ರಾಜ್ಯ

'ಕರ್ನಾಟಕ ಭಾರತದ ಆತ್ಮವನ್ನು ಉಳಿಸುವ ಕುರುಕ್ಷೇತ್ರ', ಬಿಜೆಪಿ ಸೋಲು ಇಲ್ಲಿಂದಲೇ ಆರಂಭವಾಗಲಿ: ಯೋಗೇಂದ್ರ ಯಾದವ್

Shilpa D

ಬೆಂಗಳೂರು: ಕರ್ನಾಟಕವೇ ಕುರುಕ್ಷೇತ್ರ, ಇಲ್ಲಿಂದಲೇ ಬಿಜೆಪಿಯನ್ನು ಸೋಲಿಸಿ ಎಂದು ಹೋರಾಟಗಾರರು, ಸಾಹಿತಿಗಳು, ಬುದ್ಧಿಜೀವಿಗಳು ಆರಂಭಿಸಿರುವ 'ಎದ್ದೇಳು ಕರ್ನಾಟಕ' (ವೇಕಪ್ ಕರ್ನಾಟಕ) ಮತದಾರರ ಜಾಗೃತ ವೇದಿಕೆ ಕೋರಿದೆ.

ಮಂಗಳವಾರ ಪ್ರೆಸ್‍ಕ್ಲಬ್ ಆವರಣದಲ್ಲಿ 'ಎದ್ದೇಳು ಕರ್ನಾಟಕ' ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾರ್ಯಕರ್ತ ಮತ್ತು ರಾಜಕಾರಣಿ ಯೋಗೇಂದ್ರ ಯಾದವ್, ಕರ್ನಾಟಕವು ಭಾರತದ ಆತ್ಮವನ್ನು ಉಳಿಸುವ ಕುರುಕ್ಷೇತ್ರ" ಎಂದು ಹೇಳಿದರು, ಸಂವಿಧಾನವನ್ನು ಬುಡಮೇಲು ಮಾಡಲು ಬಿಜೆಪಿ ನಿರಂತರವಾಗಿ ಪ್ರಯತ್ನಿಸುತ್ತಿದೆ. ರಾಜ್ಯದಲ್ಲಿ ಈಗಾಗಲೇ ಅಧಿಕಾರಕ್ಕೆ  ವಿರೋಧ ಶುರುವಾಗಿದ್ದು, ಪಕ್ಷದ ವಿರುದ್ಧ ಜನ ದನಿ ಎತ್ತುತ್ತಿದ್ದಾರೆ ಎಂದರು.

ಮತಗಳನ್ನು ವ್ಯರ್ಥ ಮಾಡಬೇಡಿ, ಮತಗಳನ್ನು ವಿಭಜಿಸಬೇಡಿ ಮತ್ತು ಬಿಜೆಪಿಯನ್ನು ಸೋಲಿಸುವ ಅಭ್ಯರ್ಥಿಗೆ ಮಾತ್ರ ಮತ ನೀಡಿ ಎಂಬ ಮೂರು ತತ್ವಗಳನ್ನು ಅನುಸರಿಸುವಂತೆ ಎದ್ದೇಳು ಕರ್ನಾಟಕ ಮತದಾರರನ್ನು ಕೇಳುತ್ತಿದೆ ಎಂದರು.

ಪ್ರಜಾಪ್ರಭುತ್ವವನ್ನು ಉಳಿಸಲು ಸರಿಯಾದ ಆಯ್ಕೆ ಮಾಡಲು ಜನರನ್ನು ಮನವೊಲಿಸಲು ನಾವು ಕ್ಷೇತ್ರಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು ತಂಡಗಳನ್ನು ಕಳುಹಿಸಿದ್ದೇವೆ ಎಂದು ಯಾದವ್ ಹೇಳಿದರು. ಚಿಂತಕ ಮತ್ತು ಸಾಂಸ್ಕೃತಿಕ ಕಾರ್ಯಕರ್ತ ಗಣೇಶ್ ದೇವಿ ಮಾತನಾಡಿ, ಈ ಬಾರಿ ಕರ್ನಾಟಕದ ಲೇಖಕರು ಬಿಜೆಪಿ ವಿರುದ್ಧ ಸ್ಪಷ್ಟ ರಾಜಕೀಯ ನಿಲುವು ತಳೆದಿದ್ದಾರೆ ಎಂದು ಅಭಿಪ್ರಾಯ ಪಟ್ಟರು.

ಕಲಾವಿದರು ಮತ್ತು ಸಾಹಿತ್ಯ ಬಂಧುಗಳ ಪರವಾಗಿ ಮಾತನಾಡಿದ ಅವರು, ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ಬರಲು ಬಿಡಬಾರದು. "ಬಿಜೆಪಿ ಅಭ್ಯರ್ಥಿಗಳು ಈಗಾಗಲೇ ಭಯಭೀತರಾಗಿದ್ದಾರೆ ಏಕೆಂದರೆ ಜನರು ತಮ್ಮನ್ನು ಬೆಂಬಲಿಸುವುದಿಲ್ಲ ಎಂದು ತಿಳಿದಿದ್ದಾರೆ" ಎಂದು ಯಾದವ್ ಹೇಳಿದರು. ಬಿಜೆಪಿಯ ಅಧಿಕಾರದಿಂದ ಹೊರಬರುವುದು ಕರ್ನಾಟಕದಿಂದಲೇ ಆರಂಭವಾಗಬೇಕು ಎಂದು ವೇದಿಕೆ ಅಭಿಪ್ರಾಯಪಟ್ಟಿದೆ ಎಂದು ತಿಳಿಸಿದರು.

SCROLL FOR NEXT