ಡಿ ರೂಪಾ ಮೌದ್ಗಿಲ್ 
ರಾಜ್ಯ

ಆರೋಪಗಳ ಸುರಿಮಳೆಗೈದು ಪ್ರಶ್ನೆ ಮಾಡಿದ್ದ ಐಪಿಎಸ್ ಅಧಿಕಾರಿ ಡಿ ರೂಪಾಗೆ ರೋಹಿಣಿ ಸಿಂಧೂರಿ ಅಭಿಮಾನಿಗಳ 9 ಪ್ರಶ್ನೆ

ಕರ್ನಾಟಕದ ಇಬ್ಬರು ಮಹಿಳಾ ಅಧಿಕಾರಿಗಳ ನಡುವಿನ ವಾಕ್ಸಮರಕ್ಕೆ ಗಂಟೆಗೊಬ್ಬರಂತೆ ಹೊಸ ಜನರ ಎಂಟ್ರಿಯಾಗುತ್ತಿದೆ. ರಾಜ್ಯದಲ್ಲಿ ಐಪಿಎಸ್ ​(IPS) vs ಐಎಎಸ್ (IAS) ಮಹಿಳಾ ಅಧಿಕಾರಿಗಳ ಮಧ್ಯೆ ಆರೋಪ-ಪ್ರತ್ಯಾರೋಪ ತಾರಕಕ್ಕೇರಿದೆ.

ಬೆಂಗಳೂರು: ಕರ್ನಾಟಕದ ಇಬ್ಬರು ಮಹಿಳಾ ಅಧಿಕಾರಿಗಳ ನಡುವಿನ ವಾಕ್ಸಮರಕ್ಕೆ ಗಂಟೆಗೊಬ್ಬರಂತೆ ಹೊಸ ಜನರ ಎಂಟ್ರಿಯಾಗುತ್ತಿದೆ. ರಾಜ್ಯದಲ್ಲಿ ಐಪಿಎಸ್ ​(IPS) vs ಐಎಎಸ್ (IAS) ಮಹಿಳಾ ಅಧಿಕಾರಿಗಳ ಮಧ್ಯೆ ಆರೋಪ-ಪ್ರತ್ಯಾರೋಪ ತಾರಕಕ್ಕೇರಿದೆ. ಐಪಿಎಸ್ ಅಧಿಕಾರ ಡಿ ರೂಪಾ (D Roopa), ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಮೇಲೆ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿ ಆರೋಪ ಮಾಡಿದ್ದರು. ಟ್ವಿಟ್ಟರ್ ನಲ್ಲಿ ಸರಣಿ ಪ್ರಶ್ನೆಗಳನ್ನು ಕೇಳಿದ್ದರು.

ಅದಕ್ಕೀಗ ರೋಹಿಣಿ ಸಿಂಧೂರಿ ಅಭಿಮಾನಿಗಳು ಫೇಸ್​ಬುಕ್​, ಟ್ವಿಟ್ಟರ್ ನಲ್ಲಿ ಸರಣಿ ಟ್ವೀಟ್ ಗಳ ಮೂಲಕ ಪ್ರಶ್ನೆಗಳನ್ನು ಕೇಳಿ ಕೌಂಟರ್ ಕೊಡುವ ಪ್ರಯತ್ನ ಮಾಡಿದ್ದಾರೆ. ಡಿ ರೂಪಾ ಅವರಿಗೆ ಸರಣಿ 9 ಪ್ರಶ್ನೆಗಳನ್ನು ಕೇಳಿದ್ದಾರೆ. ರೋಹಿಣಿ ಸಿಂಧೂರಿಯ ಅಭಿಮಾನಿಗಳು ರೋಹಿಣಿ ಸಿಂಧೂರಿ ಆರ್ಗನೈಜೇಷನ್ ಸೋಷಿಯಲ್ ಮೀಡಿಯಾ ಖಾತೆ ಮೂಲಕ ಹ್ಯಾಷಟ್ಯಾಗ್ ಉತ್ತರ ಕೊಡಿ ರೂಪಾ ಅವರೇ (#UttaraKodiRoopaAvre) ಎಂದು ಪ್ರಶ್ನೆ ಕೇಳಿದ್ದಾರೆ.

​ರೋಹಿಣಿ ಅಭಿಮಾನಿಗಳು ಕೇಳಿರುವ ಪ್ರಶ್ನೆಗಳು ಹೀಗಿವೆ: 

ರೋಹಿಣಿ ಅಭಿಮಾನಿಗಳ ಪ್ರಶ್ನೆ-1
ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ #RohiniSindhuri ಅವರದ್ದು ಏನೂ ತಪ್ಪಿಲ್ಲ ಎಂದು ಈಗಾಗಲೇ ಎಲ್ಲರಿಗೂ ತಿಳಿದಿದ್ದು, ಮತ್ತೆ ಮತ್ತೆ ನೀವು ಅವರ ಮೇಲೆ ಆರೋಪ ಹೊರಿಸುತ್ತಿರುವುದು ಏಕೆ?

ರೋಹಿಣಿ ಅಭಿಮಾನಿಗಳ ಪ್ರಶ್ನೆ -2
ಹಿರಿಯ ಐಪಿಎಸ್ ಅಧಿಕಾರಿಯಾದ ತಮ್ಮ ಗಮನಕ್ಕೆ ಈ ಆದೇಶ ಬಂದಿಲ್ಲವೇ 

ರೋಹಿಣಿ ಅಭಿಮಾನಿಗಳ ಪ್ರಶ್ನೆ-3
ತಮ್ಮ ಟ್ವೀಟ್​​ನಲ್ಲಿ ಶಿಲ್ಪಾನಾಗ್ ಅವರನ್ನು ‘ಕನ್ನಡತಿ’ ಎಂದು ಹೈಲೈಟ್ ಮಾಡಿರುವ ತಾವು, ಸಿಂಧೂರಿಯವರು ಎಂದಾದರೂ ಕನ್ನಡಿಗರನ್ನು ದ್ವೇಷಿಸಿದ್ದನ್ನು ನೋಡಿದ್ದೀರಾ? ಅವರು ಯಾವುದೇ ವೇದಿಕೆ ಮೇಲೆ ತೆಲುಗಿನಲ್ಲಿ ಭಾಷಣ ಮಾಡಿದ್ದನ್ನು ನೋಡಿದ್ದೀರಾ? ಕರ್ನಾಟಕಕ್ಕೆ ಬಂದ ಕೆಲವೇ ಸಮಯಗಳಲ್ಲಿ ಕನ್ನಡ ಕಲಿತು ಕನ್ನಡದಲ್ಲಿಯೇ ಮಾತನಾಡಿದ್ದಾರೆ.

ರೋಹಿಣಿ ಅಭಿಮಾನಿಗಳ ಪ್ರಶ್ನೆ -4
ತಾವು ನಿನ್ನೆ ಮಾತನಾಡುವಾಗ ‘ರೋಹಿಣಿಗೂ ನನಗೂ ಹೋಲಿಸಬೇಡಿ’ ಎಂದಿದ್ರಿ, ಇಷ್ಟೆಲ್ಲಾ ನಡೆದರೂ ‘ಎಂದಿನಂತೆ ಶ್ರದ್ಧೆಯಿಂದ ಕೆಲಸ ಮಾಡ್ತೀನಿ’ ಎನ್ನುವ ಅವರೆಲ್ಲಿ.? ಮಾಧ್ಯಮಗಳ ಗಮನ ತಮ್ಮೆಡೆಗೆ ಪ್ರಯತ್ನಿಸುತ್ತಿರುವ ನೀವೆಲ್ಲಿ?

ರೋಹಿಣಿ ಅಭಿಮಾನಿಗಳ ಪ್ರಶ್ನೆ -5
ಮೈಸೂರಿನ ಡಿಸಿ ನಿವಾಸದ ಈಜುಕೊಳ ನಿರ್ಮಾಣದ ಯೋಜನೆ ಮತ್ತು ಯೋಚನೆ ಎರಡು ನನ್ನದಲ್ಲ ಎಂದು ಸಿಂಧೂರಿಯವರು ಸ್ಪಷ್ಟಪಡಿಸಿದ್ದು ತಮ್ಮ ಗಮನಕ್ಕೆ ಬಂದಿಲ್ಲವೇ ಮೇಡಂ?

ರೋಹಿಣಿ ಅಭಿಮಾನಿಗಳ ಪ್ರಶ್ನೆ -6
‘ಗಾಯಕ ಲಕ್ಕಿ ಅಲಿ ಜಮೀನಿಗೂ ಮತ್ತು ನನಗೂ ಯಾವುದು ಸಂಬಂಧ ಇಲ್ಲ’ ಎಂದು ಸಿಂಧೂರಿಯವರು ಸ್ಪಷ್ಟಪಡಿಸಿದ್ದಾರೆ, ಅವರ ಕುಟುಂಬದ ಯಾರ ಮೇಲೆ ಆರೋಪ ಬಂದರೂ, ಸಿಂಧೂರಿಯವರ ಮೇಲೆ ನೇರ ಆರೋಪ ಹೊರಿಸುವುದು ಏಕೆ?

ರೋಹಿಣಿ ಅಭಿಮಾನಿಗಳ ಪ್ರಶ್ನೆ -7
ಎಲ್ಲಾ ಕನ್ನಡಿಗರಿಗೆ ತಮ್ಮ ಮೇಲೆ ಅಪಾರ ಗೌರವವಿದೆ, ಕನ್ನಡದ ಎಲ್ಲಾ ಹೆಣ್ಣು ಮಕ್ಕಳಿಗೆ ತಾವೇ ದೊಡ್ಡ ಸ್ಪೂರ್ತಿ, ಇದರ ನಡುವೆ ಕರ್ನಾಟಕ ಸರ್ಕಾರದ ಹಿರಿಯ, ಮಹಿಳಾ ಅಧಿಕಾರಿಯನ್ನು ಬೇರೆ ರಾಜ್ಯದವರು ಎಂದು ಹೇಳಿ ನೋವುಂಟು ಮಾಡುವುದು ಸರಿಯೇ?

ರೋಹಿಣಿ ಅಭಿಮಾನಿಗಳ ಪ್ರಶ್ನೆ -8
ಸಿಂಧೂರಿಯವರು ಕರ್ನಾಟಕಕ್ಕೆ ಬಂದ ಆರೇ ತಿಂಗಳಲ್ಲಿ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುವುದನ್ನು ಕಲಿತಿದ್ದಾರೆ, ಅವರು ತಮ್ಮ ಕಚೇರಿ ವೇಳೆಯಲ್ಲಿ ಎಂದಾದರೂ ಕನ್ನಡಿಗರನ್ನು ಕಡೆಗಣಿಸಿರುವುದು ತಮ್ಮ ಗಮನಕ್ಕೆ ಬಂದಿದೆಯೇ?

ರೋಹಿಣಿ ಅಭಿಮಾನಿಗಳ ಪ್ರಶ್ನೆ-9
ರೋಹಿಣಿ ಅವರ ಮೇಲೆ ಯಾವುದೇ ಆರೋಪ ಇದ್ದರೂ, ಅದನ್ನು ನೇರವಾಗಿ @CSofKarnataka ಹಾಗೂ @DgpKarnataka ರವರ ಗಮನಕ್ಕೆ ತರದೆ, WhastApp Screenshot ಗಳಲ್ಲಿ ತೆಗೆದ ಅವರ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದು ಸರಿಯೇ? ಉತ್ತರ ಕೊಡಿ ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಲಬುರಗಿ: ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

Punishment: 5 ವರ್ಷದ ಬಾಲಕನನ್ನು ಮರಕ್ಕೆ ನೇತು ಹಾಕಿದ ಶಿಕ್ಷಕಿ!

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

SCROLL FOR NEXT