ರಾಜ್ಯ

ಅಮರನಾಥ ಯಾತ್ರಿಕರನ್ನು ಸುರಕ್ಷಿತವಾಗಿ ತವರಿಗೆ ಕರೆತರಲಾಗುವುದು: ಸಚಿವ ಕೃಷ್ಣ ಭೈರೇಗೌಡ

Manjula VN

ಬೆಂಗಳೂರು: ತೀವ್ರ ಮಳೆ, ಭೂಕುಸಿತದಿಂದಾಗಿ ಅಮರನಾಥ ಯಾತ್ರೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ತವರಿಗೆ ಕರೆತರಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಸೋಮವಾರ ಹೇಳಿದರು.

ವಿಧಾನಸಭೆಯಲ್ಲಿ ಮಾತನಾಡಿದ ಸಚಿವರು, “ಈಗಾಗಲೇ ಯಾತ್ರಾರ್ಥಿಗಳ ರಕ್ಷಿಸಿ ಸಿಆರ್‌ಪಿಎಫ್ ಶಿಬಿರಕ್ಕೆ ಸ್ಥಳಾಂತರಿಸಲಾಗಿದ್ದ 129 ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ಕಾಶ್ಮೀರಕ್ಕೆ ಕರೆತರಲಾಗಿದೆ. ಆದರೆ, ಬಾಲ್ಟಾಲ್ ಕ್ಯಾಂಪ್‌ನಲ್ಲಿ ಹವಾಮಾನ ಹದಗೆಟ್ಟಿದ್ದು, ದಟ್ಟವಾದ ಮಂಜಿನಿಂದಾಗಿ ರಸ್ತೆಗಳನ್ನು ಮುಚ್ಚಲಾಗಿದೆ. ಬುಧವಾರದ ವೇಳೆಗೆ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆಗಳಿದ್ದು, ಬಳಿಕ ರಸ್ತೆ ಕಾಮಗಾರಿ ಆರಂಭವಾಗಲಿದೆ. ನಂತರ ಯಾತ್ರಾರ್ಥಿಗಳನ್ನು ರಾಜ್ಯಕ್ಕೆ ಕರೆತರಲಾಗುವುದು ಎಂದು ಹೇಳಿದರು.

ಈಗಾಗಲೇ ಕಾಶ್ಮೀರಕ್ಕೆ ಕಳುಹಿಸಲಾಗಿರುವ ರಾಜ್ಯದ ನಾಲ್ವರು ಹಿರಿಯ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿಗಳ ಕಚೇರಿ ಮಾತುಕತೆ ನಡೆಸುತ್ತಿದೆ.

ಯಾತ್ರಿಕರ ಕುಟುಂಬಗಳು ಭಯಪಡುವ ಅಗತ್ಯವಿಲ್ಲ, ಪ್ರತಿಯೊಬ್ಬರನ್ನು ಸುರಕ್ಷಿತವಾಗಿ ತವರಿಗೆ ಕರೆತರುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

SCROLL FOR NEXT