ ಮುಂಚಿತವಾಗಿ ನಾವು ಅವರನ್ನು ನೋಡಿದ್ದೇವೆ. ಅವರೀಗ ಮತ್ತೆ ಅದನ್ನೇ ಮಾಡುತ್ತಿದ್ದಾರೆ. ಅವರು ಪ್ರಧಾನಿ ವಿರುದ್ಧ ಎಲ್ಲಾ ಸುಳ್ಳು ಆರೋಪಗಳನ್ನು ಮಾಡುತ್ತಿದ್ದರೂ, ಯಾವುದೇ ಪಾಠ ಕಲಿಯುವಂತೆ ಕಾಣುತ್ತಿಲ್ಲ ಎಂದು ಅವರು ಹೇಳಿದರು.

ಅದಾನಿಗೆ ಕೇರಳ ಸರ್ಕಾರ ಮತ್ತು ರಾಜಸ್ಥಾನದಲ್ಲಿ ಸೌರವಿದ್ಯುತ್ ಯೋಜನೆಗೆ ನೀಡಿದ 'ಅನಗತ್ಯ ಉಪಕಾರ'ದ ವಿರುದ್ಧ ರಾಹುಲ್ ಏಕೆ ಧ್ವನಿ ಎತ್ತಲಿಲ್ಲ. ಇದು ಕೇರಳದಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಅದಾನಿಗೆ ವಿಝಿಂಜಂ ಬಂದರನ್ನು ತಟ್ಟೆಯಲ್ಲಿ ನೀಡಿತು ಎಂದರು.

ಯಾವುದೇ ಟೆಂಡರ್ ಆಧಾರದಲ್ಲಿ ಅದನ್ನು ಅವರಿಗೆ ನೀಡಿಲ್ಲ. ಈಗ ಅಲ್ಲಿ ಕಾಂಗ್ರೆಸ್ ಸರ್ಕಾರವಲ್ಲ, ಸಿಪಿಎಂ ಸರ್ಕಾರ ಇದೆ. ಆದರೆ, ಕೇರಳವು ಆ ಆದೇಶವನ್ನು ರದ್ದುಗೊಳಿಸಬೇಕೆಂದು ಕೇಳಲು ಮತ್ತು ಒತ್ತಾಯಿಸಲು ರಾಹುಲ್ ಗಾಂಧಿ ತಡೆದದ್ದು ಯಾವುದು? ಎಂದು ಸೀತಾರಾಮನ್ ಪ್ರಶ್ನಿಸಿದರು.

'ಸಂಪೂರ್ಣ ಸೌರ ವಿದ್ಯುತ್ ಯೋಜನೆ'ಯನ್ನು ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ ಅದಾನಿಗೆ ನೀಡಲಾಗಿದೆ. ಇದನ್ನು ಪ್ರಶ್ನಿಸದಂತೆ ರಾಹುಲ್ ಗಾಂಧಿಯವರನ್ನು ಏನು ತಡೆಯುತ್ತಿದೆ? ಎಂದು ಕಿಡಿಕಾರಿದರು.

SCROLL FOR NEXT