HAL ನಿರ್ಮಿತ 228 ವಿಮಾನದ ನವೀಕರಣಕ್ಕೆ DGCA ಒಪ್ಪಿಗೆ 
ರಾಜ್ಯ

'ಮೇಡ್ ಇನ್ ಇಂಡಿಯಾ': HAL ನಿರ್ಮಿತ 228 ವಿಮಾನದ ನವೀಕರಣಕ್ಕೆ DGCA ಒಪ್ಪಿಗೆ

ಮಹತ್ವದ ಬೆಳವಣಿಗೆಯಲ್ಲಿ 'ಮೇಡ್ ಇನ್ ಇಂಡಿಯಾ' ಯೋಜನೆಯಡಿಯಲ್ಲಿ 'ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌'' (HAL) ನಿರ್ಮಿತ ವಿಮಾನದ ನವೀಕರಣಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಅನುಮೋದನೆ ನೀಡಿದೆ. 

ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ 'ಮೇಡ್ ಇನ್ ಇಂಡಿಯಾ' ಯೋಜನೆಯಡಿಯಲ್ಲಿ 'ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌'' (HAL) ನಿರ್ಮಿತ ವಿಮಾನದ ನವೀಕರಣಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಅನುಮೋದನೆ ನೀಡಿದೆ. 

HALನಿಂದ 'ಹಿಂದೂಸ್ತಾನ್ 228-201LW' ವಿಮಾನದ ಹೊಸ ರೂಪಾಂತರವನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಅನುಮೋದಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

HAL ಮೂಲಗಳ ಪ್ರಕಾರ ಹಿಂದೂಸ್ತಾನ್ 228-201LW ಆವೃತ್ತಿಯು 19 ಪ್ರಯಾಣಿಕರ ಸಾಮರ್ಥ್ಯದ ವಿಮಾನವು 5,695 ಕೆಜಿ ಗರಿಷ್ಠ ಟೇಕ್-ಆಫ್ ತೂಕವನ್ನು ಹೊಂದಿದ್ದು, ಈ ಮಾರ್ಪಾಡಿನೊಂದಿಗೆ, ವಿಮಾನವು ಉಪ-5,700 ಕೆಜಿ ವಿಮಾನ ವಿಭಾಗಕ್ಕೆ ಸೇರುತ್ತದೆ ಎಂದು ಬೆಂಗಳೂರು ಪ್ರಧಾನ ಕಚೇರಿಯ HAL ಹೇಳಿಕೆಯಲ್ಲಿ ತಿಳಿಸಿದೆ.

 "ಈ ರೂಪಾಂತರವು ನಿರ್ವಾಹಕರಿಗೆ ಕಡಿಮೆ ಪೈಲಟ್ ಅರ್ಹತೆಯ ಅಗತ್ಯತೆಗಳಂತಹ ಹಲವಾರು ಕಾರ್ಯಾಚರಣೆಯ ಪ್ರಯೋಜನಗಳನ್ನು ನೀಡುತ್ತದೆ, ವಾಣಿಜ್ಯ ಪೈಲಟ್ ಪರವಾನಗಿ ಹೊಂದಿರುವ ಪೈಲಟ್‌ಗಳಿಗೆ ವಿಮಾನವನ್ನು ಹಾರಿಸಲು ಅನುವು ಮಾಡಿಕೊಡುತ್ತದೆ ಮತ್ತು ವಿಮಾನಕ್ಕಾಗಿ ಪೈಲಟ್ ಪೂಲ್ ಲಭ್ಯತೆ ಮತ್ತು ಕಡಿಮೆ ಕಾರ್ಯಾಚರಣೆಯ ವೆಚ್ಚವನ್ನು ಹೆಚ್ಚಿಸುತ್ತದೆ. ಅಂತೆಯೇ ಹೆಚ್ಚುವರಿಯಾಗಿ, ಹೊಸ ಆವೃತ್ತಿಯು ವಿಮಾನ ನಿರ್ವಹಣಾ ಎಂಜಿನಿಯರ್‌ಗಳು ಸೇರಿದಂತೆ ವಿಮಾನ ಮತ್ತು ನೆಲದ ಸಿಬ್ಬಂದಿಗೆ ತರಬೇತಿಯ ಅವಶ್ಯಕತೆಗಳನ್ನು ಕಡಿಮೆ ಮಾಡುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ