ಬಿಬಿಎಂಪಿ ಕಚೇರಿ (ಸಂಗ್ರಹ ಚಿತ್ರ) 
ರಾಜ್ಯ

ಅನಧಿಕೃತ ಆಪ್ಟಿಕಲ್ ಫೈಬರ್ ಕೇಬಲ್‌: ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ಬಿಬಿಎಂಪಿ ನೋಟಿಸ್ ಜಾರಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರದಲ್ಲಿ ಹಾಕಿರುವ ಅನಧಿಕೃತ ಆಪ್ಟಿಕಲ್ ಫೈಬರ್ ಕೇಬಲ್‌ಗಳನ್ನು (ಒಎಫ್‌ಸಿ) ಘೋಷಿಸುವಂತೆ ಟೆಲಿಕಾಂ ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ಸೂಚಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರದಲ್ಲಿ ಹಾಕಿರುವ ಅನಧಿಕೃತ ಆಪ್ಟಿಕಲ್ ಫೈಬರ್ ಕೇಬಲ್‌ಗಳನ್ನು (ಒಎಫ್‌ಸಿ) ಘೋಷಿಸುವಂತೆ ಟೆಲಿಕಾಂ ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ಸೂಚಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಡಿಸೆಂಬರ್ 20 ರೊಳಗೆ ವಿವರಗಳನ್ನು ಸಲ್ಲಿಸುವಂತೆ ಬಿಬಿಎಂಪಿ ಈ ಸೇವಾ ಪೂರೈಕೆದಾರರಿಗೆ ನೋಟಿಸ್ ನೀಡಿದೆ.

'ಟೆಲಿಕಾಂ ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರರು ನಗರದಲ್ಲಿ ಅನಧಿಕೃತ ಒಎಫ್‌ಸಿಗಳನ್ನು ಹಾಕಿರುವುದು ಗಮನಕ್ಕೆ ಬಂದಿದೆ. ಡಿಸೆಂಬರ್ 20 ರೊಳಗೆ ಅಂತಹ ಅನಧಿಕೃತ ಒಎಫ್‌ಸಿಗಳ ವಿವರಗಳನ್ನು ಘೋಷಿಸಲು ನಾವು ಅವರಿಗೆ ನೋಟಿಸ್ ನೀಡಿದ್ದೇವೆ ಮತ್ತು ನಂತರ ಅವುಗಳನ್ನು ಕ್ರಮಬದ್ಧಗೊಳಿಸಲಾಗುತ್ತದೆ' ಎಂದು ಬಿಬಿಎಂಪಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

'ಈ ಹಿಂದೆಯೂ ಸಹ, ರಸ್ತೆಯನ್ನು ರಕ್ಷಿಸಲು ಮತ್ತು ಆದಾಯವನ್ನು ಕ್ರೋಢೀಕರಿಸಲು ನಗರದಲ್ಲಿ ಒಎಫ್‌ಸಿಗಳನ್ನು ನಿಯಂತ್ರಿಸಲು ನಾಗರಿಕ ಸಂಸ್ಥೆಯು ಹಲವಾರು ಪ್ರಯತ್ನಗಳನ್ನು ಮಾಡಿತು. ಆದರೆ, ಈ ಪ್ರಯತ್ನಗಳು ವಿಫಲವಾದವು. ಈ ಬಾರಿ, ಈ ಸೇವಾ ಪೂರೈಕೆದಾರರು ನಿಯಮಗಳಿಗೆ ಬದ್ಧವಾಗಿರದಿದ್ದರೆ ಮತ್ತು ಅನಧಿಕೃತ ಒಎಫ್‌ಸಿಗಳನ್ನು ಘೋಷಿಸದಿದ್ದರೆ, ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ' ಎಂದು ಅವರು ಹೇಳಿದರು.

ಅಧಿಕಾರಿಯ ಪ್ರಕಾರ, 31 ಕಂಪನಿಗಳು ನೆಲದ ಮೇಲೆ 12,463 ಕಿಮೀ ಡಕ್ಟ್‌ಗಳನ್ನು ಹಾಕಲು ಅನುಮತಿ ಪಡೆದಿವೆ. ಆದರೆ, ಈ ಕಂಪನಿಗಳು 97,000 ಕಿಮೀ ಡಕ್ಟ್‌ಗಳನ್ನು ಹಾಕಿವೆ. ಈ ಪೈಕಿ 84,537 ಕಿ.ಮೀ ಉದ್ದದ ಡಕ್ಟ್‌ಗಳು ಅಕ್ರಮವಾಗಿರುವುದು ಕಂಡುಬಂದಿದೆ.

ಒಂದು ಕಿಮೀ ಡಕ್ಟ್‌ಗೆ ಟೆಲಿಕಾಂ ಸೇವಾ ಪೂರೈಕೆದಾರರು ನೆಲದ ಬಾಡಿಗೆಯಾಗಿ ಸುಮಾರು 850 ರೂ. ಗಳನ್ನು ಪಾವತಿಸಬೇಕಾಗುತ್ತದೆ ಮತ್ತು ಟೆಲಿಕಾಂ ಅಲ್ಲದ ಕಂಪನಿಗಳು 450 ರೂ. ಪಾವತಿಸಬೇಕಾಗುತ್ತದೆ ಎಂದು ಅವರು ಹೇಳಿದರು.

ಈ ವರ್ಷ ಜುಲೈನಲ್ಲಿ ಬೆಂಗಳೂರಿನಲ್ಲಿ ಒಎಫ್‌ಸಿ ಲೈನ್‌ಗಳನ್ನು ಹಾಕಲು ಖಾಸಗಿ ಕಂಪನಿಗಳು ಅಡ್ಡಾದಿಡ್ಡಿಯಾಗಿ ರಸ್ತೆಯನ್ನು ಅಗೆಯುವ ಹಲವಾರು ದೂರುಗಳನ್ನು ಸ್ವೀಕರಿಸಿದ ನಂತರ, ಕಂಪನಿಗಳಿಗೆ ದಂಡ ವಿಧಿಸುವ ಮೂಲಕ ಅಕ್ರಮವಾಗಿ ಹಾಕಲಾದ ಕೇಬಲ್‌ಗಳನ್ನು ಕ್ರಮಬದ್ಧಗೊಳಿಸಲು ಬಿಬಿಎಂಪಿ ಕ್ರಮ ಕೈಗೊಂಡಿದೆ.

ಈ ಹಿಂದೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಇಂತಹ ಕಂಪನಿಗಳಿಗೆ ನೀಡಿರುವ ಅನುಮತಿಗಳು ಮತ್ತು ನಗರದಲ್ಲಿ ಎಷ್ಟು ಕಿಲೋಮೀಟರ್ ಲೈನ್‌ಗಳನ್ನು ಹಾಕಲಾಗಿದೆ ಎಂಬ ವಿವರಗಳನ್ನು ಕೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ': ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

SCROLL FOR NEXT