ಫಾಜಿಲ್. 
ರಾಜ್ಯ

ಹಿರಿಯ ಮಗ ಆದಿಲ್ ಹತ್ಯೆಗೂ ಯತ್ನಿಸಿದ್ದಾರೆ: ಮೊಹಮ್ಮದ್ ಫಾಜಿಲ್ ತಂದೆ ಆರೋಪ

ನನ್ನ ಹಿರಿಯ ಮಗ ಆದಿಲ್ ನನ್ನೂ ಹತ್ಯೆ ಮಾಡಲು ಯತ್ನ ನಡಸಿದ್ದಾರೆಂದು 2022ರ ಆಗಸ್ಟ್‌ನಲ್ಲಿ ಸುರತ್ಕಲ್‌ನಲ್ಲಿ ಹತ್ಯೆಗೀಡಾದ ಮೊಹಮ್ಮದ್ ಫಾಜಿಲ್‌ನ ತಂದೆ ಉಮ್ಮರ್ ಫಾರೂಕ್ ಅವರು ಆರೋಪಿಸಿದ್ದಾರೆ.

ಮಂಗಳೂರು: ನನ್ನ ಹಿರಿಯ ಮಗ ಆದಿಲ್ ನನ್ನೂ ಹತ್ಯೆ ಮಾಡಲು ಯತ್ನ ನಡಸಿದ್ದಾರೆಂದು 2022ರ ಆಗಸ್ಟ್‌ನಲ್ಲಿ ಸುರತ್ಕಲ್‌ನಲ್ಲಿ ಹತ್ಯೆಗೀಡಾದ ಮೊಹಮ್ಮದ್ ಫಾಜಿಲ್‌ನ ತಂದೆ ಉಮ್ಮರ್ ಫಾರೂಕ್ ಅವರು ಆರೋಪಿಸಿದ್ದಾರೆ.

ಈ ಸಂಬಂಧ ವಿಡಿಯೋ ಮೂಲಕ ಹೇಳಿಕೆ ನೀಡಿರುವ ಉಮ್ಮರ್ ಫಾರೂಖ್ ಅವರು, ಫಾಜಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಕೆಲಸಗಳಿಗೆ ಆದಿಲ್ ಉಲ್ಲಾಳಕ್ಕೆ ಹೋಗಿಲ್ಲ. ಕೆಲಸ ಬಳಿಕ ಮನೆಗೆ ಹಿಂತಿರುಗುತಿತದ್ದ ಗಣೇಶಪುರದಲ್ಲಿ ಕೆಲವರು ದಾಳಿ ನಡೆಸಿದ್ದಾರೆ. ಉದ್ದೇಶಪೂರ್ವಕವಾಗಿ ಕೆಲವರು ಕಾರಿಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಇದನ್ನು ಸಣ್ಣ ಗಲಾಟೆಯೆಂದು ಬಿಂಬಿಸಲಾಗುತ್ತಿದೆ. ಆದರೆ, ಇದೊಂದು ಪೂರ್ವಯೋಜಿತ ಕೊಲೆ ಯತ್ನವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಕಾರಿನೊಳಗೆ ನುಗ್ಗಿದ್ದವರ ಕೈಯಗಳಲ್ಲಿ ಶಸ್ತ್ರಾಸ್ತ್ರಗಳು ಕಂಡು ಬಂದಿತ್ತು. ನನ್ನ ಮಗನ ಮುಖ ಹಾಗೂ ಎದೆ ಭಾಗದಲ್ಲಿ ಗಾಯಗಳಾಗಿವೆ. ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಕೂಡ ಘಟನೆಯನ್ನು ಸಣ್ಣ ಪ್ರಕರಣ ಎಂದು ಬಣ್ಣಿಸಿದ್ದಾರೆಂದು ತಿಳಿಸಿದ್ದಾರೆ.

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಹಿಂದುತ್ವವಾದಿಗಳು ಫಾಜಿಲ್‌ನನ್ನು ಹತ್ಯೆ ಮಾಡಿದ್ದಾರೆಂದು ಈ ಹಿಂದೆ ವಿಎಚ್‌ಪಿ ನಾಯಕ ಶರಣ್ ಪಂಪ್‌ವೆಲ್ ಹೇಳಿದ್ದರು. ಈ ಸಂಬಂಧ ನಾನು ಪೊಲೀಸರಿಗೆ ದೂರು ನೀಡಿದ್ದೇನೆಂದು ಹೇಳಿದ್ದಾರೆ.

ಈ ನಡುವೆ ದಾಳಿ ಸಂಬಂಧ ಆದಿಲ್ ಅವರು ದೂರು ನೀಡಿದ್ದು, ನಾಗೇಶ್ ಎಂಬಾತ ದಾಳಿ ವೇಳೆ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ದಾಳಿ ನಡೆಸಿದ ವ್ಯಕ್ತಿಗಳು ನನಗೆ ಜೀವ ಬೆದರಿಗೆ ಹಾಕಿದ್ದರು ಎಂದು ಹೇಳಿದ್ದು, ಪ್ರೀತನ್ ಶೆಟ್ಟಿ, ಆಕಾಶ್, ಪ್ರಕಾಶ್, ಹರ್ಷಿತ್ ಹಾಗೂ ಅಪರಿಚಿತ ವ್ಯಕ್ತಿಗಳ ಹೆಸರನ್ನು ಹೆಸರಿಸಿದ್ದಾರೆಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT