ಏರೋ ಇಂಡಿಯಾ 2023 ರಲ್ಲಿ ಲಘು ಯುದ್ಧ ವಿಮಾನ ತೇಜಸ್ ಪ್ರದರ್ಶನ 
ರಾಜ್ಯ

ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ ಉತ್ಪನ್ನಗಳಿಗೆ ಬೇಡಿಕೆ: 84 ಸಾವಿರ ಕೋಟಿ ರೂ. ಮೊತ್ತದ ಆರ್ಡರ್ ಬುಕ್ಕಿಂಗ್!

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ (HAL) ಆರ್ಡರ್ ಪುಸ್ತಕದಲ್ಲಿ 84,000 ಕೋಟಿ ರೂಪಾಯಿಗಳ ಬುಕ್ಕಿಂಗ್ ನಿಂದ ತುಂಬಿದ್ದು, ಇನ್ನೂ 50,000 ಕೋಟಿ ರೂಪಾಯಿ ಆರ್ಡರ್ ಗಳು ಬುಕ್ಕಿಂಗ್ ಹಾದಿಯಲ್ಲಿವೆ ಎಂದು ಎಚ್ಎಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿ.ಬಿ.ಅನಂತಕೃಷ್ಣನ್ ತಿಳಿಸಿದ್ದಾರೆ.

ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ (HAL) ಆರ್ಡರ್ ಪುಸ್ತಕದಲ್ಲಿ 84,000 ಕೋಟಿ ರೂಪಾಯಿಗಳ ಬುಕ್ಕಿಂಗ್ ನಿಂದ ತುಂಬಿದ್ದು, ಇನ್ನೂ 50,000 ಕೋಟಿ ರೂಪಾಯಿ ಆರ್ಡರ್ ಗಳು ಬುಕ್ಕಿಂಗ್ ಹಾದಿಯಲ್ಲಿವೆ ಎಂದು ಎಚ್ಎಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿ.ಬಿ.ಅನಂತಕೃಷ್ಣನ್ ತಿಳಿಸಿದ್ದಾರೆ.

ಸಂಶೋಧನೆ ಮತ್ತು ಅಭಿವೃದ್ಧಿಗೆ ಒತ್ತು ನೀಡುತ್ತಿದ್ದು, ಇದರಿಂದ ಹೆಚ್ಚಿನ ಉತ್ಪನ್ನಗಳನ್ನು ತಯಾರಿಸಲು ಸಾಧ್ಯವಾಗುತ್ತದೆ. “ಆತ್ಮನಿರ್ಭರ್ ಭಾರತ್ ಮತ್ತು ಇತ್ತೀಚಿನ ಭೌಗೋಳಿಕ ರಾಜಕೀಯ ಪರಿಸ್ಥಿತಿಯು ಸಾಮಾನ್ಯವಾಗಿ ದೇಶದ ರಕ್ಷಣಾ ಪರಿಸರ ವ್ಯವಸ್ಥೆಗೆ ಮತ್ತು ನಿರ್ದಿಷ್ಟವಾಗಿ ಎಚ್‌ಎಎಲ್‌ಗೆ ಪೂರಕ ವಾತಾರವಣವನ್ನು ನಿರ್ಮಿಸುತ್ತದೆ. ನಮ್ಮ ಆರ್ಡರ್ ಬುಕ್ 84,000 ಕೋಟಿ ರೂಪಾಯಿಗಳ ಆರ್ಡರ್‌ಗಳೊಂದಿಗೆ ಆರಾಮದಾಯಕವಾಗಿದೆಯ ನಮ್ಮ ಆರ್ಡರ್‌ಗಳು 50,000 ಕೋಟಿ ರೂಪಾಯಿಗಳಾಗಿದೆ ಎಂದರು.

ಏರೋ ಇಂಡಿಯಾದ ಕೊನೆಯ ಆವೃತ್ತಿಯಲ್ಲಿ ಸಹಿ ಹಾಕಲಾದ 83 ಹಗುರ ಯುದ್ಧ ವಿಮಾನಗಳು(LCA) ತೇಜಸ್ ಮಾರ್ಕ್ 1ಎ ಏರ್‌ಕ್ರಾಫ್ಟ್ ಒಪ್ಪಂದದಲ್ಲಿ, ಎಚ್‌ಎಎಲ್ ಮೊದಲ ವಿಮಾನವನ್ನು ತಲುಪಿಸಬೇಕಾಗಿದೆ. ಎಲ್ಲಾ ಚಟುವಟಿಕೆಗಳು ವೇಳಾಪಟ್ಟಿಯಂತೆ ನಡೆಯುತ್ತಿವೆ ಮತ್ತು ವಿತರಣಾ ಸಮಯಾವಧಿಯನ್ನು ಪೂರೈಸುವ ವಿಶ್ವಾಸವಿದೆ ಎಂದು ಹೆಚ್ ಎಎಲ್ ಅಧಿಕಾರಿಗಳು ಹೇಳಿದ್ದಾರೆ. 

ರಫ್ತು ವಿಷಯದಲ್ಲಿ, ಈಜಿಪ್ಟ್ ಮತ್ತು ಅರ್ಜೆಂಟೀನಾ ಸ್ವದೇಶಿ LCA ತೇಜಸ್‌ನಲ್ಲಿ ಆಸಕ್ತಿಯನ್ನು ತೋರಿಸಿವೆ, HAL ಸಹ ಕೆಲವು ಹಿನ್ನಡೆಗಳ ಹೊರತಾಗಿಯೂ ಮಲೇಷ್ಯಾದೊಂದಿಗೆ ಒಪ್ಪಂದಕ್ಕೆ ಪ್ರಯತ್ನಿಸುತ್ತಿದೆ. HAL ಅರ್ಜೆಂಟೀನಾದೊಂದಿಗೆ 15 ವಿಮಾನಗಳಿಗಾಗಿ ಚರ್ಚಿಸುತ್ತಿದ್ದು, ಈಜಿಪ್ಟ್‌ಗೆ ಸುಮಾರು 20 ವಿಮಾನಗಳನ್ನು ಒದಗಿಸುತ್ತಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಆಪರೇಷನ್ ಸಿಂಧೂರ ವೇಳೆಯ 'ಅಪವಿತ್ರ ಮೈತ್ರಿ'ಯನ್ನು ಸದ್ದಿಲ್ಲದೆ ಒಪ್ಪಿಕೊಂಡ ಮೋದಿ ಸರ್ಕಾರ! ಚೀನಾ ಆಕ್ರಮಣವನ್ನು ಕಾನೂನುಬದ್ಧಗೊಳಿಸುತ್ತಿದ್ದೆಯೇ? ಕಾಂಗ್ರೆಸ್

ಪರಸ್ಪರ ನಂಬಿಕೆ, ಗೌರವದ ಆಧಾರದ ಮೇಲೆ ಸಂಬಂಧ ಮುಂದುವರಿಸಲು ಬದ್ಧ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಪ್ರಧಾನಿ ಮೋದಿ

SCO ಶೃಂಗಸಭೆ: ಮೋದಿ ಭೇಟಿ ಹಿನ್ನೆಲೆ, ಅಮೆರಿಕದ ಸುಂಕಾಸ್ತ್ರ ವಿರುದ್ಧ ರಷ್ಯಾ ಅಧ್ಯಕ್ಷ ಪುಟಿನ್ ಕಿಡಿ! ಹೇಳಿದ್ದು ಏನು?

Pepsi To McDonald: ಸುಂಕ ಸಂಘರ್ಷದ ನಡುವೆ ಅಮೆರಿಕದ ದೈತ್ಯ ಕಂಪನಿಗಳಿಗೆ ಭಾರತದಲ್ಲಿ #Boycott ಬಿಸಿ!

SCO ಶೃಂಗಸಭೆ: ಪುಟಿನ್ ಭೇಟಿಗೂ ಮುನ್ನ ಉಕ್ರೇನ್ ಜೊತೆ ಮೋದಿ ಮಾತು; ರಷ್ಯಾಕ್ಕೆ ಸೂಕ್ತ ಸಂದೇಶ ನೀಡಲು ಭಾರತ ಸಿದ್ಧ!

SCROLL FOR NEXT