ರಾಜ್ಯ

ಸಿಡಿ ಪ್ರಕರಣ ಸಿಬಿಐಗೆ ವಹಿಸುವ ಕುರಿತು ಸಿಎಂ ಜೊತೆ ಚರ್ಚಿಸಿ ತೀರ್ಮಾನ: ಗೃಹ ಸಚಿವ ಆರಗ ಜ್ಞಾನೇಂದ್ರ

Manjula VN

ಬೆಂಗಳೂರು: ಸಿಡಿ ಪ್ರಕರಣ ಸಿಬಿಐಗೆ ವಹಿಸುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಬುಧವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಯವ್ರು ನನಗೆ ಮಾಹಿತಿ ನೀಡಿದ್ದಾರೆ. ಪ್ರಕರಣವನ್ನು ಸಿಬಿಐಗೆ ಕೊಡುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಜೊತೆ ಚರ್ಚಿಸಿ ತೀರ್ಮಾನ ಮಾಡಬೇಕಾಗುತ್ತದೆ ಎಂದು ಹೇಳಿದರು.

ಯಾರೇ ಆಗಲಿ ಸಿಡಿ ಮೂಲಕ ಯಾರನ್ನಾದರೂ ತೇಜೋವದೆ ಮಾಡೋದು ತಪ್ಪು. ಆ ರೀತಿಯ ಏನಾದರೂ ಇದ್ದರೆ ಅಂತಹವ ವಿರುದ್ಧ ಕಾನೂನಿನ ರೀತಿಯಲ್ಲಿ ಕಠಿಣ ಕ್ರಮ ಆಗುತ್ತದೆ ತಿಳಿಸಿದರು.

ಇದೇ ವೇಳೆ ಸ್ಯಾಂಟ್ರೋ ರವಿ ಪ್ರಕರಣದ ತನಿಖಾಧಿಕಾರಿ ವರ್ಗಾವಣೆ ವಿಚಾರ ಕುರಿತು ಮಾತನಾಡಿ, ವರ್ಗಾವಣೆ ಮಾಡಿರುವುದು ನಾವಲ್ಲ, ಚುನಾವಣಾ ಆಯೋಗ. ಚುನಾವಣಾ ಆಯೋಗದ ಸೂಚನೆ ಮೇರೆಗೆ ವರ್ಗಾವಣೆ ಆಗಿದೆ. ಆಯೋಗದ ನಿಯಮಗಳು ಕಠಿಣವಾಗಿದ್ದು, ಈ ನಿಯಮದಡಿ ವರ್ಗಾವಣೆಯ ಕ್ರಮವಾಗಿದೆ ಎಂದು ಸ್ಪಷ್ಟಪಡಿಸಿದರು.

SCROLL FOR NEXT