ಸಾಂದರ್ಭಿಕ ಚಿತ್ರ 
ರಾಜ್ಯ

ಹಾಸನ: ನಿಂತಿದ್ದ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿ; ದಂಪತಿ, ಇಬ್ಬರು ಮಕ್ಕಳು ಸಾವು

ನಿಂತಿದ್ದ ಟ್ರ್ಯಾಕ್ಟರ್ ಒಂದಕ್ಕೆ ಬೈಕ್ ಡಿಕ್ಕಿಯಾಗಿ ದಂಪತಿ ಹಾಗೂ ಇಬ್ಬರು ಮಕ್ಕಳು ಸೇರಿದತೆ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿರುವ ದಾರುಣ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ...

ಹಾಸನ: ನಿಂತಿದ್ದ ಟ್ರ್ಯಾಕ್ಟರ್ ಒಂದಕ್ಕೆ ಬೈಕ್ ಡಿಕ್ಕಿಯಾಗಿ ದಂಪತಿ ಹಾಗೂ ಇಬ್ಬರು ಮಕ್ಕಳು ಸೇರಿದತೆ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿರುವ ದಾರುಣ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ತಿಪಟೂರು ಮುಖ್ಯ ರಸ್ತೆಯ ನವಿಲೇ ಗೇಟ್ ಬಳಿ ಈ ಅಪಘಾತ ಸಂಭವಿಸಿದ್ದು, ಮೃತರನ್ನು ತಿಪಟೂರು ತಾಲೂಕಿನ ಎಡಗರಹಳ್ಳಿ ಗ್ರಾಮದ ಯೋಗೇಶ್ ಆಚಾರಿ(35) ಅವರ ಪತ್ನಿ ಲಕ್ಷ್ಮಿ(27) ಹಾಗೂ ಯೋಗೇಶ್ ಆಚಾರಿ ತಂಗಿಯ ಮಕ್ಕಳಾದ ಗಾನವಿ(12) ತೇಜು(4) ಎಂದು ಗುರುತಿಸಲಾಗಿದೆ.

ಮೃತ ದಂಪತಿ ಅನೇಕ ವರ್ಷಗಳಿಂದ ನವಿಲೇ ಗೇಟ್ ನಲ್ಲಿ ವಾಸವಾಗಿದ್ದರು. ಶನಿವಾರ ತಮ್ಮ ಹುಟ್ಟೂರಿನಿಂದ ನವಲೆ ಗೇಟ್ ಗೆ ಬರುವಾಗ ಈ ಅಪಘಾತ ಸಂಭವಿಸಿದೆ. ಡೀಸೆಲ್ ಖಾಲಿಯಾದ ಹಿನ್ನೆಲೆಯಲ್ಲಿ ಟ್ಯಾಕ್ಟರ್ ಅನ್ನು ಚಾಲಕ ಅಜಾಗರೂಕತೆಯಿಂದ ನಡು ರಸ್ತೆಯ ಮೇಲೆ ಬಿಟ್ಟು ಹೋಗಿದ್ದರಿಂದ ಈ ಅಪಘಾತ ಸಂಭವಿಸಿದೆ.

ಈ ಸಂಬಂಧ ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾಲಿಲ್ಲ-ಮಾತನಾಡಲಾಗುತ್ತಿಲ್ಲ, ತೀವ್ರವಾಗಿ ಸುಟ್ಟು ಹೋದ ಖಮೇನಿ ಮುಖ; ಇರಾನ್ ಪರಮೋಚ್ಛ ನಾಯಕನ ಆರೋಗ್ಯದ ಬಗ್ಗೆ ಬಿಗ್​ ಅಪ್ಡೇಟ್​..!

ಭಾರತವನ್ನು ‘ನರಕಕೂಪ’ವೆಂದು ಹೀಯಾಳಿಸಿದ ಟ್ರಂಪ್: ಅಜ್ಞಾನಪೂರ್ಣ ಹೇಳಿಕೆ; ವಿದೇಶಾಂಗ ಇಲಾಖೆ ತೀವ್ರ ಕಿಡಿ

ಸಂಘದಿಂದ ಎರವಲು ಪಡೆದ Ai ಬಳಸುವುದಕ್ಕಿಂತ Oi ಬಳಸಿದರೆ BJP ಕೇಸರಲ್ಲಿ ಮುಳುಗುವುದರಿಂದ ಬಚಾವಾಗಬಹುದು: JDS ಕುರಿತು ಪ್ರಿಯಾಂಕ್ ಖರ್ಗೆ ವ್ಯಂಗ್ಯ

ನವೋದ್ಯಮ, ನಾವೀನ್ಯತೆ ಬಲವರ್ಧನೆ: ಐಡಿಯಾಬಾಜ್ ಟೆಕ್ ಜೊತೆಗಿನ ಒಪ್ಪಂದಕ್ಕೆ ರಾಜ್ಯ ಸರ್ಕಾರ ಸಹಿ!

ಅಣ್ಣ from Mexico'ಚಿತ್ರದ ಟೀಸರ್ ಬಿಡುಗಡೆ: ಕನ್ನಡ ಚಿತ್ರರಂಗ ಶ್ರೀಮಂತ ಪರಂಪರೆ ಹೊಂದಿದೆ- ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

SCROLL FOR NEXT