ಅಕ್ರಮ ಕಟ್ಟಡ ನಿರ್ಮಾಣವಾಗಿರುವುದು. 
ರಾಜ್ಯ

ಅಧಿಕಾರಿಗಳ ಸೂಚನೆ ಬಳಿಕವೂ ವಿಭೂತಿಪುರ ಕೆರೆ ಪ್ರದೇಶದಲ್ಲಿ ಮುಂದುವರೆದ ಅಕ್ರಮ ನಿರ್ಮಾಣ ಕಾರ್ಯ!

ಒತ್ತುವರಿ ತೆರವಿಗೆ ಬಿಬಿಎಂಪಿ ಆದೇಶ ಹೊರಡಿಸಿದ ಬಳಿಕವೂ ವಿಭೂತಿಪುರ ಕೆರೆ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣವಾಗಿದೆ ಮುಂದುವರೆದಿದೆ.

ಬೆಂಗಳೂರು: ಒತ್ತುವರಿ ತೆರವಿಗೆ ಬಿಬಿಎಂಪಿ ಆದೇಶ ಹೊರಡಿಸಿದ ಬಳಿಕವೂ ವಿಭೂತಿಪುರ ಕೆರೆ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣವಾಗಿದೆ ಮುಂದುವರೆದಿದೆ.

ವಿಭೂತಿಪುರ ಕೆರೆ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣವಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಬಿಬಿಎಂಪಿ ಅಧಿಕಾರಿಗಳು. ಒತ್ತುವರಿ ತೆರವು ಮಾಡುವ ಭರವಸೆ ನೀಡಿ ನೀಡಿದ್ದರು. ಆದರೂ, ಸ್ಥಳದಲ್ಲಿ ಕಾಮಗಾರಿ ಕೆಲಸಗಳು ಮುಂದವರೆಯುತ್ತಿರುವುದು ಕಂಡು ಬಂದಿದೆ.

ಮೇಲ್ಛಾವಣಿಯ ಕೆಲಸಕ್ಕೆ ಸೆಂಟ್ರಿಂಗ್ ಶೀಟ್‌ಗಳನ್ನು ಹಾಕಲು ಕಾರ್ಮಿಕರು ಕೆಲಸ ಮಾಡುತ್ತಿದ್ದು, ಶೀಟ್‌ಗಳಿಗೆ ಮರದ ಹಲಗೆಗಳನ್ನು ಕತ್ತರಿಸಲು ಅಕ್ರಮ ವಿದ್ಯುತ್ ಸಂಪರ್ಕವನ್ನು ಬಳಕೆ ಮಾಡುತ್ತಿದ್ದಾರೆಂದು ವರದಿಗಳು ತಿಳಿಸಿವೆ.

ಈನಡುವೆ ಒತ್ತುವರಿ ತೆರವು ಆಗಿರುವ ಕೆರೆಯನ್ನು ಉಳಿಸುವಂತೆ ಹೋರಾಟ ನಡೆಸುತ್ತಿರುವ ಕಾರ್ಯಕರ್ತರು ಹಾಗೂ ನಿವಾಸಿಗಳು, ಅಧಿಕಾರಿಗಳು ತೀವ್ರವಾಗಿ ಕಿಡಿಕಾರಿದ್ದಾರೆ.

ತಲಕಾವೇರಿ ಲೇಔಟ್ ನಿವಾಸಿ ಸತ್ಯವಾಣಿ ಶ್ರೀಧರ್ ಮಾತನಾಡಿ, ಈ ಬಗ್ಗೆ ವಾರ್ಡ್ ಮತ್ತು ಕೆರೆಯ ಎಂಜಿನಿಯರ್‌ಗಳಿಗೆ ಮಾಹಿತಿ ನೀಡಲಾಗಿದೆ. ಆದರೂ, ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಗೃಹರಕ್ಷಕರು ಹೆಸರಿಗೆ ಮಾತ್ರ ಇರುವಂತಿದೆ ಎಂದು ಕಿಡಿಕಾರಿದ್ದಾರೆ.

ಕಟ್ಟಡದ ಮಾಲೀಕರಾಗಿರುವ ಸುನೀತಾ ಹಾಗೂ ಆಕೆಯ ಪತಿ ಅಲೆಕ್ಸ್ ಅವರು, ಒತ್ತಡ ಹೇರಿ ಕಾರ್ಮಿಕರಿಂದ ನಿರ್ಮಾಣ ಕಾರ್ಯ ಮಾಡಿಸುತ್ತಿದ್ದಾರೆಂದು ತಿಳಿದುಬಂದಿದೆ.

ಈ ನಡುವೆ ಸ್ಥಳದಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಗಾರರನ್ನು ನೋಡಿದ ಗೃಹ ರಕ್ಷಕರು ಕೆಲಸವನ್ನು ನಿಲ್ಲಿಸುವಂತೆ ಕಾರ್ಮಿಕರಿಗೆ ಎಚ್ಚರಿಕೆ ನೀಡಿದರು.

ಇದೀಗ ಅಕ್ರಮ ನಿರ್ಮಾಣದ ಮೇಲೆ ನಿಗಾ ಇಡಲು ಹಾಗೂ ಇನ್ನು ಮುಂದೆ ನಿರ್ಮಾಣವಾಗದಂತೆ ತಡೆಯಲು ಇತ್ತಿಬ್ಬರು ಗೃಹರಕ್ಷಕರನ್ನು ನಿಯೋಜಿಸಲಾಗಿದೆ ಎಂದು ವಾರ್ಡ್ ಎಂಜಿನಿಯರ್ ಕೃಷ್ಣಮೂರ್ತಿ ತಿಳಿಸಿದ್ದಾರೆ. ಅಲ್ಲದೆ, ಶೀಘ್ರದಲ್ಲೇ ಅಕ್ರಮ ಕಟ್ಟಡವನ್ನು ನೆಲಸಮ ಮಾಡುತ್ತೇವೆಂದು ಭರವಸೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT