ರಾಜ್ಯ

ಬೆಂಗಳೂರಿನಲ್ಲಿ ಎರಡು ದಿನ ತಂಪಾದ ವಾತಾವರಣ: ಕಾರಣ ಕೊಟ್ಟ ಹವಾಮಾನ ಇಲಾಖೆ

Ramyashree GN

ಬೆಂಗಳೂರು: ಕೊಮೊರಿನ್ ಕೊಲ್ಲಿಯ ಮೇಲೆ ಬಿದ್ದಿರುವ ಕಡಿಮೆ ಒತ್ತಡದ ಸ್ಥಿತಿಯಿಂದಾಗಿ ಎರಡು ದಿನಗಳ ಕಾಲ ಗರಿಷ್ಠದಿಂದ ಕನಿಷ್ಠ ತಾಪಮಾನಕ್ಕೆ ಇಳಿಕೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

ಎರಡು ದಿನಗಳ ಹಿಂದೆ ಶ್ರೀಲಂಕಾದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದೀಗ ಕಡಿಮೆ ಒತ್ತಡದ ಪ್ರದೇಶವಾಗಿ ಮಾರ್ಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಹಾಗಾಗಿ ಕಳೆದ ವಾರ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಗರಿಷ್ಠ ತಾಪಮಾನವು 29-30 ಡಿಗ್ರಿ ಸೆಲ್ಸಿಯಸ್‌ಗೆ ವಿರುದ್ಧವಾಗಿ ಇದೀಗ 27 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಇದರಿಂದಾಗಿ ಮೋಡ ಕವಿದ ವಾತಾವರಣ ಇರುತ್ತದೆ ಎಂದು ಅವರು ಹೇಳಿದರು.

ಬೇಸಿಗೆಯಲ್ಲಿ ಗರಿಷ್ಠ ತಾಪಮಾನವು 37 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಬೇಸಿಗೆಯ ಉಷ್ಣತೆಯು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ ಎಂದು ಹೇಳುವುದು ಈಗಲೇ ಸಾಧ್ಯವಿಲ್ಲ. ಫೆಬ್ರುವರಿ ಅಂತ್ಯದಿಂದ ಏಪ್ರಿಲ್‌ವರೆಗೆ ಗುಡುಗು ಸಹಿತ ಮಳೆಯನ್ನು ಸಹ ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT