ಕರ್ನಾಟಕ ಹೈಕೋರ್ಟ್ 
ರಾಜ್ಯ

ಸಾರ್ವಜನಿಕ ಹಿತಕ್ಕಿಂತ ದೇಶದ ಭದ್ರತೆ ಮುಖ್ಯ: ಚೀನಾ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದ ಕಂಪನಿ ಟೆಂಡರ್ ರದ್ದುಗೊಳಿಸಿದ ಹೈಕೋರ್ಟ್

ಸಾರ್ವಜನಿಕ ಹಿತಾಸಕ್ತಿಗಿಂತ ರಾಷ್ಟ್ರೀಯ ಭದ್ರತೆಯೇ ಮುಖ್ಯ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್) ಚೀನಾದ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿರುವ ಖಾಸಗಿ ಕಂಪನಿಗೆ ನೀಡಿದ್ದ ಟೆಂಡರ್ ಅನ್ನು ನ್ಯಾಯಾಲಯ ರದ್ದುಗೊಳಿಸಿದ್ದು, ಟೆಂಡರ್ ನೀಡಿರುವುದನ್ನು ಅಮಾನ್ಯ ಎಂದು ಘೋಷಿಸಿದೆ.

ಬೆಂಗಳೂರು: ಸಾರ್ವಜನಿಕ ಹಿತಾಸಕ್ತಿಗಿಂತ ರಾಷ್ಟ್ರೀಯ ಭದ್ರತೆಯೇ ಮುಖ್ಯ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್) ಚೀನಾದ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿರುವ ಖಾಸಗಿ ಕಂಪನಿಗೆ ನೀಡಿದ್ದ ಟೆಂಡರ್ ಅನ್ನು ನ್ಯಾಯಾಲಯ ರದ್ದುಗೊಳಿಸಿದ್ದು, ಟೆಂಡರ್ ನೀಡಿರುವುದನ್ನು ಅಮಾನ್ಯ ಎಂದು ಘೋಷಿಸಿದೆ.

ಸಕ್ಷಮ ಪ್ರಾಧಿಕಾರದಲ್ಲಿ ನೋಂದಾಯಿಸುವ ಕಾರ್ಯವಿಧಾನವನ್ನು ಅನುಸರಿಸದೆ ಕೇವಲ ಸಾರ್ವಜನಿಕ ಹಿತಾಸಕ್ತಿಯ ನೆಪವೊಡ್ಡಿ ಟೆಂಟರ್ ನೀಡುವುದು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾದುದು ಎಂದು ನ್ಯಾಯಪೀಠ ಹೇಳಿದೆ.

ಈ ಹಂತದಲ್ಲಿ ಮಧ್ಯಪ್ರವೇಶಿಸುವುದರಿಂದ ಯೋಜನೆ ಅನುಷ್ಠಾನದಲ್ಲಿ ವಿಳಂಬವಾಗುತ್ತದೆ ಎಂಬ ಬಿಎಚ್‌ಇಎಲ್‌ನ ವಾದವನ್ನು ನ್ಯಾಯಾಲಯ ನಿರಾಕರಿಸಿದೆ. ಟೆಂಡರ್ ರದ್ದುಗೊಳಿಸುವುದರಿಂದ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ಹೊರೆಯಾಗಲಿದ್ದು, ಈಗಾಗಲೇ ಶೇ 50ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂಬ ವಾದಕ್ಕೂ ಪೀಠ ಕಿವಿಗೊಡಲಿಲ್ಲ.

ಬಿಎಚ್ಇಎಲ್ ಟೆಂಡರ್ ಅನ್ನು ಕೋಲ್ಕತ್ತಾ ಮೂಲದ ಬಿಟಿಎಲ್ ಇಪಿಸಿ ಲಿಮಿಟೆಡ್‌ಗೆ ನೀಡಿತ್ತು. ಇದು ತೆಲಂಗಾಣದಲ್ಲಿ ಶಾಖೋತ್ಪನ್ನ ವಿದ್ಯುತ್ ಘಟಕವನ್ನು ಸ್ಥಾಪಿಸುವ ಸಲುವಾಗಿ 378 ಕೋಟಿ ರೂ. ಮೌಲ್ಯದ ಬೂದಿ ನಿರ್ವಹಣೆ ಘಟಕವನ್ನು ಸ್ಥಾಪಿಸಲು 2022 ರಲ್ಲಿ ಚೀನಾದ ಕಂಪನಿಯಾದ ಫುಜಿಯಾನ್ ಲಾಂಗ್‌ಕಿಂಗ್ ಕಂ. ಲಿಮಿಟೆಡ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಮತ್ತು ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ಅವರಿದ್ದ ವಿಭಾಗೀಯ ಪೀಠ ಈ ಕುರಿತು ಆದೇಶ ಹೊರಡಿಸಿದೆ.

ಚೀನಾದ ಕಂಪನಿಯೊಂದಿಗೆ ಸಂಪರ್ಕ ಹೊಂದಿರುವ ಕಂಪನಿಗೆ ಟೆಂಡರ್ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು 2022ರಲ್ಲಿ ಏಕಸದಸ್ಯ ಪೀಠ ರದ್ದುಗೊಳಿಸಿತ್ತು. ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ನೋಯ್ಡಾ ಮೂಲದ ಕಂಪನಿಯಾದ ಮಕಾಬರ್ ಬೀಕೆ ಪ್ರೈವೇಟ್ ಲಿಮಿಟೆಡ್ (Macawber Beekay Private Limited) ಅರ್ಜಿ ಸಲ್ಲಿಸಿದೆ. 

ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಭಾರತದೊಂದಿಗೆ ಗಡಿಯನ್ನು ಹಂಚಿಕೊಳ್ಳುವ ದೇಶದ ಹೊರಗಿನ ಬಿಡ್‌ದಾರರು ಯಾವುದೇ ಒಪ್ಪಂದ ಮಾಡಿಕೊಳ್ಳುವ ಮುನ್ನ ಸಂಬಂಧಿಸಿದ ಸಕ್ಷಮ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ ಎಂದು ಒತ್ತಿಹೇಳಿದೆ.

ಬಿಎಚ್‌ಇಎಲ್ ಟೆಂಡರ್ ನೀಡುವ ಮುನ್ನ ಹಣಕಾಸು ಸಚಿವಾಲಯ 2020ರ ಜುಲೈ 23ರಂದು ರಾಷ್ಟ್ರದ ರಕ್ಷಣಾ ಆಸಕ್ತಿ ಕುರಿತು ಹೊರಡಿಸಿರುವ ಆದೇಶವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಿತ್ತು ಎಂದು ನ್ಯಾಯಾಲಯವು ಉಲ್ಲೇಖಿಸಿದೆ. ಬಿಡ್‌ಗೆ ತಾಂತ್ರಿಕವಾಗಿ ಅರ್ಹವಲ್ಲದ BTC EPC Ltd ಕಂಪನಿಯು ಚೀನಾದ ಫುಜಿಯಾನ್ ಲಾಂಗ್‌ಕಿಂಗ್ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿರುವುದು ಸರಿಯಲ್ಲ. ಕಂಪನಿಯ ನೋಂದಣಿ ವೇಳೆ ಕಡ್ಡಾಯ ನಿಯಮಗಳು ಪಾಲನೆಯಾಗಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಬಿಟಿಎಲ್ ಇಪಿಸಿ ಲಿಮಿಟೆಡ್‌ನ ಪರ ವಕೀಲರು, ಬಿಡ್‌ನಲ್ಲಿ ಭಾಗವಹಿಸಿದ್ದ ಏಕೈಕ ಕಂಪನಿ ಇದಾಗಿತ್ತು ಮತ್ತು ಚೀನೀ ಕಂಪನಿಯೊಂದಿಗಿನ ತನ್ನ ಒಪ್ಪಂದವು ಕೇವಲ ವಿನ್ಯಾಸ ಮತ್ತು ಎಂಜಿನಿಯರಿಂಗ್ ಒದಗಿಸುವುದಕ್ಕೆ ಮೀಸಲು ಎಂದು ಸಮರ್ಥಿಸಿಕೊಂಡರು. ಆದರೆ, ಪೀಠವು ಈ ವಾದವನ್ನು ಒಪ್ಪಲಿಲ್ಲ.

ಚೀನಾ ಕಂಪನಿಯ ಸಂಪರ್ಕ ಹೊಂದಿದ್ದ ಕಂಪನಿಗೆ ಟೆಂಡರ್ ನೀಡಿದ್ದ ಬಿಎಚ್‌ಇಎಲ್ ಕ್ರಮ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ನೋಯ್ಡಾ ಮೂಲದ ಕಂಪನಿಯಾದ ಮಕಾಬರ್ ಬೀಕೆ ಪ್ರೈವೇಟ್ ಲಿಮಿಟೆಡ್ (Macawber Beekay Private Limited) ನ ಬಿಡ್ ಅನ್ನು ಪರಿಗಣಿಸುವಂತೆ ಪೀಠವು ಬಿಎಚ್‌ಇಎಲ್‌ಗೆ ಸೂಚಿಸಿದೆ. 

ಅಲ್ಲದೆ, ಈ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಬಿಎಚ್‌ಇಎಲ್‌ಗೆ ನಾಲ್ಕು ವಾರಗಳ ಕಾಲಾವಕಾಶವನ್ನೂ ಪೀಠವು ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

SCROLL FOR NEXT