ರಾಜ್ಯ

ಪ್ರಾಚೀನ ವಸ್ತುಗಳನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಹಸ್ತಾಂತರಿಸಿದ ಕಸ್ಟಮ್ಸ್ ಇಲಾಖೆ

Ramyashree GN

ಬೆಂಗಳೂರು: ಬೆಂಗಳೂರು ಕಸ್ಟಮ್ಸ್ ಇಲಾಖೆಯು ವಶಪಡಿಸಿಕೊಂಡ ಮತ್ತು ಜಪ್ತಿ ಮಾಡಿದ ಕಲಾಕೃತಿಗಳನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್ಐ) ಗುರುವಾರ ಹಸ್ತಾಂತರಿಸಿದೆ.

ಬೆಂಗಳೂರಿನ ಕಸ್ಟಮ್ಸ್ ಮುಖ್ಯ ಆಯುಕ್ತರಾದ ವಿ. ಉಷಾ ಅವರು ವಶಪಡಿಸಿಕೊಂಡ ಮತ್ತು ಜಪ್ತಿ ಮಾಡಿದ ಪುರಾತನ ವಸ್ತುಗಳನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸೂಪರಿಂಟೆಂಡಿಂಗ್ ಆರ್ಕಿಯಾಲಜಿಸ್ಟ್ ಬಿಪಿನ್ ಚಂದ್ರ ಅವರಿಗೆ ಹಸ್ತಾಂತರಿಸಿದ್ದಾರೆ ಕಸ್ಟಮ್ಸ್ ಹೇಳಿಕೆಯಲ್ಲಿ ತಿಳಿಸಿದೆ. 

ಈ ವಸ್ತುಗಳನ್ನು ಬೆಂಗಳೂರಿನ ಇನ್‌ಲ್ಯಾಂಡ್ ಕಂಟೈನರ್ ಡಿಪೋ (ಐಸಿಡಿ) ಅಧಿಕಾರಿಗಳು ಯುರೋಪ್‌ಗೆ ಹೋಗುವ ಕಂಟೈನರ್‌ನಲ್ಲಿದ್ದ ವಸ್ತುಗಳಿಂದ ವಶಪಡಿಸಿಕೊಂಡಿದ್ದಾರೆ. ವಿದೇಶಿ ಪ್ರಜೆಯೊಬ್ಬರು ತಮ್ಮ ತಾಯ್ನಾಡಿಗೆ ಹಿಂದಿರುಗುವ ಮೂಲಕ ರಫ್ತು ಮಾಡಲಾಗುತ್ತಿದ್ದ ಗೃಹೋಪಯೋಗಿ ವಸ್ತುಗಳನ್ನು ತುಂಬಿದ ಕಂಟೈನರ್‌ನಲ್ಲಿ ಈ ಅಮೂಲ್ಯ ವಸ್ತುಗಳು ಪತ್ತೆಯಾಗಿದ್ದವು.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳಿಗೆ ಪುರಾತನ ವಸ್ತುಗಳನ್ನು ಹಸ್ತಾಂತರಿಸುವ ಸಂದರ್ಭದಲ್ಲಿ ಸಿಜಿಎಸ್‌ಟಿ ಮುಖ್ಯ ಆಯುಕ್ತ ಸಂಜಯ್ ಪಂತ್ ಮತ್ತು ಕಸ್ಟಮ್ಸ್ ವಿಶಾಖಪಟ್ಟಣಂ ವಲಯದ ಆಯುಕ್ತ ಅಮಿತೇಶ್, ಬೆಂಗಳೂರು ವಲಯದ ಹೆಚ್ಚುವರಿ ಆಯುಕ್ತರಾದ ಬಿ. ಕೊಂತೌಜಮ್ ಸೇರಿದಂತೆ ಜಿಲ್ಲಾಧಿಕಾರಿ ವಿನುತಾ ಮತ್ತು ಸಹಾಯಕ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ಶ್ರೀಗುರು ಸಹ ಉಪಸ್ಥಿತರಿದ್ದರು.

ಎಎಸ್ಐಗೆ  ಹಸ್ತಾಂತರಿಸಲಾದ ಪುರಾತನ ವಸ್ತುಗಳಲ್ಲಿ ಫೇಸ್ ಮಾಸ್ಕ್, ಭೂತ (ರಾಕ್ಷಸ) ರೂಪದಲ್ಲಿ ಶಿವನನ್ನು ಪ್ರತಿನಿಧಿಸುವ ಲೋಹದ ಮುಖವಾಡವನ್ನು ಒಳಗೊಂಡಿವೆ. ಇದು ಬಹುಶಃ ತುಳುನಾಡು (ಕರಾವಳಿ ಕರ್ನಾಟಕ) ಕರ್ನಾಟಕಕ್ಕೆ ಸೇರಿದವುಗಳಾಗಿವೆ. 

ಮತ್ತೊಂದು ಪುರಾತನ ವಸ್ತುವೆಂದರೆ, ವುಡನ್ ಹಾರ್ಸ್ ರೈಡರ್ (ಮರದ ರಥ) ಆಗಿದೆ. ಇದನ್ನು ಸಾಂಪ್ರದಾಯಿಕವಾಗಿ ದಕ್ಷಿಣ ಭಾರತದ ದೇವಾಲಯಗಳಲ್ಲಿ, ವಿಶೇಷವಾಗಿ ಕೇರಳದಲ್ಲಿ ಬಳಸಲಾಗುತ್ತದೆ. ಅಲ್ಲದೆ, ಎರಡು ಮರದ ಗೊಂಬೆಗಳು (ಆಟಿಕೆಗಳು), ಲೋಹದ ಬುದ್ಧನ ಚಿತ್ರವನ್ನು ಒಳಗೊಂಡಿದೆ. 

SCROLL FOR NEXT