ಟ್ರಕ್ ಗೆ ಹಿಂಬದಿಯಿಂದ ಬಂದು ಕಾರು ಡಿಕ್ಕಿ ಹೊಡೆದಿರುವುದು 
ರಾಜ್ಯ

ಚಿತ್ರದುರ್ಗದಲ್ಲಿ ರಸ್ತೆ ಅಪಘಾತ: ಐವರು ಸಾವು, ಮೂವರಿಗೆ ಗಾಯ

ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50ಎ ಮಲ್ಲಾಪುರ ಸೇತುವೆ ಮೇಲೆ ಇಂದು ಭಾನುವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.

ಚಿತ್ರದುರ್ಗ: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50ಎ ಮಲ್ಲಾಪುರ ಸೇತುವೆ ಮೇಲೆ ಇಂದು ಭಾನುವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.

ಟ್ರಕ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದೆ. ಎಡಪಥದಲ್ಲಿ (ಟ್ರಕ್ ಲೇನ್) ಚಲಿಸುತ್ತಿದ್ದ ಟ್ರಕ್‌ಗೆ ಹಿಂಬದಿಯಲ್ಲಿ ಅತಿ ವೇಗದಲ್ಲಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರು ನಜ್ಜುಗುಜ್ಜಾಗಿದೆ.

ಮೃತರು ಭೀಮಾಶಂಕರ (26), ಕಾರು ಚಲಾಯಿಸಿದ ಸಂಗಣ್ಣ ಬಸಪ್ಪ (36), ಸಂಗನ ಬಸಪ್ಪ ಅವರ ಪತ್ನಿ ರೇಖಾ (29) ಮತ್ತು ಸಂಗಣ್ಣ ಬಸಪ್ಪ ಅವರ ಪುತ್ರ ಅಗಸ್ತ್ಯ (ಸಂಗಣ್ಣ ಅವರ ಪುತ್ರಿ ಅನ್ವಿತಾ (6) ಮತ್ತು ಆದರ್ಶ (4) ಗಾಯಗೊಂಡವರು. ಬಸಪ್ಪ ಹಾಗೂ 26 ವರ್ಷದ ಮತ್ತೊಬ್ಬರು ತೀವ್ರ ಗಾಯಗೊಂಡು ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಿತ್ರದುರ್ಗ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಕೆ ಪ್ರಕಾರ, ಕಾರು ವಿಜಯಪುರದಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದು, ಪ್ರವಾಸಕ್ಕೆಂದು ಕುಟುಂಬ ತೆರಳುತ್ತಿದ್ದರು. ಟ್ರಕ್ ಹೊಸಪೇಟೆಯಿಂದ ಬೆಂಗಳೂರಿಗೆ ತೆರಳುತ್ತಿತ್ತು. ಕಾರು ಚಾಲಕ ಬ್ರೇಕ್ ಹಾಕದೆ ಡಿಕ್ಕಿ ಹೊಡೆದಿದೆ. 

ಸಂಗಣ್ಣ ಬಸಪ್ಪ ಮತ್ತು ಅವರ ಸಂಬಂಧಿ ಈರಣ್ಣ ಅವರ ಕುಟುಂಬ ಚಿಕ್ಕಮಗಳೂರಿಗೆ ಕುಟುಂಬ ಪ್ರವಾಸಕ್ಕೆ ಬಂದಿದ್ದು, ಈರಣ್ಣ ಅವರ ಕುಟುಂಬ ಮತ್ತೊಂದು ಕಾರಿನಲ್ಲಿ ಪ್ರಯಾಣಿಸುತ್ತಿತ್ತು. ಘಟನೆ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

5,000 ಕೊಟ್ಟರೂ ತಗೋಳಿ, ಆದರೆ ಅವರಿಗೆ ಶಿಳ್ಳೆ ಹೊಡೆದು ಹೇಳಿ': DMK ವಿರುದ್ಧ TVK ಮುಖ್ಯಸ್ಥ ವಿಜಯ್ ವಾಗ್ದಾಳಿ

ಚುನಾವಣೆ ಹೊಸ್ತಿಲಲ್ಲೇ TN ಮಹಿಳೆಯರಿಗೆ ಬಂಪರ್: 1.31 ಕೋಟಿ ಖಾತೆಗಳಿಗೆ 5 ಸಾವಿರ ಜಮೆ; ಮತ್ತೆ ಅಧಿಕಾರಕ್ಕೆ ಬಂದರೆ 2 ಸಾವಿರ - ಸಿಎಂ ಸ್ಟಾಲಿನ್

ನೆಹರು ಯಾಕೆ ಚೀನಾದೊಂದಿಗೆ 'ಪಂಚಶೀಲ' ಒಪ್ಪಂದ ಮಾಡಿಕೊಂಡ್ರು ಗೊತ್ತಾ? CDS ಅನಿಲ್ ಚೌಹಾಣ್ ಹೇಳಿದ್ದು ಹೀಗೆ..

T20 World Cup 2026: ಭಾರತ vs ಪಾಕಿಸ್ತಾನ ಹೈ ವೋಲ್ಟೇಜ್ ಪಂದ್ಯಕ್ಕೆ ಮಳೆ ಅಡ್ಡಿ?; ಎಚ್ಚರಿಕೆ ಕೊಟ್ಟ ಶ್ರೀಲಂಕಾ ಹವಾಮಾನ ಇಲಾಖೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL ಪಂದ್ಯಗಳಿಗಷ್ಟೇ ತಾತ್ವಿಕ ಒಪ್ಪಿಗೆ, ಸಂಭ್ರಮಾಚರಣೆಗೆ ಬ್ರೇಕ್?: ಪರಮೇಶ್ವರ ಹೇಳಿದ್ದೇನು?

SCROLL FOR NEXT