ಬಿ.ಎಸ್ ಯಡಿಯೂರಪ್ಪ 
ರಾಜ್ಯ

ಖರ್ಗೆ ಹೇಳಿಕೆಗಾಗಿ ಕಾಂಗ್ರೆಸ್ ದೇಶದ ‌ಜನರ ಕ್ಷಮೆ ಕೇಳಬೇಕು: ಯಡಿಯೂರಪ್ಪ ಆಗ್ರಹ

ಪ್ರಧಾನಿ ನರೇಂದ್ರ ಮೋದಿ ವಿಷ ಸರ್ಪ ಇದ್ದ ಹಾಗೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗಾಗಿ ಕಾಂಗ್ರೆಸ್ ದೇಶದ ‌ಜನರ ಕ್ಷಮೆ ಕೇಳಬೇಕು ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ದಾರೆ.

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ವಿಷ ಸರ್ಪ ಇದ್ದ ಹಾಗೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗಾಗಿ ಕಾಂಗ್ರೆಸ್ ದೇಶದ ‌ಜನರ ಕ್ಷಮೆ ಕೇಳಬೇಕು ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ದಾರೆ.

ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಸಬೆಯಲ್ಲಿ ಮಾತನಾಡಿದ ಅವರು, ಮೋದಿ ಅವರ ಬಗ್ಗೆ ಯಾರೊಬ್ಬರೂ ಹಗುರವಾಗಿ ಮಾತಾಡುವ ಧೈರ್ಯ ಮಾಡಿಲ್ಲ ಆದರೆ ಖರ್ಗೆ ಈ ರೀತಿ ಮಾತನಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಒಬ್ಬ ಹಿರಿಯ ನಾಯಕ ಈ ರೀತಿ ಮಾತಾಡಬಾರದು. ಖರ್ಗೆ ಹೇಳಿಕೆಯನ್ನು ಜನ ಕ್ಷಮಿಸಬಹುದು. ದೇವರಂತೂ ಕ್ಷಮಿಸುವುದಿಲ್ಲ. ಅವರ ಹೇಳಿಕೆ ಯಾರಿಗೂ ಶೋಭೆ ತರುವಂತಹದಲ್ಲ. ನಿಂತಲ್ಲಿ ಕುಳಿತಲ್ಲಿ ಅವರ ಮಾತಿನ ಬಗ್ಗೆ ಚರ್ಚೆ ಆಗುತ್ತಿದೆ' ಖರ್ಗೆ ಪರವಾಗಿ ಕಾಂಗ್ರೆಸ್ ಇಡೀ ದೇಶದ ಜನರ ಕ್ಷಮೆ ಕೋರಬೇಕು ಎಂದು ಯಡಿಯೂರಪ್ಪ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

T20 World Cup: ನೋ ಹ್ಯಾಂಡ್ ಶೇಕ್; ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ಕೆ, ಭಾರತ ತಂಡದಲ್ಲಿ ಎರಡು ಬದಲಾವಣೆ!

ಬಾಂಗ್ಲಾದಲ್ಲಿ BNP ಅಧಿಕಾರ; ಹೊಸ ಸರ್ಕಾರದಲ್ಲಿ ಮುಹಮ್ಮದ್ ಯೂನಸ್ ಗೂ ಮಹತ್ವದ ಸ್ಥಾನ? ರೆಹಮಾನ್ ಬೆಂಬಲ?

T20 World Cup 2026: ಹ್ಯಾಂಡ್ ಶೇಕ್ ವಿವಾದ, ಟೀಂ ಇಂಡಿಯಾ ವಿರುದ್ದ ಸಂಜಯ್ ಮಂಜ್ರೇಕರ್ ಕಿಡಿ! ನೆಟ್ಟಿಗರ ತರಾಟೆ

ಭಾರತದ ರೈತರಿಗೆ ದ್ರೋಹ: ಅಮೆರಿಕ ವ್ಯಾಪಾರ ಒಪ್ಪಂದ ಬಗ್ಗೆ ಕೇಂದ್ರದ ವಿರುದ್ಧ ರಾಹುಲ್ ತೀವ್ರ ವಾಗ್ದಾಳಿ!

T20 World Cup 2026: ಪಾಕ್ ವಿರುದ್ಧದ ಪಂದ್ಯದಲ್ಲಿ 'ಹ್ಯಾಂಡ್ ಶೇಕ್' ಮಾಡದಿರಲು ಟೀಂ ಇಂಡಿಯಾ ನಿರ್ಧಾರ!

SCROLL FOR NEXT