ರಾಜ್ಯ

ಮುಂಗಾರು ಹಂಗಾಮಿನ ಬೆಳೆಹಾನಿ ಪರಿಹಾರ: ನಾಳೆ ಅಥವಾ ನಾಳಿದ್ದು ಮಾರ್ಗಸೂಚಿ ಬಿಡುಗಡೆ

Nagaraja AB

ಬೆಳಗಾವಿ: ಮುಂಗಾರು ಹಂಗಾಮಿ ಭೆಳೆ ಹಾನಿ ಪರಿಹಾರ ಸಂಬಂಧಿಸಿದಂತೆ ನಾಳೆ ಅಥವಾ ನಾಳಿದ್ದು ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ವಿಧಾನಪರಿಷತ್ತಿನಲ್ಲಿಂದು ಹೇಳಿದರು.

ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಶರಣಗೌಡ ಬಯ್ಯಪುರ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರೈತರಿಗೆ ಅವರ ಜಮೀನಿಗೆ ಅನುಗುಣವಾಗಿ 2 ಸಾವಿರ ರೂಪಾಯಿವರೆಗೆ ಬೆಳೆ ಪರಿಹಾರ ಹಣವನ್ನು  ಡಿಬಿಟಿ ಮೂಲಕ ನೇರವಾಗಿ ಜಮೆ ಮಾಡಲಾಗುವುದು. ಈ ಸಂಬಂಧ ಮಾರ್ಗಸೂಚಿ ನಾಳೆ ಅಥವಾ ನಾಳಿದ್ದು ಬಿಡುಗಡೆ ಮಾಡುತ್ತೇವೆ ಎಂದರು.

2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬರ ಪರಿಸ್ಥಿತಿಯಿಂದ ಭತ್ತ, ರಾಗಿ, ಜೋಳ, ಮುಸುಕಿನ ಜೋಳ, ಸಜ್ಜೆ, ತೃಣಧಾನ್ಯಗಳು, ತೊಗರಿ, ಹೆಸರು, ಉದ್ದು, ಹುರುಳಿ, ಅವರೆ, ಅಲಸಂದೆ, ಕಡಲೆ, ಸಾಸಿವೆ, ಸೂರ್ಯಕಾಂತಿ. ಸೋಯಾ ಅವರೆ, ಹತ್ತಿ,ಕಬ್ಬು ಹಾಗೂ ತಂಬಾಕು ಬೆಳೆಗಳು ಹಾಳಾಗಿವೆ.

ಹಾನಿಯಾದ ಬೆಳೆ ಹಾನಿ ಪರಿಹಾರಕ್ಕಾಗಿ ಎನ್ ಡಿಆರ್ ಎಫ್ ನಿಯಮದಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಆರ್ಥಿಕ ನೆರವನ್ನು ನಿರೀಕ್ಷಿಸಲಾಗಿದೆ ಎಂದೂ ಅವರು ಸದನಕ್ಕೆ ತಿಳಿಸಿದರು.
 

SCROLL FOR NEXT