ರಾಜ್ಯ

ಟೊಮ್ಯಾಟೊ ಕಾಪಾಡಲು ಹರಸಾಹಸ: ರಾತ್ರಿ ಹೊತ್ತು ಟಾರ್ಚ್ ಲೈಟ್ ಹಿಡಿದು ಜಮೀನಿನಲ್ಲಿ ಅಡ್ಡಾಡುವ ಕೋಲಾರ ರೈತರು!

Sumana Upadhyaya

ಕೋಲಾರ: ಮಾರುಕಟ್ಟೆಯಲ್ಲಿ ಟೊಮ್ಯಾಟೊ ಬೆಲೆ ಗಗನಕ್ಕೇರಿದೆ. ಈ ಪರಿಸ್ಥಿತಿಯಲ್ಲಿ ಅಲ್ಲಲ್ಲಿ ಟೊಮ್ಯಾಟೊ ಕಳವು ಪ್ರಕರಣ ನಡೆಯುತ್ತಲೇ ಇದೆ. 

ಬೆಲೆ ಏರಿಕೆಯಾದಾಗಿಂನಿಂದ ತಮ್ಮ ತೋಟಗಳಲ್ಲಿ ಅದನ್ನು ಕಾಪಾಡಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ, ಹಗಲು ರಾತ್ರಿ ಗಿಡದ ಬಳಿಯೇ ಮಲಗುತ್ತಿದ್ದಾರೆ. ಆದರೂ ಕಳ್ಳರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. 

ಈ ಮೊದಲು ಹಾಸನ ಜಿಲ್ಲೆಯಲ್ಲಿ ರೈತರೊಬ್ಬರ ಜಮೀನಿನಲ್ಲಿ 2.5 ಲಕ್ಷ ರೂಪಾಯಿ ಮೌಲ್ಯದ ಟೊಮೆಟೋ ಕಳ್ಳತನವಾಗಿತ್ತು. ಇದೀಗ ಕೋಲಾರದಲ್ಲಿ ಟೊಮ್ಯಾಟೊ ಬೆಳೆಗಾರರು ಕಳ್ಳಕಾಕರಿಂದ ರಕ್ಷಿಸಿಕೊಳ್ಳಲು ರಾತ್ರಿ ಹೊತ್ತು ಟಾರ್ಚ್ ಲೈಟ್ ಹಾಕಿಕೊಂಡು ಗಸ್ತು ತಿರುಗುತ್ತಿದ್ದಾರೆ. ರಾತ್ರಿ ಹೊತ್ತು ಕಳ್ಳರ ಕಾಟ ಹೆಚ್ಚಿರುವುದರಿಂದ ರೈತರು ರಾತ್ರಿ ವೇಳೆ ತಮ್ಮ ಜಮೀನು ಕಾಯಬೇಕಾದ ಪರಿಸ್ಥಿತಿ ಬಂದಿದೆ.

SCROLL FOR NEXT