ತೇಜಸ್ವಿ ಸೂರ್ಯ 
ರಾಜ್ಯ

ಮುಂದಿನ ತಲೆಮಾರಿನ ನಾಯಕತ್ವ ‌ಬೆಳೆಸಲು ಹಿರಿಯ ನಾಯಕರು ಹಿಂದೆ ಸರಿದಿದ್ದು, ದೊಡ್ಡ ಪರಂಪರೆಗೆ ಸಾಕ್ಷಿ ಆಗಿದ್ದಾರೆ: ತೇಜಸ್ವಿ ಸೂರ್ಯ

ಮುಂದಿನ ತಲೆಮಾರಿನ ನಾಯಕತ್ವವನ್ನು ‌ಬೆಳೆಸಲು ಬಿಎಸ್ ಯಡಿಯೂರಪ್ಪ, ಈಶ್ವರಪ್ಪ, ಹಾಲಾಡಿ ಶ್ರೀನಿವಾಸ್ ಶೆಟ್ಟಿ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದು, ಈ ಮೂಲಕ ದೊಡ್ಡ ಪರಂಪರೆಗೆ ಸಾಕ್ಷಿ ಆಗಿದ್ದಾರೆ. ಈ ಮೂಲಕ ಸಾವಿರಾರು ಕಾರ್ಯಕರ್ತರಿಗೆ ಪ್ರೇರಣೆ ನೀಡಿದ್ದಾರೆಂದು ಸಂಸದ ತೇಜಸ್ವಿ ಸೂರ್ಯ ಅವರು ಬುಧವಾರ ಹೇಳಿದ್ದಾರೆ.

ಬೆಂಗಳೂರು: ಮುಂದಿನ ತಲೆಮಾರಿನ ನಾಯಕತ್ವವನ್ನು ‌ಬೆಳೆಸಲು ಬಿಎಸ್ ಯಡಿಯೂರಪ್ಪ, ಈಶ್ವರಪ್ಪ, ಹಾಲಾಡಿ ಶ್ರೀನಿವಾಸ್ ಶೆಟ್ಟಿ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದು, ಈ ಮೂಲಕ ದೊಡ್ಡ ಪರಂಪರೆಗೆ ಸಾಕ್ಷಿ ಆಗಿದ್ದಾರೆ. ಈ ಮೂಲಕ ಸಾವಿರಾರು ಕಾರ್ಯಕರ್ತರಿಗೆ ಪ್ರೇರಣೆ ನೀಡಿದ್ದಾರೆಂದು ಸಂಸದ ತೇಜಸ್ವಿ ಸೂರ್ಯ ಅವರು ಬುಧವಾರ ಹೇಳಿದ್ದಾರೆ.

ಬಿಜೆಪಿ ಚುನಾವಣಾ ಕಚೇರಿಯಲ್ಲಿ ಬುಧವಾರ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಪಟ್ಟಿ ಘೋಷಣೆ ಆಗಿದ್ದು, ರಾಜ್ಯದಲ್ಲಿ ಹೊಸ ಚೈತನ್ಯದಿಂದ ಕಾರ್ಯಕರ್ತರು ಹಾಗೂ ಮತದಾರರು ಸ್ವಾಗತ ಮಾಡಿದ್ದಾರೆ ಎಂದು ಹೇಳಿದರು.

52 ಹೊಸ ಮುಖಗಳಿಗೆ ಅವಕಾಶ ಕೊಡಲಾಗಿದೆ. ಆಯ್ಕೆ ಪ್ರಕ್ರಿಯೆ ನರೇಂದ್ರ ಮೋದಿ‌ ಅವರ ವಿಶೇಷ ಕಾಳಜಿಯಿಂದ ನಡೆದಿದೆ. ಅನುಭವ ಹಾಗೂ ಹೊಸತನ ಜೊತೆಗೆ ಯುವಕರಿಗೆ ಅವಕಾಶ ಕೊಡಲಾಗಿದೆ. ಬಾಲೆನ್ಸ್ ಆಗಿ‌ ಟಿಕೆಟ್ ಹಂಚಿಕೆ ಮಾಡಲಾಗಿದೆ. ಮುಂದಿನ ತಲೆಮಾರಿನ ನಾಯಕತ್ವವನ್ನು ‌ಬೆಳೆಸಲು ಬಿಎಸ್ ಯಡಿಯೂರಪ್ಪ, ಈಶ್ವರಪ್ಪ, ಹಾಲಾಡಿ ಶ್ರೀನಿವಾಸ್ ಶೆಟ್ಟಿ ಚುನಾವಣಾ ರಾಜಕೀಯದಿಂದ ಹಿಂದೆ ಸರಿದು ದೊಡ್ಡ ಪರಂಪರೆಗೆ ಸಾಕ್ಷಿ ಆಗಿದ್ದಾರೆ. ಇದು ಸಾವಿರಾರು ಕಾರ್ಯಕರ್ತರಿಗೆ ಪ್ರೇರಣೆ ಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಬಾರಿಯ ಚುನಾವಣೆಯಲ್ಲಿ ಸಾಕಷ್ಟು ಜನ ಯುವಕರಿಗೆ ಅವಕಾಶ ಕೊಡಲಾಗಿದೆ. ಸಂಘಟನೆಯಲ್ಲಿ ಕೆಲಸ ಮಾಡಿ ಬಂದವರಿಗೆ ಅವಕಾಶ ಕೊಡಲಾಗಿದೆ. ಬ್ಯಾಟರಾಯನಪುರದಲ್ಲಿ ತಮ್ಮೇಶ್ ಗೌಡ, ದೊಡ್ಡಬಳ್ಳಾಪುರದಿಂದ ಧೀರಜ್ ಮುನಿರಾಜು ಎಂಬುವವರಿಗೆ ಅವಕಾಶ ಕೊಡಲಾಗಿದೆ. ಗಾಂಧಿ ನಗರದಿಂದ ಸಪ್ತ ಗಿರಿಗೌಡ ಅವರಿಗೆ ಅವಕಾಶ ಕೊಡಲಾಗಿದೆ.

ಸಾಮಾಜಿಕ ನ್ಯಾಯವನ್ನು ಎಲ್ಲ ಹಂತದಲ್ಲಿ ಪರಿಗಣಿಸಲಾಗಿದೆ. ಎಲ್ಲಾ ಜಾತಿ ಉಪ ಜಾತಿಗಳಿಗೆ ಅವಕಾಶ ಕೊಡಲಾಗಿದೆ. ಸುಳ್ಳದಲ್ಲಿ ಆದಿ ದ್ರಾವಿಡ ಸಮಾಜದ ಮಹಿಳೆಗೆ ಟಿಕೆಟ್ ಕೊಡಲಾಗಿದೆ. ಸಾಮಾಜಿಕ ಆರ್ಥಿಕವಾಗಿ ಹಿಂದುಳಿದ ಸಮಾಜದ ಭಾಗೀರತಿ ಮುರುಳಿಯ್ಯ ಅವರಿಗೆ ಟಿಕೆಟ್‌ ನೀಡಲಾಗಿದೆ. ಎಸ್ ಸಿ ಸಮಾಜದ ಎಲ್ಲ ಉಪ ಜಾತಿಗಳಿಗೆ ಟಿಕೆಟ್ ನೀಡಲಾಗಿದೆ ಎಂದು ತಿಳಿಸಿದರು.

ಯಾವ ಪಕ್ಷದಲ್ಲಿ ಇಷ್ಟು ಆಂತರಿಕ ಚರ್ಚೆಗಳು ನಡೆದಿಲ್ಲ. 25 ಸಾವಿರ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಜಿಲ್ಲಾ ಕೋರ್ ಕಮಿಟಿ, ರಾಜ್ಯ ಕೋರ್ ಕಮಿಟಿ ಚರ್ಚೆ ಬಳಿಕ ಸ್ಕ್ರೀನಿಂಗ್ ಕಮಿಟಿ ಚರ್ಚೆ ನಡೆದು ನಂತರದಲ್ಲಿ ಪ್ರಧಾನಿ ಮೋದಿ ಸಮ್ಮುಖದಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಒಂದಿಷ್ಟು ಬದಲಾವಣೆ ಮಾಡಿ ಅಭ್ಯರ್ಥಿ ಘೋಷಣೆ ಆಗಿದೆ ಎಂದರು.

ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದ ವಿಚಾರವಾಗಿ ಮಾತನಾಡಿ, ‌ಟಿಕೆಟ್ ಸಿಗದಿದ್ದಾಗ ಅಸಮಾಧಾನ ಸಹಜ. ಹಾಗಂತ ಬಿಜೆಪಿಯನ್ನು ಬಿಟ್ಟು ಹೋಗ್ತಾರೆ ಹಾಗೂ ಪಕ್ಷಕ್ಕೆ ನಷ್ಟ ಆಗುತ್ತದೆ ಎಂಬುದೆಲ್ಲಾ ಸುಳ್ಳು ಎಂದು ಹೇಳಿದರು.

ಚಿತ್ತಾಪುರದಲ್ಲಿ ರೌಡಿ ಶೀಟರ್ ಮಣಿಕಂಠ ರಾಥೋಡ್ ಟಿಕೆಟ್ ನೀಡಿದ ವಿಚಾರವಾಗಿ ಮಾತನಾಡಿ, ಮಣಿಕಂಠ ರಾಥೋಡ್ ವಿರುದ್ಧ ರಾಜಕೀಯ ಪ್ರೇರಿತರಾಗಿ ಸುಳ್ಳು‌ಕೇಸ್ ಹಾಕಿ ಗಡಿಪಾರು ಮಾಡಿದ್ದಾರೆ. ಅದಕ್ಕೆ ಮತದಾರರು ಚುನಾವಣೆಯಲ್ಲಿ ಉತ್ತರ ನೀಡುತ್ತಾರೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

SCROLL FOR NEXT