250 ಪ್ರಕರಣ ಬೇಧಿಸಿದ್ದ ಶ್ವಾನ ರಾಮ್ 
ರಾಜ್ಯ

ರಾಮನಗರ: 250 ಪ್ರಕರಣದ ಬೇಧಿಸಿದ್ದ 'ರಾಮ್‌' ಹೃದಯಾಘಾತದಿಂದ ಸಾವು: ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ!

ರಾಮನಗರದಲ್ಲಿ ಕಳೆದ ಆರು ವರ್ಷಗಳಿಂದ ಅಪರಾಧ ಪತ್ತೆ ಕಾರ್ಯಾಚರಣೆಯಲ್ಲಿ ನಿಷ್ಣಾತನಾಗಿದ್ದ ಶ್ವಾನ ರಾಮ್‌ ಹೃದಯಾಘಾತದಿಂದ ಸಾವನ್ನಪ್ಪಿದೆ.

ರಾಮನಗರ: ರಾಮನಗರದಲ್ಲಿ ಕಳೆದ ಆರು ವರ್ಷಗಳಿಂದ ಅಪರಾಧ ಪತ್ತೆ ಕಾರ್ಯಾಚರಣೆಯಲ್ಲಿ ನಿಷ್ಣಾತನಾಗಿದ್ದ ಶ್ವಾನ ರಾಮ್‌ ಹೃದಯಾಘಾತದಿಂದ ಸಾವನ್ನಪ್ಪಿದೆ.

ಫೆಬ್ರವರಿ 8, 2017 ರಂದು ಜನಿಸಿದ ರಾಮ್, ಸುಮಾರು 250 ಪ್ರಕರಣಗಳಲ್ಲಿ ಪೊಲೀಸರಿಗೆ ಸಹಾಯ ಮಾಡಿದ ಡಾಬರ್ಮನ್ ಪಿನ್ಷರ್ ಆಗಿದ್ದು, ಈ ಪೈಕಿ ಪೊಲೀಸರ ಕೈಯಿಂದಲೂ ಪತ್ತೆಹಚ್ಚಲಾಗದ 30 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ರಾಮ್ ಶ್ವಾನ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿ ಆಗಿತ್ತು.

ಇದರಿಂದಾಗಿಯೇ ಜಿಲ್ಲಾ ಪೊಲೀಸ್‌ ಘಟಕದಲ್ಲಿ ಅತ್ಯಂತ ಪ್ರೀತಿ ಪಾತ್ರವಾಗಿತ್ತು. ಎಲ್ಲರ ಸ್ನೇಹವನ್ನು ಬಯಸದಿದ್ದರೂ, ಒಮ್ಮೆ ಪೊಲೀಸರನ್ನು ಹಚ್ಚಿಕೊಂಡರೆ ಅವರಿಗೆ ತುಂಬಾ ಆತ್ಮೀಯತೆಯಿಂದ ಇರುತ್ತಿತ್ತು. ಆದರೆ, ಇಂದು ರಾಮ್‌ ಶ್ವಾನ ಹೃದಯಾಘಾತಕ್ಕೆ ಒಳಗಾಗಿ ದಿಢೀರನೆ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.

ರಾಮ್ ರಾಜ್ಯ ಮಟ್ಟದ ಪೊಲೀಸ್ ಕರ್ತವ್ಯ ಸಭೆಯಲ್ಲೂ ಭಾಗವಹಿಸಿದ್ದರು. ರಾಮ್ ನೋಡಿಕೊಳ್ಳುತ್ತಿದ್ದ ರೂಪೇಶ್ ಅವರು ಅತೀವ ದುಃಖದಲ್ಲಿ ಮುಳುಗಿದ್ದರು. ಅಪರಾಧ ಪತ್ತೆ ದಳದ ರಾಮ್‌ ಶ್ವಾನವನ್ನು ಜಿಲ್ಲಾ ಪೊಲೀಸ್‌ ಘಟಕದಲ್ಲಿ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು. ಚನ್ನಪಟ್ಟಣದ ಡಿಎಆರ್ ಕವಾಯತು ಮೈದಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದ್ದು, ರಾಮ್ ಶ್ವಾನ ನಿಧನಕ್ಕೆ ರಾಮನಗರ ಜಿಲ್ಲಾ ಪೊಲೀಸರ ಸಂತಾಪ ಸೂಚಿಸಿದ್ದಾರೆ.

2021 ರಲ್ಲಿ, ಅಕ್ಕೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಕೊಲೆ ಪ್ರಕರಣವನ್ನು ಪರಿಹರಿಸಲು ನಾಯಿ ಸಹಾಯ ಮಾಡಿತು. ಆರೋಪಿಗಳು ಬೆಂಗಳೂರಿಗೆ ಪರಾರಿಯಾಗಿದ್ದರು. ಆದರೆ ಹೊರಡುವ ಮುನ್ನ ಅವರ ಮನೆಗೆ ಭೇಟಿ ನೀಡಿದ್ದರು. ರಾಮ್ ಸಹಾಯದಿಂದ ಆರೋಪಿಗಳ ಬಂಧನಕ್ಕೆ ಕಾರಣವಾಯಿತು.

ಕಗ್ಗಲಿಪುರ ಪೊಲೀಸ್ ವ್ಯಾಪ್ತಿಯಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಂದು ಚಾಕುವನ್ನು ಟ್ಯಾಂಕ್‌ಗೆ ಎಸೆದಿದ್ದ. ಪೊಲೀಸ್ ಶ್ವಾನವು ತನ್ನ ತಂಡಕ್ಕೆ ಚಾಕುವನ್ನು ಹುಡುಕಲು ಸಹಾಯ ಮಾಡಿತು, ನಂತರ ಆರೋಪಿಯನ್ನು ಬಂಧಿಸಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT