ಜೈನ ಶಿಲ್ಪ 
ರಾಜ್ಯ

ಮೈಸೂರು: ಒಳಚರಂಡಿ ಕಾಮಗಾರಿ ವೇಳೆ 11ನೇ ಶತಮಾನದ ಜೈನ ಶಿಲ್ಪಗಳು ಪತ್ತೆ!

ಮೈಸೂರು ತಾಲೂಕಿನ ವರುಣಾ ಗ್ರಾಮದಲ್ಲಿ ಒಳಚರಂಡಿ ಕಾಮಗಾರಿ ವೇಳೆ 11ನೇ ಶತಮಾನಕ್ಕೆ ಸೇರಿದ ಎರಡು ಜೈನ ಶಿಲ್ಪಗಳು ಪತ್ತೆಯಾಗಿವೆ.

ಮೈಸೂರು: ಮೈಸೂರು ತಾಲೂಕಿನ ವರುಣಾ ಗ್ರಾಮದಲ್ಲಿ ಒಳಚರಂಡಿ ಕಾಮಗಾರಿ ವೇಳೆ 11ನೇ ಶತಮಾನಕ್ಕೆ ಸೇರಿದ ಎರಡು ಜೈನ ಶಿಲ್ಪಗಳು ಪತ್ತೆಯಾಗಿವೆ.

ಈ ಶಿಲ್ಪಗಳು ಮುರಿದ ಸ್ಥಿತಿಯಲ್ಲಿ ಲಭ್ಯವಾಗಿದ್ದು, ಅವುಗಳನ್ನು ಪುರಾತತ್ವ ಸಂಗ್ರಹಾಲಯಕ್ಕೆ ಉಪನಿರ್ದೇಶಕಿ ಮಂಜುಳಾ ಅವರು ಕಳುಹಿಸಿಕೊಟ್ಟಿದ್ದಾರೆ.

ಕೈ ಹಾಗೂ ಕಾಲುಗಳಲ್ಲಿ ಗೊಮ್ಮಟ್ಟನ ಶಿಲ್ಪ, ಕೇವಲ ತಲೆ ಮಾತ್ರ ಇರುವ ಒಂದು ಶಿಲ್ಪ ಹಾಗೂ ಹೆಣ್ಣು ದೇವರ ಒಂದು ಶಿಲ್ಪ ಪತ್ತೆಯಾಗಿವೆ.

ಈ ಶಿಲ್ಪಗಳು ಪತ್ತೆಯಾಗುತ್ತಿದ್ದಂತೆ ಕುತೂಹಲದಿಂದ ಸ್ಥಳೀಯರು ನೋಡಲು ಸ್ಥಳಕ್ಕೆ ಆಗಮಿಸಿದ್ದು, ಡಾ ಎನ್‌ಎಸ್‌ ರಂಗರಾಜು, ಡಾ ಶಶಿಧರ್‌, ಶ್ರೀ ಪ್ರಸನ್ನ ಕುಮಾರ್‌ ವಿನೋದ್‌ ಜೈನ್‌ ಸಹ ಸ್ಥಳಕ್ಕೆ ಭೇಟಿ ನೀಡಿದ್ದರು.

ಇನ್ನು ಈ ಶಿಲ್ಪಗಳು 11ನೇ ಶತಮಾನದ್ದು ಎನ್ನಲಾಗುತ್ತಿದ್ದು, ಗಂಗರು ಹಾಗೂ ಹೊಯ್ಸಳರ ಆಳ್ವಿಕೆಯಲ್ಲಿ ವರುಣ, ವಾಜಮಂಗಲ ಹಾಗೂ ವರಕೋಡು ದೊಡ್ಡ ಜೈನ ಕೇಂದ್ರಗಳಾಗಿದ್ದವು. ಈ ಪ್ರದೇಶದಲ್ಲಿ ಹಲವಾರು ಶಿಲ್ಪಕಲೆಗಳಿವೆ ಎಂದು ರಂಗರಾಜು ಅವರು ಹೇಳಿದ್ದಾರೆ.

ಶಿಲ್ಪಗಳ ಮೇಲೆ ಮತ್ತಷ್ಟು ಬೆಳಕು ಚೆಲ್ಲುವ ಉತ್ಖನನದ ಯೋಜನೆಯನ್ನು ಸರ್ಕಾರ ಘೋಷಿಸಬೇಕು. ಉತ್ಖನನಕ್ಕೆ ಸಾಕಷ್ಟು ಅವಕಾಶವಿದ್ದು, ವರುಣಾ ಕ್ಷೇತ್ರವನ್ನು ಪ್ರತಿನಿಧಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಈ ಬಗ್ಗೆ ಮಾಹಿತಿ ನೀಡಲಾಗುವುದು. ಇದು ಇತಿಹಾಸವನ್ನು ಸಂರಕ್ಷಿಸಲು ಮತ್ತು ಭವಿಷ್ಯದ ಪೀಳಿಗೆಗೆ ಶಿಲ್ಪಗಳನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026 : ಚಿನ್ನ ಗೆದ್ದ ಭಾರತದ ಪುರುಷರ ಹಾಕಿ ತಂಡ; ಒಲಿಂಪಿಕ್ಸ್‌ಗೆ ಅರ್ಹತೆ

ವಿಂಡೀಸ್ ವಿರುದ್ಧದ ಪಂದ್ಯದಲ್ಲಿ 9ನೇ ಶತಕ ಸಿಡಿಸಿದ KL Rahul: 10,000 ಅಂತಾರಾಷ್ಟ್ರೀಯ ರನ್!

Asian Games 2026: ಪಾಕಿಸ್ತಾನ ಬಗ್ಗು ಬಡಿದ ಭಾರತಕ್ಕೆ ಮತ್ತೊಂದು ಚಿನ್ನ: ಗೋಲ್ಡ್ ಗೆದ್ದ ಕುಸ್ತಿಪಟು ಅಮನ್!

'ಅಶ್ಲೀಲ, ಅಸಭ್ಯ, ವಿಕೃತಿ': TVK ಮಹಿಳಾ ಅಭ್ಯರ್ಥಿ ಕುರಿತ ಸ್ಟಾಲಿನ್ ಹೇಳಿ ಖಂಡಿಸಿದ CM ವಿಜಯ್; ಚುನಾವಣಾ ಆಯೋಗಕ್ಕೆ ದೂರು

ನೋಯ್ಡಾದ 'ಸೂಪರ್ನೋವಾ' ಕಟ್ಟಡದ 43ನೇ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ; ದೇಹ ಛಿದ್ರ ಛಿದ್ರ! ಭಯಾನಕ Video