ಚಂದ್ರಯಾನ-3 ಯಶಸ್ಸಿನ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಇಸ್ರೊ ಅಧ್ಯಕ್ಷ ಎಸ್ ಸೋಮನಾಥ್ 
ರಾಜ್ಯ

'ಭವಿಷ್ಯದಲ್ಲಿ ನಾವು ಮಂಗಳ, ಶುಕ್ರ ಸೇರಿದಂತೆ ಇತರ ಗ್ರಹಗಳಿಗೂ ಹೋಗಬಹುದು': ಇಸ್ರೊ ಅಧ್ಯಕ್ಷ ಎಸ್ ಸೋಮನಾಥ್

ಚಂದ್ರಯಾನ-3 ಮಿಷನ್ ಯಶಸ್ವಿಯಾಗಿದೆ. ಲ್ಯಾಂಡರ್ 'ವಿಕ್ರಮ್' ಮತ್ತು ರೋವರ್ 'ಪ್ರಜ್ಞಾನ್' ನ್ನು ಹೊತ್ತ ಉಡಾವಣಾ ವಾಹನ ಚಂದ್ರನ ಮೇಲ್ಮೈಯನ್ನು ಮೃದುವಾಗಿ ಸುರಕ್ಷಿತವಾಗಿ ಸ್ಪರ್ಶಿಸಿದೆ. 

ಬೆಂಗಳೂರು: ಚಂದ್ರಯಾನ-3 ಮಿಷನ್ ಯಶಸ್ವಿಯಾಗಿದೆ. ಲ್ಯಾಂಡರ್ 'ವಿಕ್ರಮ್' ಮತ್ತು ರೋವರ್ 'ಪ್ರಜ್ಞಾನ್' ನ್ನು ಹೊತ್ತ ಉಡಾವಣಾ ವಾಹನ ಚಂದ್ರನ ಮೇಲ್ಮೈಯನ್ನು ಮೃದುವಾಗಿ ಸುರಕ್ಷಿತವಾಗಿ ಸ್ಪರ್ಶಿಸಿದೆ. 

ಇಸ್ರೊ ಅಧ್ಯಕ್ಷ ಎಸ್ ಸೋಮನಾಥ್ ಅವರು ನೌಕೆಯನ್ನು ಚಂದ್ರನ ಮೇಲ್ಮೈ ಮೇಲೆ ಯಶಸ್ವಿಯಾಗಿ ಇಳಿಸಿದ ಯಶಸ್ಸಿನ ಸವಿಯನ್ನು ಸವಿದಿದ್ದಾರೆ. ಯಾವುದೇ ಯಶಸ್ಸು, ಸಂತೋಷ ಮನುಷ್ಯನ ಜೀವನದಲ್ಲಿ ಸಿಗಬೇಕಾದರೆ ಅದರ ಹಿಂದೆ ಸಾಕಷ್ಟು ಪರಿಶ್ರಮ, ಸತತ ಪ್ರಯತ್ನ, ನೋವು ಎಲ್ಲವೂ ಇರುತ್ತದೆ. 

ನಿನ್ನೆ ಸೋಮನಾಥ್ ಅವರು ಸಹ ಇದೇ ಮಾತುಗಳನ್ನು ಹೇಳಿದ್ದಾರೆ. ಚಂದ್ರಯಾನ-3ರ ಯಶಸ್ಸಿನ ಪಯಣದಲ್ಲಿ ಅಪಾರ ವಿಜ್ಞಾನಿಗಳ ನೋವು ಮತ್ತು ಸಂಕಟ ಅಡಗಿದೆ ಎಂಬ ಮಾತುಗಳನ್ನು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಬಾಹ್ಯಾಕಾಶ ಸಂಸ್ಥೆ ಮಂಗಳ ಗ್ರಹದಲ್ಲಿ ಬಾಹ್ಯಾಕಾಶ ನೌಕೆಯನ್ನು ಇಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಚಂದ್ರಯಾನ-3 ಮಿಷನ್‌ನ ಯಶಸ್ಸಿಗೆ ದೇಶದ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಗಳ ನಾಯಕತ್ವದ ಪೀಳಿಗೆಯ ಕೊಡುಗೆಯನ್ನು ಅವರು ಒಪ್ಪಿಕೊಂಡಿದ್ದಾರೆ. ಚಂದ್ರನತ್ತ ಪ್ರಯಾಣವು ಕಠಿಣವಾಗಿದೆ ಮತ್ತು ಸಾಫ್ಟ್ ಲ್ಯಾಂಡಿಂಗ್ ಯಾವುದೇ ರಾಷ್ಟ್ರವು ಇಂದು ತಂತ್ರಜ್ಞಾನದ ಪ್ರಗತಿಯೊಂದಿಗೆ ಸಾಧಿಸುವುದು ಕಷ್ಟಕರವಾಗಿದೆ ಎಂದು ಅವರು ಹೇಳಿದರು, ಭಾರತವು ಅದನ್ನು ಕೇವಲ ಎರಡು ಕಾರ್ಯಾಚರಣೆಗಳಲ್ಲಿ ಸಾಧಿಸಿದೆ ಎಂದು ತಿಳಿಸಿದರು.

ಚಂದ್ರಯಾನ-2, ಚಂದ್ರನ ಮೇಲೆ ಮೃದುವಾಗಿ ಇಳಿಯುವ ಉದ್ದೇಶದೊಂದಿಗೆ ಮೊದಲ ಮಿಷನ್ ಸಣ್ಣ ತಪ್ಪು ಮಾಡಿತ್ತು. ಆದರೆ ಚಂದ್ರಯಾನ-3 ಮಿಷನ್ ಸಂಪೂರ್ಣವಾಗಿ ಕಾರ್ಯಗತಗೊಳಿಸಲಾಯಿತು. ಚಂದ್ರಯಾನ-1 ರ ಉದ್ದೇಶ ಚಂದ್ರನ ಸುತ್ತಲಿನ ಕಕ್ಷೆಯಲ್ಲಿ ಮಾನವರಹಿತ ಬಾಹ್ಯಾಕಾಶ ನೌಕೆಯನ್ನು ಇರಿಸುವುದು ಮಾತ್ರವಾಗಿತ್ತು. 

ಇದು (ಚಂದ್ರಯಾನ-3 ಮಿಷನ್‌ನ ಯಶಸ್ಸು) ಚಂದ್ರನಿಗೆ ಹೋಗಲು ಮಾತ್ರವಲ್ಲ, ಮಂಗಳಕ್ಕೆ ಹೋಗಲು, ಕೆಲವೊಮ್ಮೆ ಮಂಗಳದ ಮೇಲೆ ಇಳಿಯಲು, ಭವಿಷ್ಯದಲ್ಲಿ ಶುಕ್ರ ಮತ್ತು ಇತರ ಗ್ರಹಗಳಿಗೆ ಹೋಗಲು ಭಾರತದ ವಿಜ್ಞಾನಿಗಳಿಗೆ ಹೆಚ್ಚು ಬಲ ನೀಡುತ್ತದೆ. 

ಚಂದ್ರಯಾನ-2ರ ಹಿಂದಿರುವ ಪ್ರಮುಖ ವಿಜ್ಞಾನಿಗಳೂ ಚಂದ್ರಯಾನ-3 ತಂಡದ ಭಾಗವಾಗಿದ್ದರು ಎಂದು ಸೋಮನಾಥ್ ತಿಳಿಸಿದರು. ಚಂದ್ರಯಾನ-2 ರ ಜೊತೆಯಲ್ಲಿದ್ದ ಹೆಚ್ಚಿನವರು ಚಂದ್ರಯಾನ -3 ರ ಕಾರ್ಯಾಚರಣೆಯಲ್ಲಿ ನಮಗೆ ಸಹಾಯ ಮಾಡುತ್ತಿದ್ದಾರೆ. ಈ ಪಯಣದಲ್ಲಿ ವಿಜ್ಞಾನಿಗಳ ನೋವು, ಸಂಕಟ ಸಾಕಷ್ಟಿತ್ತು. ಚಂದ್ರಯಾನ -3 ನಲ್ಲಿ ನಾವು ಹೊಂದಿರುವ ತಂತ್ರಜ್ಞಾನವು ಸಂಕೀರ್ಣವಾಗಿತ್ತು. ಚಂದ್ರನಿಗೆ ಹೋಗುವ ಯಾವುದೇ ತಂತ್ರಜ್ಞಾನಕ್ಕಿಂತ ಕೆಳಮಟ್ಟದ್ದಾಗಿತ್ತು. ಆದ್ದರಿಂದ, ಚಂದ್ರಯಾನ-3 ರಲ್ಲಿ ನಾವು ವಿಶ್ವದ ಅತ್ಯುತ್ತಮ ಸಂವೇದಕಗಳನ್ನು ಹೊಂದಿದ್ದೆವು ಎಂದು ವಿವರಿಸಿದರು. ಇದು ಸಂಪೂರ್ಣವಾಗಿ 'ಮೇಡ್-ಇನ್- ಇಂಡಿಯಾ ವಿಶ್ವದರ್ಜೆಯ ಘಟಕಗಳನ್ನು ಬಳಸುವ ಭಾರತದ ಮಿಷನ್ ಆಗಿತ್ತು ಎಂದು ವಿವರಿಸಿದರು. 

ಇಸ್ರೋ ತಂಡಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಶುಭಾಶಯಗಳ ಬಗ್ಗೆ ಮಾತನಾಡಿದ ಇಸ್ರೊ ಅಧ್ಯಕ್ಷರು, ಪ್ರಧಾನಿಯವರು ನನಗೆ ಕರೆ ಮಾಡಿ ಇಸ್ರೋದಲ್ಲಿ ನೀವು ಮಾಡಿದ ಅದ್ಭುತ ಕಾರ್ಯಕ್ಕಾಗಿ ನೀವು ಮತ್ತು ನಿಮ್ಮ ವಿಜ್ಞಾನಿಗಳ ತಂಡದ ಪ್ರತಿಯೊಬ್ಬರಿಗೂ ಶುಭಾಶಯಗಳನ್ನು ತಿಳಿಸುತ್ತೇನೆ ಎಂದು ಎಂದು ಹೇಳಿದ್ದಾರೆ. 

ವೈಜ್ಞಾನಿಕ ಮತ್ತು ವಾಣಿಜ್ಯಿಕವಾಗಿ ಮತ್ತಷ್ಟು ಬಾಹ್ಯಾಕಾಶ ಯಾತ್ರೆಗಳನ್ನು ಮುಂದುವರಿಸಲು ಸರ್ಕಾರದ ಬೆಂಬಲದ ಕುರಿತು ಮಾತನಾಡಿದ ಅವರು, ""ಚಂದ್ರಯಾನ-3 ನಂತಹ ಮಿಷನ್‌ ಗಳಿಗೆ ಸಹಕರಿಸುತ್ತಿರುವ ಪ್ರಧಾನಿ ಮೋದಿ ಸೇರಿ ಸರ್ಕಾರಕ್ಕೆ ಧನ್ಯವಾದಗಳು.  ನಾವು ರಾಷ್ಟ್ರಕ್ಕಾಗಿ ಮಾಡುತ್ತಿರುವ ಸ್ಪೂರ್ತಿದಾಯಕ ಕೆಲಸವನ್ನು ಮುಂದುವರಿಸುವುದಕ್ಕಾಗಿ ನಾವು ಸ್ವೀಕರಿಸುತ್ತಿರುವ ಮಹಾನ್ ಸಾಂತ್ವನದ ಮಾತು ಇದಾಗಿದೆ ಎಂದರು. 

ಪ್ರಧಾನಮಂತ್ರಿಯವರು ದೀರ್ಘಾವಧಿ ದೃಷ್ಟಿಕೋನ ಹೊಂದಿದ್ದಾರೆ. ಬಾಹ್ಯಾಕಾಶ ಪರಿಶೋಧನೆ ಮತ್ತು ವಿಜ್ಞಾನದ ಕ್ಷೇತ್ರದಲ್ಲಿ ನಾವು ಬಹಳ ಪ್ರಬಲರಾಗುವುದನ್ನು ಅವರು ಬಯಸುತ್ತಿದ್ದಾರೆ. 

ಇಸ್ರೋದ ಮಹತ್ವಾಕಾಂಕ್ಷೆಯ ಮೂರನೇ ಚಂದ್ರನ ಮಿಷನ್ ಚಂದ್ರಯಾನ-3 ರ ಲ್ಯಾಂಡರ್ ಮಾಡ್ಯೂಲ್ (LM) ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸಿ, ಈ ಸಾಧನೆಯನ್ನು ಸಾಧಿಸಿದ ನಾಲ್ಕನೇ ದೇಶವಾಗಿದೆ. ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹದ ದಕ್ಷಿಣ ಧ್ರುವವನ್ನು ತಲುಪಿದ ಮೊದಲನೆ ದೇಶ ಭಾರತವಾಗಿದೆ ಎಂದು ಹೇಳಿದರು. 

ಲ್ಯಾಂಡರ್ (ವಿಕ್ರಮ್) ಮತ್ತು 26 ಕೆಜಿ ರೋವರ್ (ಪ್ರಜ್ಞಾನ್) ಒಳಗೊಂಡ ಎಲ್ಎಂ ಇಂದು ಸಂಜೆ ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಬಳಿ ಸಾಫ್ಟ್ ಲ್ಯಾಂಡಿಂಗ್ ಮಾಡಿದೆ.

ಇದು ಇಸ್ರೋದ ನಾಯಕತ್ವ ಮತ್ತು ವಿಜ್ಞಾನಿಗಳ ಪೀಳಿಗೆಯ ಕೆಲಸ ಎಂದು ಬಣ್ಣಿಸಿರುವ ಸೋಮನಾಥ್, ನಾವು ಚಂದ್ರಯಾನ -1 ರೊಂದಿಗೆ ಪ್ರಯಾಣ ಪ್ರಾರಂಭಿಸಿ, ಚಂದ್ರಯಾನ -2 ನಲ್ಲಿ ಮುಂದುವರಿಸಿದೆವು. ಚಂದ್ರಯಾನ -2 ಕ್ರಾಫ್ಟ್ ಇನ್ನೂ ಕಾರ್ಯನಿರ್ವಹಿಸುತ್ತಿದೆ ಮತ್ತು ಸಾಕಷ್ಟು ಸಂವಹನ ಕಾರ್ಯಗಳನ್ನು ಮಾಡುತ್ತಿದೆ. 

ಚಂದ್ರಯಾನ-1 ಮತ್ತು 2 ರ ನಿರ್ಮಾಣಕ್ಕೆ ಕೊಡುಗೆ ನೀಡಿದ ಎಲ್ಲಾ ತಂಡಗಳನ್ನು ಸ್ಮರಿಸಬೇಕು. ಈಗ ನಾವು ಚಂದ್ರಯಾನ -3 ರ ಯಶಸ್ಸನ್ನು ಆಚರಿಸುತ್ತೇವೆ. ಇದು ದೇಶದ ಹೆಚ್ಚುತ್ತಿರುವ ಪ್ರಗತಿಯನ್ನು ತೋರಿಸುತ್ತದೆ ಎಂದು ಸೋಮನಾಥ್ ಬಣ್ಣಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

US tariff deadline: ಅಮೆರಿಕದ ಶೇ. 50 ರಷ್ಟು ಸುಂಕ ಆಗಸ್ಟ್ 27 ರಿಂದ ಜಾರಿ; ಮಂಗಳವಾರ ಮಹತ್ವದ PMO ಸಭೆ; ಮೋದಿ ಹೇಳಿದ್ದೇನು? Video

SCROLL FOR NEXT