ರಾಜ್ಯ

SBI ಎಟಿಎಂಗೆ ಕನ್ನ: ಗ್ಯಾಸ್ ಕಟರ್ ಬಳಸಿ 20 ಲಕ್ಷ ರೂ. ದೋಚಿದ ಖದೀಮರು

Srinivasamurthy VN

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಮತ್ತೊಂದು ಎಟಿಎಂ ಕಳ್ಳತನ ಪ್ರಕರಣ ದಾಖಲಾಗಿದ್ದು ಮತ್ತೆ ಖದೀಮರು ಗ್ಯಾಸ್ ಕಟರ್ ಬಳಸಿ ಎಟಿಎಂಗೆ ಕನ್ನ ಹಾಕಿ ಬರೊಬ್ಬರಿ 18 ಲಕ್ಷಕ್ಕೂ ಅಧಿಕ ಹಣ ದೋಚಿದ್ದಾರೆ.

ಚಿಕ್ಕಬಳ್ಳಾಪುರ (Chikkaballapur) ನಗರದ ಎಂ.ಜಿ ರಸ್ತೆಯ ದರ್ಗಾ ಬಳಿ ನಡೆದಿದ್ದು, ಎಸ್​ಬಿಐ(SBI) ಬ್ಯಾಂಕ್​​ಗೆ ಸೇರಿದ ಎಟಿಎಂ(ATM)ಗೆ ನುಗ್ಗಿದ ಖದೀಮರು, ಬರೊಬ್ಬರಿ 20 ಲಕ್ಷ ರೂ. ಹಣವನ್ನು ಕದ್ದು, ಬಳಿಕ ಎಟಿಎಂಗೆ ಬೆಂಕಿ ಹಾಕಿದ ಘಟನೆ ನಡೆದಿದೆ. 

ಮೂಲಗಳ ಪ್ರಕಾರ ಸದರಿ ಎಟಿಎಂ ಅನ್ನು ಹಿಟಾಚಿ ಸಂಸ್ಥೆ ನಿರ್ವಹಣೆ ಮಾಡುತ್ತಿದ್ದು, ಸಿಎಂಎಸ್ ಸಂಸ್ಥೆ ಹಣ ತುಂಬುವ ಕೆಲಸ ಮಾಡುತ್ತಿತ್ತು. ಆದರೆ, ತಡರಾತ್ರಿ ಎ.ಟಿ.ಎಂ ಗೆ ನುಗ್ಗಿರುವ ದುಷ್ಕರ್ಮಿಗಳ ತಂಡ, ಎಟಿಎಂ ಸಿಸಿ ಕ್ಯಾಮೆರಾಗಳಿಗೆ ಸ್ಪ್ರೇ ಬಳಸಿ ನಂತರ ಗ್ಯಾಸ್ ಕಟರ್​ನಿಂದ ಎಟಿಎಂ ಬಾಗಿಲುಗಳನ್ನು ಕಟ್ ಮಾಡಿದ್ದಾರೆ. ನಂತರ ಎಟಿಎಂನಲ್ಲಿದ್ದ ಸುಮಾರು ಇಪ್ಪತ್ತು ಲಕ್ಷ ರೂಪಾಯಿಗಳನ್ನು ಕದ್ದು ಎಟಿಎಂ ಯಂತ್ರಕ್ಕೆ ಗ್ಯಾಸ್ ಕಟರ್​ನಿಂದಲೇ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ. ಇತ್ತಿಚೀಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ, ಗೌರಿಬಿದನೂರು ಹಾಗೂ ಪೊಶೆಟ್ಟಿಯಲ್ಲಿ ಇದೆ ರೀತಿಯ ಕೆಲವು ಘಟನೆಗಳು ನಡೆದಿವೆ. ಆದರೆ ಆರೋಪಿಗಳು ಪೊಲೀಸರ ಕಣ್ಣಿಗೆ ಬಿದ್ದಿಲ್ಲ. ಸದ್ಯಕ್ಕೆ ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT