ರೋಹಿಣಿ ಸಿಂಧೂರಿ ಅಭಿಮಾನಿಗಳಿಂದ ಮೈಸೂರಿನಲ್ಲಿ ಪ್ರತಿಭಟನೆ 
ರಾಜ್ಯ

ರೋಹಿಣಿ ಸಿಂಧೂರಿ ಮೈಸೂರು ಡಿಸಿಯಾಗಿದ್ದಾಗ ವಸ್ತುಗಳು ಕಾಣೆಯಾದ ಆರೋಪ: ಐಎಎಸ್ ಅಧಿಕಾರಿ ಅಭಿಮಾನಿಗಳಿಂದ ಪ್ರತಿಭಟನೆ 

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ರೂಪಾ ನಡುವಿನ ಜಟಾಪಟಿಗೆ ಅಂತ್ಯ ಕಾಣುತ್ತಿಲ್ಲ, ಸಿಂಧೂರಿ ಅವರ ಹಲವಾರು ಅಭಿಮಾನಿಗಳು ಮತ್ತು ಅನುಯಾಯಿಗಳು ಮೈಸೂರಿನ ಆಡಳಿತ ತರಬೇತಿ ಸಂಸ್ಥೆ (ATI) ಎದುರು ನಿನ್ನೆ ಸೋಮವಾರ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಮೈಸೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ರೂಪಾ ನಡುವಿನ ಜಟಾಪಟಿಗೆ ಅಂತ್ಯ ಕಾಣುತ್ತಿಲ್ಲ, ಸಿಂಧೂರಿ ಅವರ ಹಲವಾರು ಅಭಿಮಾನಿಗಳು ಮತ್ತು ಅನುಯಾಯಿಗಳು ಮೈಸೂರಿನ ಆಡಳಿತ ತರಬೇತಿ ಸಂಸ್ಥೆ (ATI) ಎದುರು ನಿನ್ನೆ ಸೋಮವಾರ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಐಪಿಎಸ್ ಅಧಿಕಾರಿ ರೂಪಾ ಅವರು ಸಿಂಧೂರಿ ವಿರುದ್ಧ ಮಾಡಿದ ಹಲವು ದೂರುಗಳು ಮತ್ತು ಆರೋಪಗಳ ಪೈಕಿ, ಎಟಿಐ ನಿರ್ದೇಶಕರು ಡಿಸಿಗೆ ಕಳುಹಿಸಿದ ಪತ್ರಕ್ಕೆ ಸಂಬಂಧಿಸಿದಂತೆ, ಅವರು ಎಟಿಐ ಆವರಣದಲ್ಲಿ ಅಲ್ಪಾವಧಿಗೆ ತಂಗಿದ್ದಾಗ ವಸ್ತುಗಳು ಕಾಣೆಯಾಗಿವೆ ಎಂದು ಆರೋಪಿಸಿದ್ದಾರೆ. ಸಿಂಧೂರಿ ಅವರು ಮೈಸೂರು ಡಿಸಿ ಆಗಿದ್ದಾಗ ಇಲ್ಲಿ ವಾಸಿಸುತ್ತಿದ್ದರು.

ವಸ್ತುಗಳನ್ನಿಟ್ಟು ಪ್ರತಿಭಟನೆ: ರೋಹಿಣಿ ಸಿಂಧೂರಿ ಅವರ ಹಲವಾರು ಅನುಯಾಯಿಗಳು ಎಟಿಐ ಆವರಣದ ಮುಂದೆ ವಸ್ತುಗಳ ಜೊತೆಗೆ ಜಮಾಯಿಸಿದ್ದರು. ಸಿಂಧೂರಿ ವಾಸ್ತವ್ಯದ ನಂತರ ಕನ್ನಡಕ, ದಿಂಬು, ಪಾತ್ರೆಗಳು ಮತ್ತು ಇತರ ವಸ್ತುಗಳು ಕಾಣೆಯಾಗಿದೆ ಎಂದು ರೂಪಾ ಅವರು ಆರೋಪಿಸಿದ್ದರು.

ಇದಕ್ಕೆ ನಿನ್ನೆ ಉತ್ತರ ನೀಡಲೆಂದು ತಮ್ಮನ್ನು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯ ಅಭಿಮಾನಿಗಳು ಮತ್ತು ಅನುಯಾಯಿಗಳು ಎಂದು ಕರೆದುಕೊಂಡ ಪ್ರತಿಭಟನಾಕಾರರು ಸಿಂಧೂರಿ ಪರವಾಗಿ ಘೋಷಣೆಗಳನ್ನು ಕೂಗಿದರು ಮತ್ತು ಸಿಂಧೂರಿ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವ ಬದಲು ಆ ವಸ್ತುಗಳನ್ನು ತೆಗೆದುಕೊಂಡು ಹೋಗುವಂತೆ ಒತ್ತಾಯಿಸಿದರು.

ಪ್ರತಿಭಟನಾಕಾರ ತೇಜಸ್, “ಸಮರ್ಥ ಆಡಳಿತಕ್ಕೆ ಹೆಸರಾದ ರೋಹಿಣಿ ಸಿಂಧೂರಿ ವಿರುದ್ಧ ಅನೇಕ ಊಹಾಪೋಹಗಳು ಮತ್ತು ಆರೋಪಗಳಿವೆ. ಆಕೆಯನ್ನು ಅನಗತ್ಯವಾಗಿ ಟಾರ್ಗೆಟ್ ಮಾಡಲಾಗಿದೆ. ಆಕೆಯ ಪ್ರತಿಷ್ಠೆಗೆ ಮಸಿ ಬಳಿಯಲು ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂಬ ಆರೋಪವನ್ನು ಎಳೆದು ತರಲಾಗಿದೆ. ಅವರ ಅಭಿಮಾನಿಗಳಾದ ನಾವು ಅದೇ ವಸ್ತುಗಳನ್ನು ತಂದಿದ್ದೇವೆ, ಕಾಣೆಯಾಗಿದೆ ಎಂದು ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಧರಣಿ ಕುಳಿತುಕೊಳ್ಳಲು ಅನುಮತಿ ಪಡೆಯದ ಪ್ರತಿಭಟನಾಕಾರರನ್ನು ಪೊಲೀಸರು ತೆರವುಗೊಳಿಸಿದರು. ಐಪಿಎಸ್ ಅಧಿಕಾರಿ ರೂಪಾ ಬೆಂಬಲಿಗರು ಪ್ರತಿಭಟನೆಯು ತಮ್ಮ ಮೊದಲ ವಿಜಯವಾಗಿದೆ ಎಂದು ಹೇಳಿದ್ದಾರೆ. ಸಿಂಧೂರಿ ಅವರ ಬೆಂಬಲಿಗರು ಎಟಿಐ ಅಧಿಕಾರಿಗಳಿಗೆ ಹಿಂತಿರುಗಿಸಲು ಪ್ರಯತ್ನಿಸುವ ಮೂಲಕ ಕಾಣೆಯಾದ ವಸ್ತುಗಳನ್ನು ಪರೋಕ್ಷವಾಗಿ ಹೊಣೆಗಾರಿಕೆಯನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT