ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: 'ಪಬ್ ಗೆ ಹೋಗಿದ್ದಾಗ ರೇಪ್ ಆಗಿರಬಹುದು'; ಪೊಲೀಸ್ ದೂರು ದಾಖಲಿಸಿದ ಮಹಿಳೆ

ಪಬ್ ಗೆ ಹೋಗಿದ್ದಾಗ ತನ್ನ ಮೇಲೆ ಅತ್ಯಾಚಾರವಾಗಿರಬಹುದು ಎಂದು ಆರೋಪಿಸಿ ಮಹಿಳೆಯೊಬ್ಬರು ಪೊಲೀಸ್ ದೂರು ನೀಡಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.

ಬೆಂಗಳೂರು: ಪಬ್ ಗೆ ಹೋಗಿದ್ದಾಗ ತನ್ನ ಮೇಲೆ ಅತ್ಯಾಚಾರವಾಗಿರಬಹುದು ಎಂದು ಆರೋಪಿಸಿ ಮಹಿಳೆಯೊಬ್ಬರು ಪೊಲೀಸ್ ದೂರು ನೀಡಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.

ಹೌದು.. ಖಾಸಗಿ ಕಂಪೆನಿಯೊಂದರ ಯುವತಿಯೊಬ್ಬಳು ಪ್ರಜ್ಞೆ ತಪ್ಪಿಸಿ ತನ್ನ ಮೇಲೆ ಗ್ಯಾಂಗ್‌ ರೇಪ್‌ (Physical Abuse) ನಡೆದಿದೆ ಎಂದು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪೊಲೀಸ್ ಮೂಲಗಳ ಪ್ರಕಾರ ಡಿ.12ರ ರಾತ್ರಿ ಸಂತ್ರಸ್ತೆ ಕೋರಮಂಗಲದ ಪಬ್‌ವೊಂದಕ್ಕೆ ಹೋಗಿದ್ದು, ಬಳಿಕ ಏನು ಆಯಿತೋ ಏನೋ ಆಕೆಗೆ ಪ್ರಜ್ಞೆ ಬಂದಾಗ ಆಡುಗೋಡಿಯ ದೇವೇಗೌಡ ಲೇಔಟ್ ಬಳಿ ಇದ್ದುದ್ದಾಗಿ ಹೇಳಿದ್ದಾಳೆ. ತಾನು ಅಲ್ಲಿಗೆ ಹೇಗೆ ಬಂದೆ ಎಂಬುದೇ ತಿಳಿದಿಲ್ಲ ಎಂದಿದ್ದಾಳೆ. ಕೂಡಲೇ ಸ್ಥಳೀಯರ ನೆರವಿನೊಂದಿಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ವೇಳೆ ತನ್ನ ದೇಹದ ಮೇಲೆ ತರಚು ಗಾಯಗಳಾಗಿದ್ದು, ಗ್ಯಾಂಗ್ ರೇಪ್ ಆಗಿದೆ ಎಂಬ ಶಂಕೆ ಇದೆ ಎಂದು ದೂರು ನೀಡಿದ್ದಾಳೆ.

ಯುವತಿಯೊಬ್ಬಳ ಮೇಲೆ ಗ್ಯಾಂಗ್‌ ರೇಪ್‌ ನಡೆದಿದೆ ಎಂಬ ಆರೋಪ ಹಿನ್ನೆಲೆ ದೂರು ದಾಖಲಿಸಿಕೊಂಡಿರುವ ಕೋರಮಂಗಲ ಠಾಣೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಯುವತಿ ಹೇಳಿದ ಘಟನೆ ನಡೆದ ಸ್ಥಳದ ಸುಮಾರು 60 ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಯೊಬ್ಬರು, 'ಪಬ್‌ನಲ್ಲಿ ತನ್ನೊಂದಿಗೆ ಸ್ನೇಹ ಬೆಳೆಸಿದ ವ್ಯಕ್ತಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರಬಹುದು ಎಂದು ಮಹಿಳೆ ಆರೋಪಿಸಿದ್ದಾರೆ ಎಂದು ಹೇಳಿದ್ದಾರೆ. ಅಂತೆಯೇ ನಾವು ಆ ವ್ಯಕ್ತಿಯ ವಿವರಗಳನ್ನು ಖಚಿತಪಡಿಸಿಕೊಂಡಿದ್ದೇವೆ ಮತ್ತು ಶೀಘ್ರದಲ್ಲೇ ಅವರನ್ನು ವಿಚಾರಣೆ ಮಾಡುತ್ತೇವೆ" ಎಂದು ಅಧಿಕಾರಿ ಹೇಳಿದರು.

ಪೊಲೀಸ್ ಮೂಲಗಳ ಪ್ರಕಾರ, ಮಹಿಳೆ ಪಬ್‌ನಲ್ಲಿ ಪ್ರಜ್ಞಾಹೀನಳಾಗಿದ್ದಳು. ಬಳಿಕ ಆಕೆ ಗಲಾಟೆ ಮಾಡಿದ ಹಿನ್ನಲೆಯಲ್ಲಿ ಪಬ್ ನಿಂದ ಹೊರ ಹಾಕಲಾಯಿತು. ಬಳಿಕ ಹೊಯ್ಸಳ ಪೊಲೀಸರು ಆಕೆಗೆ ಆಟೋರಿಕ್ಷಾವನ್ನು ಬುಕ್ ಮಾಡಲು ಸಹಾಯ ಮಾಡಿದರು ಮತ್ತು ಅವಳು ಮನೆಗೆ ಹೋದಳು. ಮನೆಗೆ ತಲುಪಿದ ನಂತರ, ಒಬ್ಬ ವ್ಯಕ್ತಿ ತನ್ನೊಂದಿಗೆ ಪಬ್‌ನಲ್ಲಿ ಸ್ವಲ್ಪ ಸಮಯ ಕಳೆದಿದ್ದಾನೆ ಮತ್ತು ಅವಳ ಮೇಲೆ ಅತ್ಯಾಚಾರ ಮಾಡಿರಬಹುದು ಎಂದು ಆಕೆ ನೆನಪಿಸಿಕೊಂಡಿದ್ದಾಳೆ ಎಂದು ಅಧಿಕಾರಿ ಹೇಳಿದರು.

ಅಂತೆಯೇ "ಇದುವರೆಗಿನ ತನಿಖೆಗಳಲ್ಲಿ ಆಕೆಯ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರವನ್ನು ದೃಢೀಕರಿಸಲು ಯಾವುದೇ ಸಾಕ್ಷ್ಯಾಧಾರಗಳು ದೊರೆತಿಲ್ಲ. ಆದರೆ ನಾವು ಈ ಹಂತದಲ್ಲಿ ಆಕೆಯ ಆರೋಪಗಳನ್ನು ತಳ್ಳಿಹಾಕುವುದಿಲ್ಲ ಮತ್ತು ಸಂಪೂರ್ಣ ತನಿಖೆ ನಡೆಸಲಾಗುವುದು" ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?