ರಾಜ್ಯ

ಬೆಂಗಳೂರಿನಲ್ಲಿ ಜಿ20 ಶೃಂಗಸಭೆ: ತಾಜ್ ವೆಸ್ಟ್ ಎಂಡ್ ಆವರಣದ ಮೇಲೆ 'No Fly Zone' ಜಾರಿ

Manjula VN

ಬೆಂಗಳೂರು: ಜುಲೈ.5 ರಿಂದ ಜುಲೈ8ರವರೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆಯಲಿರುವ ಜಿ20 ಶೃಂಗಸಭೆ ಹಿನ್ನೆಲೆ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟ್ ಎಂಡ್ ಆವರಣದ ಮೇಲೆ ತಾತ್ಕಾಲಿಕ ನೋ ಫ್ಲೈಝೋನ್ (No Fly Zone) ಜಾರಿ ಮಾಡಲಾಗಿದೆ.

ಈ ಬಾರಿ ಜಿ20 ರಾಷ್ಟ್ರಗಳ ಸಭೆಗಳು ಭಾರತದ ವಿವಿಧೆಡೆ ನಡೆಯುತ್ತಿವೆ. ಈ ಪೈಕಿ ಬೆಂಗಳೂರನಲ್ಲಿಯೂ ಸಭೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಜುಲೈ 5 ರಂದು ಬೆಳಿಗ್ಗೆ 9 ರಿಂದ ಜುಲೈ 8 ರ ಮಧ್ಯಾಹ್ನ 2 ರವರೆಗೆ ಸಭೆ ನಡೆಯುವ ಸ್ಥದಿಂದ ಒಂದು ಕಿಲೋಮೀಟರ್ ವ್ಯಾಪ್ತಿಯೊಳಗೆ ನೋ ಫ್ಲೈಝೋನ್'ಜಾರಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಅವರು ಘೋಷಿಸಿದ್ದಾರೆ.

ತಾತ್ಕಾಲಿಕ ನೋ ಫ್ಲೈಝೋನ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಸಭೆ ನಡೆಯುವ ಸ್ಥಳದಿಂದ ಒಂದು ಕಿಮೀ ವ್ಯಾಪ್ತಿಯೊಳಗೆ ಹಾರುವ ಡ್ರೋಣ್ ಗಳು, ಯುಎವಿಗಳು, ಗ್ಲೈಡರ್ ವಿಮಾನಗಳು, ಎಲ್ಲಾ ಸಣ್ಣ ವಿಮಾನಗಳು ಮತ್ತು ಎಲ್ಲಾ ರೀತಿಯ ವಿಮಾನಗಳ ಹಾರಾಟದ ಮೇಲೆ ನಿಷೇಧ ಹೇರಲಾಗಿದೆ.

SCROLL FOR NEXT