ಸಾಂದರ್ಭಿಕ ಚಿತ್ರ 
ರಾಜ್ಯ

ಇ-ಸಂಜೀವನಿ ಮೂಲಕ ವೈದ್ಯರೊಂದಿಗೆ ಟೆಲಿ ಸಮಾಲೋಚನೆ: ಕರ್ನಾಟಕಕ್ಕೆ 4ನೇ ಸ್ಥಾನ

2020 ರಲ್ಲಿ ಆರಂಭವಾದ ಕೇಂದ್ರ ಸರ್ಕಾರದ ಇ-ಸಂಜೀವನಿ ಯೋಜನೆ ಅಡಿ ರಾಜ್ಯದಲ್ಲಿ 1.32 ಕೋಟಿ ಜನರಿಗೆ ಟೆಲಿ ಸಮಾಲೋಚನೆ ನೀಡಲಾಗಿದ್ದು, ಈ ಮೂಲಕ ದೇಶದಲ್ಲಿಯೇ ಯೋಜನೆಯ ಅತಿ ಹೆಚ್ಚು ಲಾಭ ಪಡೆದ ನಾಲ್ಕನೇ ರಾಜ್ಯವಾಗಿ...

ಬೆಂಗಳೂರು: 2020 ರಲ್ಲಿ ಆರಂಭವಾದ ಕೇಂದ್ರ ಸರ್ಕಾರದ ಇ-ಸಂಜೀವನಿ ಯೋಜನೆ ಅಡಿ ರಾಜ್ಯದಲ್ಲಿ 1.32 ಕೋಟಿ ಜನರಿಗೆ ಟೆಲಿ ಸಮಾಲೋಚನೆ ನೀಡಲಾಗಿದ್ದು, ಈ ಮೂಲಕ ದೇಶದಲ್ಲಿಯೇ ಯೋಜನೆಯ ಅತಿ ಹೆಚ್ಚು ಲಾಭ ಪಡೆದ ನಾಲ್ಕನೇ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ.

ಉಪನಿರ್ದೇಶಕ (ಇ-ಹೆಲ್ತ್) ಡಾ. ಅರುಣ್ ಕುಮಾರ್ ಮಾತನಾಡಿ, ರಾಜ್ಯವು ಟೆಲಿಕನ್ಸಲ್ಟೇಶನ್‌ಗಳಿಂದ ಉತ್ತಮ ಲಾಭ ಪಡೆಯುತ್ತಿದೆ ಮತ್ತು ರೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಟೆಲಿಕನ್ಸಲ್ಟೇಶನ್‌ ಹೇಗೆ ಸಹಾಯ ಮಾಡಿದೆ ಎಂಬುದನ್ನು ತಿಳಿದುಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ. ಅಧ್ಯಯನ ಮಾಡಲು ಹಣದ ಅವಶ್ಯಕತೆ ಇದೆ, ಆದ್ದರಿಂದ ನಾವು ಅದನ್ನು ಇನ್ನೂ ಪ್ರಾರಂಭಿಸಿಲ್ಲ ಎಂದಿದ್ದಾರೆ.

ರಾಜ್ಯ ಆರೋಗ್ಯ ಇಲಾಖೆಯು ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಒಟ್ಟು 1.32 ಕೋಟಿ ಟೆಲಿಕನ್ಸಲ್ಟೇಶನ್‌ಗಳಲ್ಲಿ 35 ಲಕ್ಷಕ್ಕೂ ಹೆಚ್ಚು ಜನ ನೇರ ಆನ್‌ಲೈನ್ ಒಪಿಡಿ ಸಮಾಲೋಚನೆ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ. ಉಳಿದ 96.81 ಲಕ್ಷ ಜನ ಅನೇಕ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ವೈದ್ಯರು ಮತ್ತು ದಾದಿಯರೊಂದಿಗೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಿದ್ದಾರೆ.

ಆನ್‌ಲೈನ್ ಸಮಾಲೋಚನೆಗಳ ಸೌಲಭ್ಯವು ದೂರದ ಪ್ರದೇಶಗಳಲ್ಲಿನ ಜನರಿಗೆ ಸಹಾಯ ಮಾಡಿದೆ ಏಕೆಂದರೆ. ಅವರು ಈಗ ವಿಶೇಷವಾಗಿ ತುರ್ತು ಸಂದರ್ಭಗಳಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿದೆ ಎಂದು ಡಾ. ಅರುಣ್ ಕುಮಾರ್ ಅವರು ವಿವರಿಸಿದ್ದಾರೆ.

ಈ ಪ್ರಯೋಜನಗಳ ಹೊರತಾಗಿಯೂ, ರೋಗಿಗಳು ನಿಖರವಾಗಿ ಹೇಗೆ ಪ್ರಯೋಜನ ಪಡೆಯುತ್ತಿದ್ದಾರೆ ಎಂಬುದನ್ನು ಗುರುತಿಸುವಲ್ಲಿ ಕರ್ನಾಟಕ ಹಲವು ತೊಂದರೆಗಳನ್ನು ಎದುರಿಸುತ್ತಿದೆ. ಸೌಲಭ್ಯಗಳ ಕೊರತೆಯಿಂದಾಗಿ ನಿರ್ಲಕ್ಷಿಸಲ್ಪಡುವ ರೋಗಿಗಳನ್ನು ಟೆಲಿಕನ್ಸಲ್ಟೇಶನ್‌ ಮೂಲಕ ಅವರ ಸಮಸ್ಯೆ ಪರಿಹರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?