ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಫ್ಯಾನ್ಸಿ ನಂಬರ್‌ಗಾಗಿ ಪಾವತಿಸಿದ ಹಣ ವಾಪಾಸ್ ನೀಡುವಂತೆ ಓಲಾಗೆ ಆದೇಶ

ಗ್ರಾಹಕರೊಬ್ಬರು ತಮ್ಮ ವಾಹನಕ್ಕೆ ಫ್ಯಾನ್ಸಿ ನಂಬರ್‌ಗಾಗಿ ಹಣ ಪಾವತಿಸಿದ್ದರೂ ಕಾಯದೆ ವಾಹನ ನೋಂದಾಯಿಸಿದ ಕಾರಣ ಓಲಾ ಎಲೆಕ್ಟ್ರಿಕ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಈಗ ಆ ಹಣವನ್ನು ವಾಪಸ್ ನೀಡಬೇಕಾಗಿದೆ.

ಬೆಂಗಳೂರು: ಗ್ರಾಹಕರೊಬ್ಬರು ತಮ್ಮ ವಾಹನಕ್ಕೆ ಫ್ಯಾನ್ಸಿ ನಂಬರ್‌ಗಾಗಿ ಹಣ ಪಾವತಿಸಿದ್ದರೂ ಕಾಯದೆ ವಾಹನ ನೋಂದಾಯಿಸಿದ ಕಾರಣ ಓಲಾ ಎಲೆಕ್ಟ್ರಿಕ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಈಗ ಆ ಹಣವನ್ನು ವಾಪಸ್ ನೀಡಬೇಕಾಗಿದೆ.

ಬೆಂಗಳೂರಿನ ಮಾರತ್ತಹಳ್ಳಿ ನಿವಾಸಿ ವಿವೇಕ್ ಅಲಹರಿ ಅವರು ಫ್ಯಾನ್ಸಿ ನಂಬರ್‌ಗಾಗಿ ಪ್ರಾದೇಶಿಕ ಸಾರಿಗೆ ಕಚೇರಿಗೆ(ಆರ್‌ಟಿಒ) 25,000 ರೂ.ಪಾವತಿಸಿದ್ದರು. ಆದರೆ ಓಲಾ ಫ್ಯಾನ್ಸಿ ನಂಬರ್ ಗಾಗಿ ಕಾಯದೆ ಅವರ ವಾಹನವನ್ನು ಸಾಮಾನ್ಯ ನೋಂದಣಿ ಸಂಖ್ಯೆಗೆ ನೋಂದಾಯಿಸಿದೆ.

ಈ ಸಂಬಂಧ ವಿವೇಕ್ ಅಲಹರಿ ಅವರು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು. ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರು ನಗರ ಎರಡನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎಂ.ಎಸ್.ರಾಮಚಂದ್ರ, ಸದಸ್ಯರಾದ ಚಂದ್ರಶೇಖರ ಎಸ್.ನೂಲ ಮತ್ತು ನಂದಿನಿ ಎಚ್.ಕುಂಬಾರ್ ಅವರನ್ನೊಳಗೊಂಡ ಪೀಠ, ಅರ್ಜಿದಾರರಿಗೆ 25,000 ರೂ. ಜೊತೆಗೆ, ಶೇ. 8 ರಷ್ಟು ಬಡ್ಡಿಯೊಂದಿಗೆ, 10,000 ರೂ ಪರಿಹಾರ ಮತ್ತು 5,000 ರೂ ವ್ಯಾಜ್ಯ ವೆಚ್ಚವನ್ನು ಪಾವತಿಸುವಂತೆ ಓಲಾಗೆ ಆದೇಶಿಸಿದೆ.

ವಿವೇಕ್ ಅವರು ಡಿಸೆಂಬರ್ 18, 2022 ರಂದು, ಓಲಾದಿಂದ 1.65 ಲಕ್ಷ ರೂ.ಗೆ ಖರೀದಿಸಿದ ವಾಹನದ ನೋಂದಣಿಗಾಗಿ ಕರೆ ಬಂದಿದೆ, ನೋಂದಣಿ ಸಂಖ್ಯೆ. ಕೆಎ-03 ಕೆಜೆ-9636 ಇದೆ. ಆದರೆ ಅವರು ಕೆಎ-03-ಕೆಕೆ-0003 ಎಂಬ ಫ್ಯಾನ್ಸಿ ನಂಬರ್‌ಗೆ ಹಣ ಪಾವತಿಸಿದ್ದು, ಸಾರಿಗೆ ಇಲಾಖೆಗೆ 25 ಸಾವಿರ ರೂ. ಪಾವತಿಸಿದ ರಸೀದಿಯನ್ನು ನೀಡಿದ್ದರು. 

ಅದರ ಹೊರತಾಗಿಯೂ, ಓಲಾ ವಾಹನವನ್ನು ನೋಂದಣಿ ಸಂಖ್ಯೆ. KA-03 KJ-9636ಕ್ಕೆ ನೋಂದಣಿ ಮಾಡಿದೆ. ಇದರ ನಂತರ ವಿವೇಕ್ ಅವರು ತಮ್ಮ ಕೋರಿಕೆಯನ್ನು ಪರಿಗಣಿಸಿ ಸೂಕ್ತ ಸೇವೆ ಸಲ್ಲಿಸಲು ಓಲಾ ವಿಫಲವಾಗಿದೆ ಎಂದು ಆರೋಪಿಸಿ ಆಯೋಗಕ್ಕೆ ದೂರು ನೀಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT