ಸಾಂದರ್ಭಿಕ ಚಿತ್ರ 
ರಾಜ್ಯ

ಮಂಗಳೂರು: ಮಂಗಳಾ ಈಜುಕೊಳದಲ್ಲಿ ಮುಳುಗಿ ಗುರುಗ್ರಾಮದ ಪ್ರವಾಸಿಗ ಸಾವು

ಮಂಗಳೂರಿನ ಲೇಡಿಹಿಲ್‌ನ ಮಂಗಳಾ ಈಜುಕೊಳದ ನೀರಿನಲ್ಲಿ ಮುಳುಗಿ 30 ವರ್ಷದ ವ್ಯಕ್ತಿಯೊಬ್ಬರು ಸಾವಿಗೀಡಾಗಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು: ಇಲ್ಲಿನ ಲೇಡಿಹಿಲ್‌ನ ಮಂಗಳಾ ಈಜುಕೊಳದ ನೀರಿನಲ್ಲಿ ಮುಳುಗಿ 30 ವರ್ಷದ ವ್ಯಕ್ತಿಯೊಬ್ಬರು ಸಾವಿಗೀಡಾಗಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಹರಿಯಾಣದ ಗುರುಗ್ರಾಮದ ಅಭಿಷೇಕ್ ಆನಂದ್ (30) ಎಂದು ಗುರುತಿಸಲಾಗಿದ್ದು, ಅವರು ನಗರದಲ್ಲಿ ತಂಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ಮಂಗಳವಾರ ಸಂಜೆ ಮಂಗಳಾ ಈಜುಕೊಳದಲ್ಲಿ ಈಜುತ್ತಿದ್ದಾಗ ಏಕಾಏಕಿ ನೀರಿನಲ್ಲಿ ಮುಳುಗಿದ್ದಾರೆ. ಕೂಡಲೇ ಜೀವರಕ್ಷಕರು ಅವರನ್ನು ಈಜುಕೊಳದಿಂದ ಮೇಲಕ್ಕೆಳೆದು ಆಸ್ಪತ್ರೆಗೆ ಸಾಗಿಸಿದರೂ, ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ.

ಮೃತರ ಕುಟುಂಬ ಸದಸ್ಯರು ಬುಧವಾರ ಇಲ್ಲಿಗೆ ಆಗಮಿಸುವ ನಿರೀಕ್ಷೆಯಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026 : ಚಿನ್ನ ಗೆದ್ದ ಭಾರತದ ಪುರುಷರ ಹಾಕಿ ತಂಡ; ಒಲಿಂಪಿಕ್ಸ್‌ಗೆ ಅರ್ಹತೆ

ಭಾರತದಲ್ಲಿ ಕಳೆದ 8 ತಿಂಗಳಲ್ಲಿ 254 ಹಿಂದೂಗಳು ಮುಸ್ಲಿಂ ಜಿಹಾದಿ ಹಿಂಸಾಚಾರಕ್ಕೆ ಬಲಿ: ಎಲ್ಲಿದೆ ನ್ಯಾಯ; VHP

ಭಾರತೀಯ ವಾಯುಪಡೆಗೆ ವರ್ಷಕ್ಕೆ 36-40 ಹೊಸ ಯುದ್ಧ ವಿಮಾನಗಳ ಅಗತ್ಯ: ವಾಯುಸೇನಾ ಮುಖ್ಯಸ್ಥ

ಆಸ್ಪತ್ರೆಗೆ ಭೇಟಿ ನೀಡಿ, ಫ್ಲೈದುಬೈ ಹೀರೋ ಸ್ಮಿತ್ ಮಚ್ಚಾರ್ ಹಣೆಗೆ ಮುತ್ತಿಟ್ಟ ದುಬೈ ಕ್ರೌನ್ ಪ್ರಿನ್ಸ್! ಹೇಳಿದ್ದೇನು?

BSFನಿಂದ ಇಬ್ಬರು ಪಾಕಿಗಳ ಹತ್ಯೆ: ಭಾರತೀಯ ರಾಯಭಾರಿ ಕರೆಸಿಕೊಂಡು, ಪ್ರತಿಭಟನೆ ದಾಖಲಿಸಿದ ಪಾಕಿಸ್ತಾನ!