ಬೆಂಗಳೂರು-ಮೈಸೂರು ಪ್ರವೇಶ ನಿಯಂತ್ರಿತ ಹೆದ್ದಾರಿ(B-MACH) 
ರಾಜ್ಯ

ವಾಹನ ಚಾಲನೆ ಒಂದು ಕಲೆ, ಕೌಶಲ್ಯ ಮಾತ್ರವಲ್ಲ ಜವಾಬ್ದಾರಿ ಕೂಡ; ಎಚ್ಚರ ತಪ್ಪಿದರೆ ಜೀವಕ್ಕೆ ಮಾರಕ ಎಂದು ತೋರಿಸಿದ B-MACH

ಕಳೆದ ಜನವರಿಯಿಂದ 118 ಕಿಲೋ ಮೀಟರ್ ಉದ್ದದ ದಶಪಥ ಬೆಂಗಳೂರು-ಮೈಸೂರು ಪ್ರವೇಶ ನಿಯಂತ್ರಿತ ಹೆದ್ದಾರಿ(B-MACH)ಯಲ್ಲಿ ಸಂಚರಿಸುವಾಗ ಅಪಘಾತಕ್ಕೀಡಾಗಿ ಇಲ್ಲಿಯವರೆಗೆ ಸುಮಾರು 140 ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಪ್ರವೇಶ ನಿಯಂತ್ರಿತ ಹೆದ್ದಾರಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಳೆದ ಮಾರ್ಚ್ 12ರಂದು ಉದ್ಘಾಟಿಸಿ ಹೋಗಿದ್ದರು.

By Nirad Mudur

ಬೆಂಗಳೂರು/ಮೈಸೂರು: ಕಳೆದ ಜನವರಿಯಿಂದ 118 ಕಿಲೋ ಮೀಟರ್ ಉದ್ದದ ದಶಪಥ ಬೆಂಗಳೂರು-ಮೈಸೂರು ಪ್ರವೇಶ ನಿಯಂತ್ರಿತ ಹೆದ್ದಾರಿ(B-MACH-Bengaluru-Mysuru Access Controlled Highway)ಯಲ್ಲಿ ಸಂಚರಿಸುವಾಗ ಅಪಘಾತಕ್ಕೀಡಾಗಿ ಇಲ್ಲಿಯವರೆಗೆ ಸುಮಾರು 140 ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಪ್ರವೇಶ ನಿಯಂತ್ರಿತ ಹೆದ್ದಾರಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಳೆದ ಮಾರ್ಚ್ 12ರಂದು ಉದ್ಘಾಟಿಸಿದ್ದರು.

ಪ್ರಧಾನಿಯವರು ರಸ್ತೆಯನ್ನು ಉದ್ಘಾಟಿಸಿದ ಬೆನ್ನಲ್ಲೇ ಭಾರೀ ಮಳೆ ಸುರಿದು ಹಿಂದೆ ಎಕ್ಸ್ ಪ್ರೆಸ್ ವೇ ಎಂದು ಕರೆಸಿಕೊಳ್ಳುತ್ತಿದ್ದ ಬೆಂಗಳೂರು-ಮೈಸೂರು ಪ್ರವೇಶ ನಿಯಂತ್ರಿತ ಹೆದ್ದಾರಿಯ ಹಲವು ಕಡೆಗಳಲ್ಲಿ ನೀರು ತುಂಬಿಕೊಂಡಿತು. ಕೆಲವು ಕಡೆ ಹೆದ್ದಾರಿ ಹಾಳಾಗಿ ಸರಿಪಡಿಸಬೇಕಾಗಿ ಬಂತು. ಆಗ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಹೊತ್ತು. ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಗೆ ಇದು ಚುನಾವಣಾ ಅಸ್ತ್ರವಾಯಿತು. ಡಬಲ್ ಎಂಜಿನ್ ಬಿಜೆಪಿ ಸರ್ಕಾರದ ಮೇಲೆ ಆರೋಪಗಳ ಸುರಿಮಳೆಗೈಯಿತು. ವೈಜ್ಞಾನಿಕ ಯೋಜನೆಯಿಲ್ಲದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆಯನ್ನು ನಿರ್ಮಿಸಿದೆ ಎಂದು ಆರೋಪಿಸಿತು. ಪದೇ ಪದೇ ಅಪಘಾತಗಳು, ಸಾವು-ನೋವುಗಳು ಸಂಭವಿಸುತ್ತಿದ್ದವು.

ಅಜಾಗರೂಕತೆ, ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ: ಚಾಲಕರ ಅಜಾಗರೂಕತೆಯ ವೇಗದ ಅನಿಯಂತ್ರಿತ ಚಾಲನೆಯೇ ಹೆಚ್ಚೆಚ್ಚು ಅಪಘಾತಕ್ಕೆ ಕಾರಣವೇ ಹೊರತು ಹೆದ್ದಾರಿಯನ್ನು ವೈಜ್ಞಾನಿಕವಾಗಿ ಯೋಜನೆ ಮಾಡಿ ನಿರ್ಮಿಸದಿರುವುದು ಎಂಬುದಲ್ಲ ಎಂದು ಪೊಲೀಸ್ ಅಧಿಕಾರಿಗಳು, ತಜ್ಞರು ಹೇಳುತ್ತಿದ್ದರು. ಗರಿಷ್ಠ ವೇಗದ ಮಿತಿಯನ್ನು ಪಾಲಿಸುವುದು ಚಾಲಕರ ಕರ್ತವ್ಯವಾಗಿದೆ. ಅಂತಿಮವಾಗಿ ಅಪಘಾತವಾಗುವುದು ಚಾಲಕರ ಚಾಲನಾ ರೀತಿಯ ಮೇಲೆ ಅವಲಂಬಿತವಾಗಿದೆ ಎಂದು ತಜ್ಞರ ಅಭಿಪ್ರಾಯವಾಗಿತ್ತು.

ನಿಧಾನ ರೇಖೆ, ವೇಗದ ರೇಖೆ ಮತ್ತೊಂದು ಕಾರಣ: ಬೆಂಗಳೂರು-ಮೈಸೂರು ಪ್ರವೇಶ ನಿಯಂತ್ರಿತ ಹೆದ್ದಾರಿಯಲ್ಲಿ ಅಪಘಾತ ಹೆಚ್ಚಲು ಮತ್ತೊಂದು ಪ್ರಮುಖ ಕಾರಣ ವೇಗದ ರೇಖೆಯಲ್ಲಿ ನಿಧಾನವಾಗಿ ಚಲಿಸುವ ವಾಹನಗಳು ಕಂಡುಬರುತ್ತವೆ, ವೇಗವಾಗಿ ಚಲಿಸುವ ವಾಹನಗಳು ನಿಧಾನವಾದ ಲೇನ್‌ಗೆ ತಿರುಗುವಂತೆ ಮಾಡುವುದರಿಂದ  ಅವುಗಳಿಗೆ ಹಿಂದಿನಿಂದ ಬರುವ ವಾಹನಗಳ ವೇಗ ಗ್ರಹಿಸಲು ಸಮಸ್ಯೆಯಾಗುತ್ತದೆ. ಅನೇಕ ಚಾಲಕರು ಸೂಕ್ತವಾದ ವೇಗದ ಲೇನ್‌ಗಳಲ್ಲಿ ಉಳಿಯುವ ಅಗತ್ಯತೆ ಬಗ್ಗೆ ಅಜ್ಞಾನವನ್ನು ಹೊಂದಿದ್ದಾರೆ, ಆದರೆ ಹಲವಾರು ವಾಹನ ಚಾಲಕರು ಗರಿಷ್ಠ ವೇಗದ ಮಿತಿಯನ್ನು ಕಡ್ಡಾಯವಾಗಿ ಮುಟ್ಟಬೇಕು ಎಂಬ ಭಾವನೆ ಹೊಂದಿದ್ದರೆ, ಅನೇಕರು ಆ ಮಿತಿಯನ್ನು ಮೀರಿ ವೇಗವಾಗಿ ಚಲಿಸುತ್ತಾರೆ. ಇವೆಲ್ಲವೂ ದುರಂತಕ್ಕೆ ಕಾರಣವಾಗಿರುತ್ತವೆ.

ಬೆಂಗಳೂರು-ಮೈಸೂರು ಪ್ರವೇಶ ನಿಯಂತ್ರಿತ ಹೆದ್ದಾರಿಯನ್ನು ಇದುವರೆಗೆ ಎಕ್ಸ್ ಪ್ರೆಸ್ ವೇ ಎಂದೇ ಮೋಟಾರು ವಾಹನ ಚಾಲಕರು ನಂಬುತ್ತಿದ್ದರು. ವೇಗದ ಮಿತಿ ಪ್ರತಿ ಗಂಟೆಗೆ 120 ಕಿಲೋ ಮೀಟರ್ ಎಂದೇ ಭಾವಿಸುತ್ತಾರೆ. ಆದರೆ ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸ್ಪಷ್ಟನೆ ನೀಡಿ ಇದು ಪ್ರವೇಶ ನಿಯಂತ್ರಿತ ಹೆದ್ದಾರಿಯಾಗಿದ್ದು ವೇಗದ ಮಿತಿ 100 ಕಿಲೋ ಮೀಟರ್ ಆಗಿದೆ ಎಂದು ಸ್ಪಷ್ಟನೆ ನೀಡಿದ್ದರು.

ಚಾಲಕರು ಮತ್ತು ಸವಾರರು ಶಿಸ್ತುಬದ್ಧವಾಗಿ, ವೇಗದ ಮಿತಿಯೊಳಗೆ ವಾಹನ ಚಲಾಯಿಸಿದಿದ್ದರೆ ಮತ್ತು ಅವರ ವೇಗ ಮತ್ತು ವಾಹನಗಳ ಪ್ರಕಾರಕ್ಕೆ ಆಯಾ ಲೇನ್‌ಗಳಲ್ಲಿ ಸಂಚರಿಸಿದರೆ, ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು ಮತ್ತು ಟ್ರ್ಯಾಕ್ಟರ್‌ಗಳನ್ನು ನಿಷೇಧಿಸುವ ಯಾವುದೇ ಅಗತ್ಯವಿರುತ್ತಿರಲಿಲ್ಲ. ಆಗಸ್ಟ್ 1 ರಿಂದ ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ ಬೆಂಗಳೂರು-ಮೈಸೂರು ಪ್ರವೇಶ ನಿಯಂತ್ರಿತ ಹೆದ್ದಾರಿಯಲ್ಲಿ ಸಂಚಾರ ನಿಷೇಧಿಸಲಾಗಿದೆ. 

ಬೆಂಗಳೂರು-ಮೈಸೂರು ಪ್ರವೇಶ ನಿಯಂತ್ರಿತ ಹೆದ್ದಾರಿಯಲ್ಲಿ ಜುಲೈ ತಿಂಗಳಲ್ಲಿ ಎಂಟು ಸಾವುಗಳು ಸಂಭವಿಸಿವೆ, ಮೇನಲ್ಲಿ 29 ಮತ್ತು ಜೂನ್‌ನಲ್ಲಿ 28 ಸಾವುಗಳಾಗಿವೆ. B-MACH ನ ಮುಖ್ಯ ರಸ್ತೆಯಲ್ಲಿ ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು ಮತ್ತು ಟ್ರ್ಯಾಕ್ಟರ್‌ಗಳನ್ನು ನಿಷೇಧಿಸುವುದರೊಂದಿಗೆ ಹಲವಾರು ಪ್ರಶ್ನೆಗಳು ಎದ್ದಿವೆ.

ವಾಹನ ಚಾಲನೆ ಒಂದು ಕಲೆ ಮತ್ತು ಕೌಶಲ್ಯ, ಜವಾಬ್ದಾರಿಯಿಂದ ಕೂಡಿದೆ ಎಂಬುದನ್ನು ನೆನಪಿನಲ್ಲಿಡಬೇಕು. ಬೇಜವಾಬ್ದಾರಿಯಿಂದ ಬಳಸಿದರೆ, ಎಕ್ಸ್‌ಪ್ರೆಸ್‌ವೇಗಳು ಅಥವಾ ಹೆದ್ದಾರಿಗಳಲ್ಲಿ, ವಾಹನವು ಮಾರಣಾಂತಿಕ ಅಸ್ತ್ರವಾಗಿ ರೂಪಾಂತರಗೊಳ್ಳಬಹುದು, ಅದು ಇತರರ ಜೀವಗಳನ್ನು ಮಾತ್ರ ಕಸಿದುಕೊಳ್ಳುವುದಲ್ಲದೆ ನಿಮ್ಮ ಪ್ರಾಣವನ್ನು ಕೂಡ ತೆಗೆಯಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ತ್ರಿಪುರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ: ಉನಕೋಟಿಯಲ್ಲಿ ಮಸೀದಿ-ಮುಸ್ಲಿಂ ಅಂಗಡಿಗಳಿಗೆ ಬೆಂಕಿ

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

SCROLL FOR NEXT