ಆರ್ಕಿಡ್ಸ್ ಸ್ಕೂಲ್ 
ರಾಜ್ಯ

ಬೆಂಗಳೂರು: ಆರ್ಕಿಡ್ಸ್ ದಿ ಇಂಟರ್ ನ್ಯಾಷನಲ್ ಸ್ಕ್ಯೂಲ್ ನ ಮತ್ತೊಂದು ಬ್ರ್ಯಾಂಚ್ ವಿರುದ್ಧ ಎಫ್ ಐಆರ್

ಆರ್ಕಿಡ್ಸ್ ದಿ ಇಂಟರ್ ನ್ಯಾಷನಲ್ ಸ್ಕ್ಯೂಲ್ ನ ನಾಗರಭಾವಿ ಬ್ರ್ಯಾಂಚ್ ವಿರುದ್ಧ ಬುಧವಾರ ಎಫ್ ಐಆರ್ ದಾಖಲಿಸಲಾಗಿದೆ. ಇದು ಈ ಶಾಲೆ ವಿರುದ್ಧ ದಾಖಲಾಗಿರುವ ನಾಲ್ಕನೇ ಪ್ರಮುಖ ದೂರು ಹಾಗೂ ಕಳೆದ ಆರು ತಿಂಗಳಲ್ಲಿ ದಾಖಲಾದ ಮೂರನೇ ಎಫ್‌ಐಆರ್ ಆಗಿದೆ.

ಬೆಂಗಳೂರು: ಆರ್ಕಿಡ್ಸ್ ದಿ ಇಂಟರ್ ನ್ಯಾಷನಲ್ ಸ್ಕ್ಯೂಲ್ ನ ನಾಗರಭಾವಿ ಬ್ರ್ಯಾಂಚ್ ವಿರುದ್ಧ ಬುಧವಾರ ಎಫ್ ಐಆರ್ ದಾಖಲಿಸಲಾಗಿದೆ. ಇದು ಈ ಸರಣಿಯ ಶಾಲೆ ವಿರುದ್ಧ ದಾಖಲಾಗಿರುವ ನಾಲ್ಕನೇ ಪ್ರಮುಖ ದೂರು ಹಾಗೂ ಕಳೆದ ಆರು ತಿಂಗಳಲ್ಲಿ ದಾಖಲಾದ ಮೂರನೇ ಎಫ್‌ಐಆರ್ ಆಗಿದೆ.

ಬೋಧಿಸುತ್ತಿರುವ ಪಠ್ಯಕ್ರಮದ ಬಗ್ಗೆ ಪೋಷಕರಿಂದ ಹಲವಾರು ದೂರುಗಳು ಮತ್ತು ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಬುಧವಾರ ಶಾಲೆಗೆ ಭೇಟಿ ನೀಡಿದರು.

ಬೆಂಗಳೂರು ದಕ್ಷಿಣ 1ರ ಬ್ಲಾಕ್ ಶಿಕ್ಷಣ ಅಧಿಕಾರಿ (ಬಿಇಒ ) ಹೆಚ್ ಜಿ ರಾಜಶೇಖರ್ ಪ್ರಕಾರ, ರಾಜ್ಯ ಪಠ್ಯ ಕ್ರಮವನ್ನು ಮಾತ್ರ ಕಲಿಸಲು ಅನುಮತಿ ಇದ್ದರೂ ಶಾಲೆಯು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಗೆ (ಸಿಬಿಎಸ್‌ಇ) ಸಂಯೋಜಿತವಾಗಿದ್ದು, ಅದೇ ಪಠ್ಯಕ್ರಮ ಬೋಧಿಸುವುದಾಗಿ ಶಾಲೆ ಜಾಹೀರಾತು ನೀಡಿದೆ. ಅವರು ರಾಜ್ಯ ಪಠ್ಯಕ್ಕಾಗಿ ಮಾತ್ರ ನೋಂದಾಯಿತರಾಗಿದ್ದಾರೆ. ಆದಾಗ್ಯೂ, ಸಿಬಿಎಸ್ ಸಿ ಸಿಲಬಸ್ ಬೋಧಿಸುತ್ತಿರುವುದಾಗಿ, ಸಿಬಿಎಸ್ ಸಿಯೊಂದಿಗೆ ಸಂಯೋಜಿತರಾಗಿರುವುದಾಗಿ ಪೋಷಕರಿಗೆ ಹೇಳಿರುವುದಾಗಿ ತಿಳಿಸಿದರು. 

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಡಿಡಿಪಿಐ) ನೀಡಿದ ಸೂಚನೆಗಳ ಆಧಾರದ ಮೇಲೆ ನಾವು ಪೊಲೀಸರಿಗೆ ದೂರು ನೀಡಿದ್ದೇವೆ ಮತ್ತು ಅವರು ಶಾಲೆಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. 

ಇತ್ತೀಚೆಗಷ್ಟೇ ಜಾರಿಗೆ ತಂದಿರುವ  ರಾಜ್ಯ ಪಠ್ಯಕ್ರಮದಲ್ಲಿ  5ನೇ ತರಗತಿ ಹಾಗೂ 8ನೇ ತರಗತಿ ಪರೀಕ್ಷೆಗಳನ್ನು ನಡೆಸುವುದಾಗಿ ಶಾಲೆಯವರು ನೋಟಿಸ್ ನೀಡಿದಾಗ ಪೋಷಕರಿಗೆ ವಿಷಯ ತಿಳಿದಿದೆ. ಶಾಲೆಯನ್ನು ನಿರ್ವಹಿಸುತ್ತಿರುವ ಸೆಂಟ್ ಥೆರೇಸಾ ಎಜುಕೇಷನಲ್ , ಕಲ್ಚರ್ ಅಂಡ್ ಸೋಶಿಯಲ್ ಡವಲಪ್ ಮೆಂಟ್ ಸೊಸೈಟಿ ಹಾಗೂ ಬ್ರಾಂಚ್ ನ ಪ್ರಿನ್ಸಿಪಾಲ್ ಅವರ ಹೆಸರನ್ನು ದೂರಿನಲ್ಲಿ ಸೇರಿಸಲಾಗಿದೆ ಎಂದು ಅವರು ಹೇಳಿದರು. 

ಪಠ್ಯಕ್ರಮ ವಿಷಯದ ಜೊತೆಗೆ  ಶಾಲೆಯಲ್ಲಿ ಒಂಬತ್ತು ಮತ್ತು ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಅಕ್ರಮವಾಗಿ ತರಗತಿ ನಡೆಸುತ್ತಿರುವುದನ್ನು ಬಿಇಒ ಪತ್ತೆ ಹಚ್ಚಿದ್ದಾರೆ. “ಶಾಲೆಯು ವಿದ್ಯಾರ್ಥಿಗಳಿಗೆ ಒಂಬತ್ತನೇ ಮತ್ತು ಹತ್ತನೇ ತರಗತಿಗಳನ್ನು ನಡೆಸಲು ವಾಸ್ತವವಾಗಿ ಅನುಮತಿಯನ್ನು ಹೊಂದಿಲ್ಲ. ಆದರೆ,  ಅನುಮತಿ ಪಡೆಯದಿದ್ದರೂ  ಅನುಮತಿ ಪಡೆದ ಶಾಖೆಗಳ ವಿದ್ಯಾರ್ಥಿಗಳನ್ನು ಈ ಶಾಖೆಗೆ ವರ್ಗಾವಣೆ ಮಾಡಲಾಗುತ್ತಿದ್ದು,ತರಗತಿಗಳು ನಡೆಯುತ್ತಿರುವುದು ಕಂಡುಬಂದಿದೆ ಎಂದು ರಾಜಶೇಖರ್ ಹೇಳಿದರು.

ಎಫ್‌ಐಆರ್ ಅಥವಾ ಬಿಇಒ ಮತ್ತು ಪೋಷಕರ ಹೇಳಿಕೆಗಳಿಗೆ ಪ್ರತಿಕ್ರಿಯಿಸಲು ಶಾಲೆ ನಿರಾಕರಿಸಿದ್ದರೂ, 5 ಮತ್ತು 8 ನೇ ತರಗತಿ ಪರೀಕ್ಷೆಗಳ ಬಗ್ಗೆ ಪೋಷಕರಿಗೆ ತಿಳಿಸಲು ಸಮಯದ ಕೊರತೆಯಿಂದಾಗಿ ಸಮಸ್ಯೆ ಉಂಟಾಗಿದೆ ಎಂದು ಹೇಳಿಕೆ ಬಿಡುಗಡೆ ಮಾಡಿದೆ. 

“ಇದು ಇಲಾಖೆಯಿಂದ ಹಠಾತ್ ಆದೇಶವಾಗಿದೆ ಮತ್ತು ಪೋಷಕರಿಗೆ ಸರಿಯಾಗಿ ತಿಳಿಸಲು ನಮಗೆ ಸಾಕಷ್ಟು ಸಮಯವಿರಲಿಲ್ಲ,  ಭವಿಷ್ಯದಲ್ಲಿ ಸಿಬಿಎಸ್‌ಇ ಶಾಲೆಯಾಗಲು ಉದ್ದೇಶಿಸಲಾಗಿದ್ದರೂ, ಅದರ ಮಾನ್ಯತೆ ಪಡೆಯುವವರೆಗೂ ರಾಜ್ಯ ಮಂಡಳಿಯ ಮಾರ್ಗಸೂಚಿ ಅನುಸರಿಸಬೇಕಾಗುತ್ತದೆ ಎಂದು ಶಾಲೆ ಹೇಳಿದೆ. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT