ಬೆಂಗಳೂರು: ಮಾಜಿ ಸಿಎಂ ಎಸ್.ನಿಜಲಿಂಗಪ್ಪ ಅವರ 121ನೇ ಜನ್ಮದಿನಾಚರಣೆ ಅಂಗವಾಗಿ ಸರ್ಕಾರದ ಹಲವು ಗಣ್ಯರು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದಾರೆ, ಆದರೆ ಅವರ ಸ್ಮಾರಕ ನಿರ್ಮಾಣ ಮಾಡಲು ವರ್ಷಗಳ ಹಿಂದೆಯೇ ಸರ್ಕಾರ ಹಣ ಬಿಡುಗಡೆ ಮಾಡಿದ್ದರೂ ಇನ್ನೂ ಏಕೆ ಸ್ಥಾಪಿಸಿಲ್ಲ ಎಂಬ ಪ್ರಶ್ನೆಗಳು ಎದ್ದಿವೆ.
ನಿಜಲಿಂಗಪ್ಪ ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುಮಾರು ಅರ್ಧ ಶತಮಾನದ ಹಿಂದೆ ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಆರು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಕಾಂಗ್ರೆಸ್ ನಾಯಕರ ಸ್ಮಾರಕವನ್ನು ಸ್ಥಾಪಿಸಲು ಸರ್ಕಾರ ತಾತ್ವಿಕವಾಗಿ ಒಪ್ಪಿಗೆ ನೀಡಿದೆ ಎಂದು ಹೇಳಿದ್ದಾರೆ.
ಚಿತ್ರದುರ್ಗ ಜಿಲ್ಲಾಡಳಿತದ ನಿರಾಸಕ್ತಿಯಿಂದಾಗಿ ಕಳೆದ ಮೂರು ವರ್ಷಗಳಿಂದ ಸ್ಮಾರಕದ ಕಡತ ನೆನೆಗುದಿಗೆ ಬಿದ್ದಿದೆ ಎಂದು ಮಾಜಿ ಎಂಎಲ್ ಸಿ ಮೋಹನ್ ಕೊಂಡಜ್ಜಿ ಆರೋಪಿಸಿದ್ದಾರೆ.
ಸ್ಮಾರಕ ಸ್ಥಾಪನೆಯ ಮೊದಲ ಹೆಜ್ಜೆಯಾಗಿ ಚಿತ್ರದುರ್ಗದಲ್ಲಿ ಮಾಜಿ ಸಿಎಂ ಅವರ ಮನೆಯನ್ನು ಖರೀದಿಸಬೇಕಾಗಿತ್ತು, ಆದರೆ ಕೆಲವು ಲೋಪದಿಂದ ನೋಂದಣಿ ಆಗಲಿಲ್ಲ ಎಂದು ಅವರು ಹೇಳಿದರು. ಜೊತೆಗೆ ಸ್ಮಾರಕ ನಿರ್ಮಾಣಕ್ಕೆ ಯಾರೂ ಆಸಕ್ತಿ ತೋರುತ್ತಿಲ್ಲ ಎಂದು ಮೋಹನ್ ಕೊಂಡಜ್ಜಿ ದೂರಿದ್ದಾರೆ.
ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಹೇಗೆ ಹಿಂಜರಿಯುತ್ತಿದೆ ಎಂಬ ಬಗ್ಗೆ ಉಪಸ್ಥಿತರಿದ್ದ ಸಿದ್ದರಾಮಯ್ಯ, ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ಹಾಗೂ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರಿಗೆ ಕೊಂಡಜ್ಜಿ ಮಾಹಿತಿ ನೀಡಿದರು.
ಸುಮಾರು ಒಂದು ವರ್ಷದ ಹಿಂದೆ, ಮಾರಾಟಕ್ಕೆ ಮುಖ್ಯ ಸಹಿ ಮಾಡಲು ನಿಜಲಿಂಗಪ್ಪ ಅವರ ಮೊಮ್ಮಗ ವಿನಯ್ ಯುಎಸ್‌ನಿಂದ ಆಗಮಿಸಿದ್ದರು ಆದರೆ ಅಧಿಕಾರಿಗಳು ಕೆಲಸದಲ್ಲಿ ಸರಿಯಾದ ಆಸಕ್ತಿ ತೋರದ ಕಾರಣ ಅವರು ಹಿಂತಿರುಗಿದರು ಎಂದು ಮೋಹನ್ ಕೊಂಡಜ್ಜಿ ರಜನೀಶ್ ಗೋಯೆಲ್ ಅವರಿಗೆ ತಿಳಿಸಿದರು.
ಇದನ್ನು ಪೂರ್ಣಗೊಳಿಸಲು ಚಿತ್ರದುರ್ಗ ಜಿಲ್ಲಾಧಿಕಾರಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳ ಸಭೆ ಕರೆಯಲು ನಾನು ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ಅವರೊಂದಿಗೆ ಮಾತನಾಡಿದ್ದೇನೆ ಎಂದು ಅವರು ಹೇಳಿದರು. ಚಿತ್ರದುರ್ಗದ ಹಿಂದಿನ ಡಿಸಿ ಕವಿತಾ ಮನ್ನಿಕೇರಿ ಅವರು ಒಂದು ವರ್ಷ ಸಮಯ್ ವ್ಯರ್ಥಮಾಡಿದರು. ಕೊನೆಗೂ ಆಸ್ತಿ ವರ್ಗಾವಣೆಯೇ ನಡೆದಿಲ್ಲ ಎಂದು ಆರೋಪಿಸಿದರು.
ಬೆಂಗಳೂರಿನಲ್ಲಿ ನೆಲೆಸಿರುವ ನಿಜಲಿಂಗಪ್ಪ ಅವರ ಮಗ ಕಿರಣ್ ಶಂಕರ್ ಮತ್ತು ಮೊಮ್ಮಗ ವಿನಯ್ ನೋಂದಣಿಗೆ ದಿನಾಂಕವನ್ನು ನಿಗದಿಪಡಿಸಿದ ನಂತರ ಬರಲು ತಿಳಿಸಲಾಯಿತು, ಆದರೆ ನಂತರ ಅದನ್ನು ರದ್ದುಗೊಳಿಸಲಾಯಿತು. ಅಧಿಕಾರಿಗಳು 36 ತಿಂಗಳುಗಳ ಪ್ರಕ್ರಿಯೆಗೆ ಕಲ್ಲು ಹಾಕಿದ್ದಾರೆ. ಇದು ಈ ಮಹಾನ್ ನಾಯಕನ ಸ್ಮರಣೆಗೆ ಮಾಡಿದ ಅವಮಾನ' ಎಂದು ಕೊಂಡಜ್ಜಿ ವಿಷಾದ ವ್ಯಕ್ತ ಪಡಿಸಿದರು.