ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ 
ರಾಜ್ಯ

ಸಿದ್ದರಾಮಯ್ಯ ಅವರಂತೆ ಕರ್ನಾಟಕ ವಿಧಾನಸಭೆ ಚೇಂಬರ್ ಪಕ್ಕದಲ್ಲೇ ಕಚೇರಿ ಬಯಸಿದ ಡಿಸಿಎಂ ಡಿಕೆ ಶಿವಕುಮಾರ್‌!

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕರ್ನಾಟಕ ವಿಧಾನಸಭೆ ಚೇಂಬರ್ ಹೊರಗಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಗೆ ಪಕ್ಕದಲ್ಲೆ ಕಚೇರಿಯನ್ನು ಹೊಂದಲು ಬಯಸಿದ್ದಾರೆ.

ಬೆಂಗಳೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕರ್ನಾಟಕ ವಿಧಾನಸಭೆ ಚೇಂಬರ್ ಹೊರಗಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಗೆ ಪಕ್ಕದಲ್ಲೆ ಕಚೇರಿಯನ್ನು ಹೊಂದಲು ಬಯಸಿದ್ದಾರೆ.

ಶಿವಕುಮಾರ್ ಅವರ ಹೊಸ ಕಚೇರಿಯು ವಿಧಾನಸೌಧದ ಗೇಟ್‌ನ ಪಶ್ಚಿಮ ಭಾಗದ ಮೊದಲ ಮಹಡಿಯಲ್ಲಿದ್ದು, ಅಲ್ಲಿಂದ ಎಲ್ಲಾ ಶಾಸಕರು, ಮುಖ್ಯಮಂತ್ರಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಸದನವನ್ನು ಪ್ರವೇಶಿಸುತ್ತಾರೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರ ಕಚೇರಿಗಳು ಮೂರನೇ ಮಹಡಿಯಲ್ಲಿವೆ. ಮುಖ್ಯಮಂತ್ರಿಗಳು ಪಶ್ಚಿಮ ಭಾಗದಲ್ಲಿ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆಗೆ ಎದುರಾಗಿದ್ದರೆ, ಕರ್ನಾಟಕ ಹೈಕೋರ್ಟ್‌ಗೆ ಎದುರಾಗಿರುವ ಪೂರ್ವ ಭಾಗದಲ್ಲಿ ಡಿಸಿಎಂ ಇದ್ದಾರೆ.

ದಶಕಗಳಿಂದ, ಮುಖ್ಯಮಂತ್ರಿಗಳು ವಿಧಾನಸಭೆ ಚೇಂಬರ್‌ನ ಹೊರಗಿನ ಮೊದಲ ಮಹಡಿಯಲ್ಲಿ ಹೆಚ್ಚುವರಿ ಕಚೇರಿಯನ್ನು ಪಡೆದುಕೊಳ್ಳುವ ಸವಲತ್ತು ಹೊಂದಿದ್ದರು. ಇದರಿಂದ ಅವರು ಅಧಿಕಾರಿಗಳು ಮತ್ತು ಶಾಸಕರನ್ನು ಭೇಟಿ ಮಾಡಲು, ವಿಶೇಷವಾಗಿ ವಿಧಾನಸಭೆ ಅಧಿವೇಶನಗಳಲ್ಲಿ ಭಾಗವಹಿಸಲು ನೆರವಾಗುತ್ತಿತ್ತು.

ಆದರೆ, ಈ ಹಿಂದೆ ಯಾವುದೇ ಉಪಮುಖ್ಯಮಂತ್ರಿ ತಮ್ಮ ಕಚೇರಿಯನ್ನು ವಿಧಾನಸಭೆಯ ಚೇಂಬರ್ ಪಕ್ಕದಲ್ಲೇ ಹೊಂದಿರಲಿಲ್ಲ. ಆದಾಗ್ಯೂ, ಈ ಬಾರಿ, ಶಿವಕುಮಾರ್ ಅವರು ತಮ್ಮ ಅಧಿಕಾರಿಗಳು ಮತ್ತು ಶಾಸಕರನ್ನು ಭೇಟಿ ಮಾಡಲು ತನಗೂ ಅಲ್ಲಿಯೇ ಕಚೇರಿ ಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿವೆ.

ಶಿವಕುಮಾರ್ ಅವರು ವಿಧಾನಸಭೆ ಚೇಂಬರ್‌ನ ಎಡ ಮೂಲೆಯಲ್ಲಿರುವ ಕೊಠಡಿಯನ್ನು ಸಜ್ಜುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಧೀನ ಕಾರ್ಯದರ್ಶಿ ಮಟ್ಟದ ಅಧಿಕಾರಿಯೊಬ್ಬರು ಅದನ್ನು ಈಗ ಬಳಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia war effect: ಷೇರು ಮಾರುಕಟ್ಟೆಯಲ್ಲಿ 'ರಕ್ತಪಾತ': ಸೆನ್ಸೆಕ್ಸ್ 1,555 ಅಂಕ ಕುಸಿತ, ನಿಮಿಷಗಳಲ್ಲಿ ಹೂಡಿಕೆದಾರರಿಗೆ 8 ಲಕ್ಷ ಕೋಟಿ ರೂ ನಷ್ಟ..!

ನ್ಯೂಯಾರ್ಕ್‌: ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ Air Canada Express ವಿಮಾನ ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ, ಇಬ್ಬರಿಗೆ ಗಂಭೀರ ಗಾಯ

West Asia war: ವಿದ್ಯುತ್ ಸ್ಥಾವರಗಳ ಮೇಲೆ ದಾಳಿಯಾದರೆ, ಹಾರ್ಮುಜ್ ಜಲಸಂಧಿ ಸಂಪೂರ್ಣ ಬಂದ್; ಇರಾನ್ ಕಠಿಣ ಎಚ್ಚರಿಕೆ

ರಾಮನಗರ: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ಭೀಕರ ಅಪಘಾತ, ನಾಲ್ವರು ಸ್ಥಳದಲ್ಲೇ ಸಾವು-Video

ಉರಿದ ಹೊರ್ಮುಸ್; ಮುಂಚೂಣಿಗೆ ಬಂದ ಯುಎಸ್ ಮರೀನ್ಸ್ (ಜಾಗತಿಕ ಜಗಲಿ)

SCROLL FOR NEXT