ಪ್ರಾತಿನಿಧಿಕ ಚಿತ್ರ 
ರಾಜ್ಯ

ತೆಲಂಗಾಣದ ಕಾಂಗ್ರೆಸ್ ನಾಯಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ ಕರ್ನಾಟಕ ಪೊಲೀಸರು!

ತೆಲಂಗಾಣದ ಕಾಂಗ್ರೆಸ್ ನಾಯಕನ ವಿರುದ್ಧ ಕರ್ನಾಟಕ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಕುಂಭಂ ಶಿವಕುಮಾರ್ ರೆಡ್ಡಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ರೆಡ್ಡಿ ಅವರು ತೆಲಂಗಾಣದ ನಾರಾಯಣಪೇಟೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದು, ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಬೆಂಗಳೂರು: ತೆಲಂಗಾಣದ ಕಾಂಗ್ರೆಸ್ ನಾಯಕನ ವಿರುದ್ಧ ಕರ್ನಾಟಕ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಕುಂಭಂ ಶಿವಕುಮಾರ್ ರೆಡ್ಡಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ರೆಡ್ಡಿ ಅವರು ತೆಲಂಗಾಣದ ನಾರಾಯಣಪೇಟೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದು, ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಕಬ್ಬನ್ ಪಾರ್ಕ್ ಪೊಲೀಸರು ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ರೆಡ್ಡಿ ವಿರುದ್ಧ ಎಫ್ಐಆರ್ ದಾಖಲಾಗಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ನಾರಾಯಣಪೇಟೆಯಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದ ರೆಡ್ಡಿ ಸೋಲು ಕಂಡಿದ್ದರು.

ಈ ಹಿಂದೆಯೂ ಅವರ ವಿರುದ್ಧ ಹೈದರಾಬಾದ್‌ನ ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ವಂಚನೆ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತನ್ನನ್ನು ಪಂಚತಾರಾ ಹೋಟೆಲ್‌ಗೆ ಕರೆಸಿಕೊಂಡು ಲೈಂಗಿಕ ಶೋಷಣೆ ಮಾಡಲಾಗಿತ್ತು. ತನ್ನ ನಗ್ನ ಚಿತ್ರಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿದು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. 

ಬೆಂಗಳೂರಿನಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

No shortage of fuel: ಹಾರ್ಮುಜ್ ಜಲಸಂಧಿ ತಲುಪಿಸಬಹುದಾದ ತೈಲಕ್ಕಿಂತ ಹೆಚ್ಚಿನದ್ದು ಬೇರೆಡೆಯಿಂದ ಭಾರತ ತಲುಪಿದೆ; ಪೆಟ್ರೋಲಿಯಂ ಸಚಿವ

ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ: ಇಂದಿರಾ, ದೇವೇಗೌಡ ಅಪ್ಪಾಜಿ ಕ್ಯಾಂಟೀನ್ ಬಂದ್!

ಇಂಧನ ಸುರಕ್ಷತೆ ಕುರಿತು ಇರಾನ್ ವಿದೇಶಾಂಗ ಸಚಿವರೊಂದಿಗೆ ಜೈಶಂಕರ್ ಮೂರು ಬಾರಿ ಮಾತುಕತೆ

ನೀವು ಮಿತಿ ಮೀರಿದ್ದೀರಿ: ಕನ್ನಡದಲ್ಲೇ ಎಚ್ಚರಿಕೆ ಕೊಟ್ಟ ರಶ್ಮಿಕಾ; ಸಂಕಷ್ಟದ ಸಮಯದಲ್ಲಿ ಕನ್ನಡವೇ ಬೇಕಾಯ್ತಾ? ಎಂದ ನೆಟ್ಟಿಗರು!

ಬಂಡೀಪುರ, ನಾಗರಹೊಳೆ ಸಫಾರಿ ತಾತ್ಕಾಲಿಕ ಸ್ಥಗಿತ ಸಮರ್ಥಿಸಿಕೊಂಡ ಖಂಡ್ರೆ; ಷರತ್ತುಬದ್ಧ ಆರಂಭ

SCROLL FOR NEXT