ರಾಜ್ಯ

ಪ್ರತಿಭಟನೆ ಕೈಬಿಟ್ಟ ಕ್ವಾರಿ ಮಾಲೀಕರು: ಮರಳಿ ಕಾರ್ಯಾಚರಣೆ ಆರಂಭ

Manjula VN

ಬೆಂಗಳೂರು: ಪ್ರತಿಭಟನೆ ಹಿಂಪಡೆದಿರುವ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಸಂಘವು ಶನಿವಾರದಿಂದ ತಮ್ಮ ಕಾರ್ಯಾಚರಣೆಯನ್ನು ಆರಂಭ ಮಾಡಿದ್ದಾರೆ.

ಕ್ವಾರಿ ಮಾಲೀಕರು ಡಿಸೆಂಬರ್ 21 ರಿಂದ ಮುಷ್ಕರ ಆರಂಭಿಸಿದ್ದರು, 2,800 ಕಲ್ಲು ಕ್ವಾರಿಗಳು ಮತ್ತು 1,980 ಸ್ಟೋನ್ ಕ್ರಷರ್ ಘಟಕಗಳಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದವು. ಇದರಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಿವಿಧ ಅಭಿವೃದ್ಧಿ ಕಾಮಗಾರಿಗಳ ಮೇಲೆ ಪರಿಣಾಮ ಬೀರಿತ್ತು.

ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಶುಕ್ರವಾರ ಮಾತುಕತೆ ನಡೆಸಿದ ನಂತರ ಧರಣಿ ಹಿಂಪಡೆದಿದ್ದೇವೆ ಎಂದು ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ತಿಳಿಸಿದ್ದಾರೆ.

"ನಮ್ಮ ಬೇಡಿಕೆಗಳು ಸಮರ್ಥನೀಯವಾಗಿವೆ ಎಂದು ಸಿಎಂಗೆ ಮನವರಿಕೆಯಾಗಿದೆ ಮತ್ತು ಸರ್ಕಾರವು ಅವುಗಳನ್ನು ಪರಿಗಣಿಸುತ್ತದೆ ಎಂದು ಭರವಸೆ ನೀಡಿದ್ದಾರೆಂದು ಹೇಳಿದ್ದಾರೆ.

ಮುಷ್ಕರದಿಂದಾಗಿ ಬೆಂಗಳೂರಿನಲ್ಲಿ ಏರೋ ಇಂಡಿಯಾ ಸಿದ್ಧತೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗಿದೆ. "ಇದು ಅತ್ಯಂತ ಪ್ರತಿಷ್ಠಿತ ಕಾರ್ಯಕ್ರಮವಾಗಿದೆ ಮತ್ತು ಅದರ ಮೇಲೆ ಯಾವುದೇ ಪರಿಣಾಮವು ರಾಜ್ಯದ ವರ್ಚಸ್ಸಿಗೆ ಧಕ್ಕೆಯುಂಟು ಮಾಡುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

ಕ್ರಷರ್‌ಗಳು ಮತ್ತು ಗುತ್ತಿಗೆದಾರರಿಂದ ತೆರಿಗೆ ದುಪ್ಪಟ್ಟು ಸಂಗ್ರಹವನ್ನು ರದ್ದುಪಡಿಸುವುದು, ನಿಯಮಗಳನ್ನು ತಿದ್ದುಪಡಿ ಮಾಡುವವರೆಗೆ ಮತ್ತು ನಮ್ಮ ಪರವಾನಗಿ ಮಿತಿಯನ್ನು ಹೆಚ್ಚಿಸುವವರೆಗೆ ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಥಾರಿಟಿಯಿಂದ ಡ್ರೋನ್ ಸಮೀಕ್ಷೆಯನ್ನು ಮುಂದೂಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಮುಂದೆ ಇಡಲಾಗಿತ್ತು ಎಂದು ಶೆಟ್ಟಿ ಮಾಹಿತಿ ನೀಡಿದ್ದಾರೆ.

SCROLL FOR NEXT