ರಾಜ್ಯ

ಬೆಂಗಳೂರು: ಪಾನ್ ಬ್ರೋಕರ್ ದರೋಡೆ ಪ್ರಕರಣ, ಐವರ ಬಂಧನ, 60 ಲಕ್ಷ ರು. ವಶ

Shilpa D

ಬೆಂಗಳೂರು: ಕಡಿಮೆ ಬೆಲೆಗೆ ಚಿನ್ನ ಕೊಡುತ್ತೇವೆಂದು ವ್ಯಕ್ತಿಯೊಬ್ಬರಿಗೆ 80 ಲಕ್ಷರೂ. ವಂಚಿಸಿದ್ದ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ.

ಸೈಯದ್ ಇರ್ಫಾನ್ , ರಿಜ್ವಾನ್ , ದಿವಾಕರ, ಸತೀಶ್ ,ಅಶ್ರಫ್  ಬಂಧಿತ ಆರೋಪಿಗಳು. ಕಳೆದ ವಾರ ಡಿ.11 ರಂದು ಬಸವೇಶ್ವರ ನಗರದ ಆದರ್ಶ್ ಲೇಔಟ್ ನಲ್ಲಿ  ಘಟನೆ ನಡೆದಿತ್ತು. ಪಾನ್ ಬ್ರೋಕರ್ ಕೆಲಸ ಮಾಡುವ ಸಂಕೇತ್ ಎಂಬಾತನಿಂದ ಈ ಗ್ಯಾಂಗ್ ಹಣ ದೋಚಿತ್ತು.

ಕಡಿಮೆ ಬೆಲೆಗೆ ದುಬೈ ನಿಂದ ಚಿನ್ನ ತರಿಸಿದ್ದೇವೆ. ಹಣ ತೆಗೆದುಕೊಂಡು ಬನ್ನಿ ದುಬೈ ರೇಟಿಗೆ ಚಿನ್ನ ಕೊಡ್ತೇವೆ ಎಂದು ಸಂಕೇತ್ ಪುಸಲಾಯಿಸಿ ಆದರ್ಶ ನಗರಕ್ಕೆ ಕರೆಸಿಕೊಂಡಿದ್ದ ಅರೋಪಿಗಳು.

ಡಿಸೆಂಬರ್ 11ರಂದು ಕೆಜಿಎ್ ಮೂಲದ ಪಾನ್ ಬ್ರೋಕರ್ ಸಂಕೇತ್ ಎಂಬಾತನ ಬಳಿ 80 ಲಕ್ಷ ರೂ. ಸುಲಿಗೆ ಮಾಡಿದ್ದರು. ಆರೋಪಿಗಳನ್ನು ಬಂಧಿಸಿ 55 ಲಕ್ಷ ರೂ. ಜಪ್ತಿ ಮಾಡಲಾಗಿದೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದಾರೆ.

ಕೆಜಿಎಫ್ ರಾಬರ್ಟಸನ್ ಪೇಟೆಯಲ್ಲಿ ಪಾನ್ ಬ್ರೋಕರ್ ಆಗಿದ್ದ ಸಂಕೇತ್ ಜೈನ್, ಬೆಂಗಳೂರಿಗೆ ವ್ಯವಹಾರ ಸಲುವಾಗಿ ಬಂದು ಹೋಗುತ್ತಿದ್ದರು. ಸಂಬಂಧಿಕರ ಮೂಲಕ ಕುರುಬರಹಳ್ಳಿಯಲ್ಲಿ ಜಿಮ್ ನಡೆಸುತ್ತಿರುವ ಮಹಮ್ಮದ್ ರಿಜ್ವಾನ್, ಪರಿಚಯವಾಗಿದೆ.

ಬಸವೇಶ್ವರದ ಆರ್ದಶ್ ಲೇಔಟ್ ಸಬ್ ರಿಜಿಸ್ಟ್ರಾರ್ ಕಚೇರಿ ಬಳಿ ಕಾರಿನಿಂದ ಸಂಕೇತ್‌ನನ್ನು ತಳ್ಳಿ ಆರೋಪಿಗಳು ಪರಾರಿಯಾಗಿದ್ದರು. ಸ್ಥಳೀಯರ ಸಹಾಯದಿಂದ ಸಂಕೇತ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಆನಂತರ ದೂರು ಸಲ್ಲಿಸಿದದರು. ಇದರ ಮೇರೆಗೆ ತನಿಖೆ ಕೈಗೊಂಡು ಆರೋಪಿಯ ಮಾಹಿತಿ ಕಲೆ ಹಾಕಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT