ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಹಣ ಕೇಳಿದ್ದಕ್ಕೆ ಆಟೋ ಚಾಲಕ ಮತ್ತವನ ಕುಟುಂಬಸ್ಥರ ಮೇಲೆ ಮಹಿಳೆ ಮತ್ತು ಸಹಚರರಿಂದ ಹಲ್ಲೆ!

ಆಟೋ ಬಾಡಿಗೆ ಪಡೆದ ಮಹಿಳೆಯೊಬ್ಬಳು ಹಣ ಕೇಳಿದ್ದಕ್ಕೆ ಚಾಲಕ ಮತ್ತು ಆತನ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿರುವ ಘಟನೆ ನಗರದ ಹುಳಿಮಾವಿನಲ್ಲಿ ನಡೆದಿದೆ.

ಬೆಂಗಳೂರು: ಆಟೋ ಬಾಡಿಗೆ ಪಡೆದ ಮಹಿಳೆಯೊಬ್ಬಳು ಹಣ ಕೇಳಿದ್ದಕ್ಕೆ ಚಾಲಕ ಮತ್ತು ಆತನ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿರುವ ಘಟನೆ ನಗರದ ಹುಳಿಮಾವಿನಲ್ಲಿ ನಡೆದಿದೆ.

ಭಾನುವಾರ ರಾತ್ರ ಸುಮಾರು 12.10 ರಿಂದ 1.30 ರ ಸಮಯದಲ್ಲಿ ಈ ಘಟನೆ ನಡೆದಿದೆ.  ದೇವರಚಿಕ್ಕನಹಳ್ಳಿ ನಿವಾಸಿ ರಾಜು ಆಟೋ ಚಾಲಕರಾಗಿದ್ದು ಮಹಿಳೆ ಆಟೋವನ್ನು ಬಾಡಿಗೆ ತೆಗದುಕೊಂಡಿದ್ದಾರೆ. ಮನೆ ಹತ್ತಿರ ತೆರಳಿದ ಬಳಿಕ ಹಣ ಕೇಳಿದ್ದಾರೆ. ಕುಡಿದ ಅಮಲಿನಲ್ಲಿದ್ದ ಮಹಿಳೆ ಮನೆಗೆ ತೆರಳಿ ತನ್ನ ಇಬ್ಬರು ಸಹಚರರನ್ನು ಕರೆದುಕೊಂಡು ಬಂದು ಚಾಲಕನ ಮೇಲೆ ಹಲ್ಲೆ ನಡೆಸಿದ್ದಾಳೆ.

ಈ ವೇಳೆ ರಾಜು ತನ್ನ ಕುಟುಂಬಸ್ಥರಿಗೆ ಕರೆ ಮಾಡಿದ್ದಾರೆ, ಕುಟುಂಬಸ್ಥರು ಅಲ್ಲಿಗೆ ಬಂದಿದ್ದಾರೆ. ಈ ವೇಳೆ ರಾಜು ಸ್ನೇಹಿತ 35 ವರ್ಷದ ಮೋಹಿನ್ ಕೂಡ ಅವರ ಜೊತೆಗಿದ್ದ, ಆತನಿಗೂ ಗಂಭೀರ ಗಾಯಗಳಾಗಿವೆ,  ರಾಜುವಿಗೆ ಗಂಭೀರ ಗಾಯಗಳಾಗಿದ್ದು, ಆತನ ಮೇಲೆ ಪೆಪ್ಪರ್ ಸ್ಪ್ರೇ ಮಾಡಿ ಆಟೋಗೆ ಹಾನಿ ಮಾಡಿದ್ದಾರೆ.

ಈ ಹಲ್ಲೆಯಲ್ಲಿ ರಾಜುವಿನ ಹಲ್ಲುಗಳು ಮುರಿದಿವೆ,  ರಾಜು ಸ್ನೇಹಿತ 35 ವರ್ಷದ ಮೋಹಿನ್ ಕೈ ಗೆ ಸುಮಾರು 7 ಹೊಲಿಗೆ ಹಾಕಲಾಗಿದೆ,  ರಾಜು ಪತ್ನಿ ಮತ್ತು ಅವರ ಮಗನ ಮೇಲೆ ಪೆಪ್ಪರ್ ಸ್ಪ್ರೇ ಮಾಡಲಾಗಿದೆ,  ತಾಯಿ ಮತ್ತು ಮಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಮೋಹಿನ್ ಮೈಸೂರಿಗೆ ಮರಳಿದ್ದಾರೆ.

ಭಾನುವಾರ ನನ್ನ ಹುಟ್ಟಿದ ಹಬ್ಬವಿತ್ತು, ನಾನು ಮತ್ತು ನನ್ನ ಸ್ನೇಹಿತ ಮೋಹಿನ್ ಜೊತೆಗಿದ್ದೆವು,  ಈ ವೇಳೆ ಕುಡಿದ ಅಮಲಿನಲ್ಲಿದ್ದ ಮಹಿಳೆ ಆಟೋ ಬಾಡಿಗೆ ಪಡೆದರು, ಆಕೆ ಒಂಟಿಯಾಗಿದ್ದರಿಂದ ನಾನು ನನ್ನ ,ಸ್ನೇಹಿತನ ಜೊತೆ ತೆರಳಿದೆ. ಆಕೆ ಮನೆ ತಲುಪಿದ ವೇಳೆ ಹಣ ತರುವುದಾಗಿ ಹೋಗಿ ಮನೆಯೊಳಗೆ ಹೋದಳು.

ನಂತರ ಒಳಗೆ ಹೋದ ಆಕೆ ಕಬ್ಬಿಣದ ರಾಡ್ ಜೊತೆಗೆ ಇಬ್ಬರು ಪುರುಷರೊಂದಿಗೆ ಹೊರ ಬಂದಳು, ಬಂದವರು ನನ್ನ ಮೇಲೆ ಹಲ್ಲೆ ನಡೆಸಿ ನನ್ನ ಮೊಬೈಲ್ ಕಸಿದುಕೊಂಡರು.  ನನ್ನ ಮನೆ ಕೇವಲ 1 ಕಿಮೀ ದೂರವಿದ್ದ ಕಾರಣ, ಮೋಹಿನ್ ಫೋನ್ ನಲ್ಲಿ ನನ್ನ ಮನೆಯವರಿಗೆ ಕರೆ ಮಾಡಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಇದು ಮೆಡಿಕೋ-ಲೀಗಲ್ ಪ್ರಕರಣವಾದ್ದರಿಂದ ಆಸ್ಪತ್ರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ''ಮಹಿಳೆ ಮತ್ತು ಆಕೆಯ ಇಬ್ಬರು ಸಹಚರರನ್ನು ಬಂಧಿಸಬೇಕಿದೆ. ಆರೋಪಿಗಳು ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ. ಅವರು ತಮಿಳಿನಲ್ಲಿ ಮಾತನಾಡುತ್ತಿದ್ದರು,  ತಮಿಳುನಾಡು ಮೂಲದವರು ಎಂದು ತೋರುತ್ತದೆ. ಆರೋಪಿಗಳು ಮಾದಕ ವಸ್ತುವಿನ ಅಮಲಿನಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಪರಿಚಿತ ಮಹಿಳೆ ಮತ್ತು ಆಕೆಯ ಸಹಚರರ ವಿರುದ್ಧ ದರೋಡೆ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT