ರಾಮಲಿಂಗಾರೆಡ್ಡಿ 
ರಾಜ್ಯ

ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ: ಶಕ್ತಿ ಸ್ಮಾರ್ಟ್ ಕಾರ್ಡ್‌ ವಿತರಣೆಗೆ ಶೀಘ್ರದಲ್ಲೇ ಕ್ರಮ- ರಾಮಲಿಂಗಾ ರೆಡ್ಡಿ

ಗೃಹ ಜ್ಯೋತಿ ಮತ್ತು ಗೃಹ ಲಕ್ಷ್ಮಿ ಯೋಜನೆಗಳ ಪ್ರಾರಂಭದ ನಂತರ ಸೇವಾ ಸಿಂಧು ಪೋರ್ಟಲ್ ಮೇಲಿನ ಹೊರೆ ಸದ್ಯಕ್ಕೆ ಕಡಿಮೆಯಾಗಿರುವುದರಿಂದ, 'ಶಕ್ತಿ ಕಾರ್ಡ್'ಗಳನ್ನು ನೀಡುವ ಪ್ರಕ್ರಿಯೆಯು ಶೀಘ್ರದಲ್ಲೇ ಪ್ರಾರಂಭವಾಗುತ್ತದೆ ಮತ್ತು ಈ ಕಾರ್ಡ್‌ಗಳು ಜೀವಿತಾವಧಿಗೆ ಮಾನ್ಯವಾಗಿರುತ್ತವೆ ಮತ್ತು ಯಾವುದೇ ನವೀಕರಣದ ಅಗತ್ಯವಿಲ್ಲ ಎನ್ನಲಾಗಿದೆ.

ಬೆಂಗಳೂರು: ಗೃಹ ಜ್ಯೋತಿ ಮತ್ತು ಗೃಹ ಲಕ್ಷ್ಮಿ ಯೋಜನೆಗಳ ಪ್ರಾರಂಭದ ನಂತರ ಸೇವಾ ಸಿಂಧು ಪೋರ್ಟಲ್ ಮೇಲಿನ ಹೊರೆ ಸದ್ಯಕ್ಕೆ ಕಡಿಮೆಯಾಗಿರುವುದರಿಂದ, 'ಶಕ್ತಿ ಕಾರ್ಡ್'ಗಳನ್ನು ನೀಡುವ ಪ್ರಕ್ರಿಯೆಯು ಶೀಘ್ರದಲ್ಲೇ ಪ್ರಾರಂಭವಾಗುತ್ತದೆ ಮತ್ತು ಈ ಕಾರ್ಡ್‌ಗಳು ಜೀವಿತಾವಧಿಗೆ ಮಾನ್ಯವಾಗಿರುತ್ತವೆ ಮತ್ತು ಯಾವುದೇ ನವೀಕರಣದ ಅಗತ್ಯವಿಲ್ಲ ಎನ್ನಲಾಗಿದೆ.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆಗೆ ಮಾತನಾಡಿ, 'ಇಷ್ಟು ದಿನ, ಸೇವಾ ಸಿಂಧು ಪೋರ್ಟಲ್ ಅಧಿಕಾರಿಗಳು ಗೃಹ ಜ್ಯೋತಿ ಮತ್ತು ಗೃಹ ಲಕ್ಷ್ಮಿ ಯೋಜನೆಗಳಿಗೆ ಅರ್ಜಿಗಳನ್ನು ಸ್ವೀಕರಿಸುವಲ್ಲಿ ನಿರತರಾಗಿದ್ದರು. ಶಕ್ತಿ ಯೋಜನೆಯಡಿ ಸುಮಾರು ಮೂರು ಕೋಟಿ ಫಲಾನುಭವಿಗಳಿದ್ದು, ಅವರಿಗೆ ಶಕ್ತಿ ಕಾರ್ಡ್ ವಿತರಿಸುವುದು ಸುಲಭದ ಮಾತಲ್ಲ. ಪೋರ್ಟಲ್ ಈಗ ಹೊರೆಯಿಂದ ಕೊಂಚ ಮುಕ್ತವಾಗಿರುವುದರಿಂದ, ನಾವು ಶಕ್ತಿ ಕಾರ್ಡ್‌ಗಳನ್ನು ನೀಡುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತೇವೆ' ಎಂದರು.

ಬಸ್ ನಿಗಮಗಳು ನೀಡುವ ಬಸ್ ಪಾಸ್‌ಗಳಂತೆಯೇ ಶಕ್ತಿ ಸ್ಮಾರ್ಟ್ ಕಾರ್ಡ್‌ಗಳು ಕೇವಲ ಗುರುತಿನ ಚೀಟಿಯಾಗಲಿವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಎಂಡಿ ಅನ್ಬು ಕುಮಾರ್ ಈ ಹಿಂದೆ ಟಿಎನ್‌ಐಇಗೆ ಖಚಿತಪಡಿಸಿದ್ದರು. ಆದರೆ, ಸಾಮಾನ್ಯ ಪಾಸ್‌ಗಳಂತೆ ಪ್ರತಿ ವರ್ಷ ಕಾರ್ಡ್‌ಗಳನ್ನು ನವೀಕರಿಸಬೇಕೆಂದು ಮಹಿಳೆಯರು ಆತಂಕಕ್ಕೊಳಗಾಗಿದ್ದರು. 

ಮಹಿಳಾ ಫಲಾನುಭವಿಗಳು ತಮ್ಮ ಕಾಯಂ ವಾಸಸ್ಥಳದ ಮಾಹಿತಿ ಮತ್ತು ಅವರ ಫೋಟೊವನ್ನು ಇತರ ವಿವರಗಳೊಂದಿಗೆ ಸಲ್ಲಿಸಬೇಕು. ಬಳಿಕ ಶಕ್ತಿ ಕಾರ್ಡ್‌ಗಳನ್ನು ರಚಿಸಲಾಗುತ್ತದೆ. ಅವರು ಅದನ್ನು ಪ್ರತಿ ವರ್ಷ ನವೀಕರಿಸುವ ಅಗತ್ಯವಿಲ್ಲ. ಈ ಸಂಬಂಧ ರಾಜ್ಯ ಸರ್ಕಾರವು ಈ ವಾರ ವಿವರವಾದ ಮಾರ್ಗಸೂಚಿಯನ್ನು ಹೊರಡಿಸಲಿದೆ ಎಂದು ರೆಡ್ಡಿ ಹೇಳಿದರು. 

ಬಸ್‌ಗಳನ್ನು ಪ್ರವೇಶಿಸುವಾಗ ಮತ್ತು ನಿರ್ಗಮಿಸುವಾಗ ಪ್ರಯಾಣಿಕರು 'ಟ್ಯಾಪ್ ಮಾಡಿ ಪ್ರಯಾಣ' ಮಾಡಬಹುದಾದ 'ಸ್ಮಾರ್ಟ್ ಕಾರ್ಡ್'ಗಳನ್ನು ವಿತರಿಸುವ ತಂತ್ರಜ್ಞಾನವನ್ನು ಹೊಂದಿದ್ದರೂ ಕೂಡ ನಗದು ಕೊರತೆ ಎದುರಿಸುತ್ತಿರುವ ಬಸ್‌ಗೆ ಹೆಚ್ಚುವರಿ ಆರ್ಥಿಕ ಹೊರೆಯಾಗುವುದರಿಂದ ನಾವು ಇದನ್ನು ಮುಂದುವರಿಸುತ್ತಿಲ್ಲ. ನಿಗಮಗಳು ಭವಿಷ್ಯದಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬಹುದು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ಸಮರ್ಥಿಸಿಕೊಂಡರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ