ಕೊಲೆಯಾದ ಯುವತಿ ಆರತಿ ಮತ್ತು ಶವವಾಗಿ ಪತ್ತೆಯಾದ ಆರೋಪಿ ತಿಮ್ಮಯ್ಯ 
ರಾಜ್ಯ

ಮಡಿಕೇರಿ: ಆರತಿ ಕೊಲೆ ಪ್ರಕರಣದ ಆರೋಪಿ ಮೃತದೇಹ ಕೆರೆಯಲ್ಲಿ ಪತ್ತೆ

ಮಡಿಕೇರಿಯ ಯುವತಿ ಆರತಿಯನ್ನು (Arathi) ಕೊಲೆಗೈದ ಆರೋಪಿ ತಿಮ್ಮಯ್ಯ (Thimmaiah) ಅವರ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ.

ಮಡಿಕೇರಿ:  ಮಡಿಕೇರಿಯ ಯುವತಿ ಆರತಿಯನ್ನು (Arathi) ಕೊಲೆಗೈದ ಆರೋಪಿ ತಿಮ್ಮಯ್ಯ (Thimmaiah) ಅವರ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ.

ವಿರಾಜಪೇಟೆ(Virajpet) ತಾಲ್ಲೂಕಿನ ಎರಡನೇ ರುದ್ರಗುಪ್ಪೆ ಗ್ರಾಮದಲ್ಲಿ ಇರುವ ತಿಮ್ಮಯ್ಯ ಅವರ ಮನೆ ಸಮೀಪದ ಕೆರೆಯಲ್ಲಿ ತಿಮ್ಮಯ್ಯನ ಮೃತದೇಹ ಪತ್ತೆಯಾಗಿದ್ದು, ಆತ್ಮಹತ್ಯೆಗೆ ಶರಣಾಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಕಳೆದ ಭಾನುವಾರ ಕತ್ತಿಯಿಂದ ಕಡಿದು ಆರತಿಯನ್ನು ಹತ್ಯೆ ಬಳಿಕ ಕೆರೆಗೆ ಹಾರಿ ತಿಮ್ಮಯ್ಯ ಆತ್ಮಹತ್ಯೆ ‌ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರದಿಂದ ತಿಮ್ಮಯ್ಯನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದರು. ಎರಡು ದಿನಗಳಿಂದ ಕೆರೆಯಲ್ಲಿ ನಿರಂತರವಾಗಿ ಹುಡುಕಾಟ ನಡೆಸಿದರೂ ತಿಮ್ಮಯ್ಯನ ಮೃತದೇಹ ಪತ್ತೆಯಾಗಿರಲಿಲ್ಲ. ಮಂಗಳವಾರ ಮಧ್ಯಾಹ್ನದ ಬಳಿಕ ಕೆರೆಯ ನೀರನ್ನು ಪಂಪ್‌ನಿಂದ ಖಾಲಿ ಮಾಡುತ್ತಿದ್ದಾಗ ತಡರಾತ್ರಿ ಮೃತದೇಹ ಪತ್ತೆಯಾಗಿದೆ.

ಭಾನುವಾರ ರಾತ್ರಿ ಯುವತಿಗೆ ಮೊಬೈಲ್ ಕರೆ ಮಾಡಿ ಮನೆಯಿಂದ ಹೊರಗೆ ಕರೆಸಿಕೊಂಡ ಆರೋಪಿಯು ಆಕೆಯ ಮನೆಯ ಸಮೀಪವೆ ಕತ್ತಿಯಿಂದ ಕುತ್ತಿಗೆ ಹಾಗೂ ದೇಹದ ಇತರ ಭಾಗಗಳ ಮೇಲೆ ಹಲ್ಲೆ ಮಾಡಿ ಕೊಂದು ಹಾಕಿದ್ದ. ನಂತರ ತನ್ನ ಮನೆಗೆ ತೆರಳಿ ಕ್ರಿಮಿನಾಶಕ ಸೇವಿಸಿ ಕೆರೆಗೆ ಬಿದ್ದಿದ್ದ. ಕೆರೆಯ ದಡದಲ್ಲಿ ಅರ್ಧ ಖಾಲಿಯಾದ ಕ್ರಿಮಿನಾಶಕದ ಬಾಟಲಿ, ಚಪ್ಪಲಿ ಹಾಗೂ ಮೊಬೈಲ್ ಪತ್ತೆಯಾಗಿದ್ದು, ಎರಡು ದಿನಗಳಿಂದ ಶವಕ್ಕಾಗಿ ಶೋಧ ಕಾರ್ಯ ನಡೆಯುತ್ತಿತ್ತು. ಬುಧವಾರ ಬೆಳಿಗ್ಗೆ ಶವವು ಪತ್ತೆಯಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.

ಶವದ ಜಾಡು ಹಿಡಂದಿದ್ದ ಶ್ವಾನದಳ
ಶ್ವಾನದಳವು ಮೂರು ಬಾರಿ ಕೆರೆಯ ಬಳಿ ಬಂದಿದ್ದರಿಂದ ಕೆರೆಗೆ ಆರೋಪಿ ಬಿದ್ದಿರುವುದು ಬಹುತೇಕ ಖಚಿತವಾಗಿತ್ತು. 20 ಅಡಿ ಆಳದ ಕೆರೆಯಲ್ಲಿ ಆರೋಪಿಯ ಶವ ತಳದಲ್ಲಿ ಸಿಲುಕಿಕೊಂಡಿತ್ತು. ಕೆರೆಯ ಸ್ವಲ್ಪ ಭಾಗದ ನೀರನ್ನು ಹೊರಕ್ಕೆ ಚೆಲ್ಲಿ ಹಿಟಾಚಿ ಯಂತ್ರ ಬಳಸಿ ಶವವನ್ನು ತೆಗೆಯಲಾಯಿತು. ಇದೊಂದು ಅತಿ ಕ್ಲಿಷ್ಟಕರ ಕಾರ್ಯಾಚರಣೆ ಆಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಕೆರೆಯಲ್ಲಿ ಹೆಚ್ಚಾಗಿ ಕೆಸರು ತುಂಬಿದ ಹಿನ್ನೆಲೆಯಲ್ಲಿ ‌ಮೃತದೇಹ ಶೋಧಕಾರ್ಯದ ವೇಳೆ ಸುಲಭವಾಗಿ ಪತ್ತೆಯಾಗಿರಲಿಲ್ಲ. ಈಗ ಮೃತ ತಿಮ್ಮಯ್ಯನ ಮೃತದೇಹವನ್ನು ವಿರಾಜಪೇಟೆ ಸರ್ಕಾರಿ ಅಸ್ಪತ್ರೆಗೆ ಮರಣೋತ್ತರ ಪರೀಕ್ಷೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ರವಾನಿಸಿದ್ದಾರೆ. ಆರತಿ ಕೊಲೆಯಾದ ಜಾಗದ ಸಮೀಪವೇ ತಿಮ್ಮಯ್ಯನ ಬೈಕ್‌, ಮೊಬೈಲ್, ಚಪ್ಪಲಿ ಪತ್ತೆಯಾಗಿತ್ತು. ಹತ್ಯೆ ಬಳಿಕ ತಿಮ್ಮಯ್ಯ ಕೂಡ ವಿಷ ಸೇವಿಸಿರುವ ಬಗ್ಗೆ ಅನುಮಾನ ಹುಟ್ಟಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಮೊಬೈಲ್ ದೊರೆತಿರುವ ಸ್ಥಳದಲ್ಲಿ ವಿಷದ ಬಾಟಲಿಯೂ ಸಿಕ್ಕಿತ್ತು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

SCROLL FOR NEXT