ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿ, ಅಪಘಾತ ಎಂಬಂತೆ ಬಿಂಬಿಸಿದ ವ್ಯಕ್ತಿಯ ಬಂಧನ

ಪತ್ನಿಯ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದು ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಲೆ ಪತಿ ಹಾಗೂ ಆತನ ಸಹಚರನನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದ ಏಳು ತಿಂಗಳ ನಂತರ ಪ್ರಕರಣ ಭೇದಿಸಲಾಗಿದೆ. 

ಬೆಂಗಳೂರು: ಪತ್ನಿಯ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದು ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಲೆ ಪತಿ ಹಾಗೂ ಆತನ ಸಹಚರನನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದ ಏಳು ತಿಂಗಳ ನಂತರ ಪ್ರಕರಣ ಭೇದಿಸಲಾಗಿದೆ. 

ಆರೋಪಿಗಳನ್ನು ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅರವಿಂದ್ (24) ಮತ್ತು ಚಾಲಕ ಉದಯ್ ಕುಮಾರ್ (40) ಎಂದು ಗುರುತಿಸಲಾಗಿದೆ. ಕಳೆದ ವರ್ಷ ಚೈತನ್ಯ (22) ಅವರನ್ನು ವಿವಾಹವಾಗಿದ್ದ ಅರವಿಂದ್ ಹೊಸಕೋಟೆಯಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಚೈತನ್ಯ ತನ್ನ ಪತಿಯನ್ನು ಪೋಷಕರಿಂದ ಪ್ರತ್ಯೇಕವಾಗಿ ವಾಸಿಸುವಂತೆ ಒತ್ತಾಯಿಸುತ್ತಿದ್ದರಿಂದ ದಂಪತಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಇದು ವೈವಾಹಿಕ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು. ಅರವಿಂದ್ ವಿಚ್ಛೇದನಕ್ಕೆ ಬೇಡಿಕೆ ಇಟ್ಟಿದ್ದ ಆದರೆ ಆಕೆ ಗರ್ಭಿಣಿಯಾಗಿದ್ದರಿಂದ ಅದನ್ನು ನಿರಾಕರಿಸಿ ಪೋಷಕರ ಮನೆಗೆ ಮರಳಿದ್ದಳು.

ಚೈತನ್ಯಳನ್ನು ಕೊಲೆ ಮಾಡಲು ನಿರ್ಧರಿಸಿದ್ದ ಅರವಿಂದ್ ಅದಕ್ಕಾಗಿ ಉದಯ್ ಗೆ 1.5 ಲಕ್ಷ ರೂ. ಸುಪಾರಿ ನೀಡಿದ್ದ. ಅಪಘಾತವೆಂಬಂತೆ ಕೊಲೆಗೆ ಯೋಜನೆ ರೂಪಿಸಿ ಸಿಸಿಟಿವಿ ಕ್ಯಾಮೆರಾ ಇಲ್ಲದ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದರು. ಈ ಉದ್ದೇಶಕ್ಕಾಗಿಯೇ ಅರವಿಂದ್ ಬಳಸಿದ ಕಾರೊಂದನ್ನು ಖರೀದಿಸಿದ್ದ. ಚೈತನ್ಯ ಪ್ರತಿ ದಿನ ಭರತನಾಟ್ಯ ತರಗತಿಗಳಿಗೆ ಹೋಗಿ ಕೆಐಎಡಿಬಿ ಲೇಔಟ್ ಮೂಲಕ ಮನೆಗೆ ಹಿಂದಿರುಗುತ್ತಿದ್ದರಿಂದ ಮತ್ತು ಸಿಸಿಟಿವಿ ಕ್ಯಾಮೆರಾಗಳಿಲ್ಲದ ಕಾರಣ, ಆಕೆ ಹತ್ಯೆ ಮಾಡಲು ಅದೇ ಸರಿಯಾದ ಸ್ಥಳ ಎಂದು ನಿರ್ಧರಿಸಿ ಜನವರಿ 1 ರಂದು ಅವಳು ಮನೆಗೆ ಹೋಗುತ್ತಿದ್ದಾಗ ಸ್ಕೂಟರ್‌ಗೆ ಡಿಕ್ಕಿ ಹೊಡೆದು ವೇಗವಾಗಿ ಹೊರಟು ಹೋಗಿದ್ದರು. ಅಪಘಾತದಲ್ಲಿ ಚೈತನ್ಯ ಅವರಿಗೆ ಗಂಭೀರ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಈ ಸಂಬಂಧ ದೇವನಹಳ್ಳಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಅಪಘಾತ ಮಾಡಿದ ಕಾರಿಗಾಗಿ ಹುಡುಕಾಟ ನಡೆಸಿದ್ದರೂ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ. ಅಪಘಾತ ನಡೆದ ಸ್ಥಳಕ್ಕೆ ಹೊಂದಿಕೊಂಡಂತ ವಿವಿಧ ರಸ್ತೆಗಳಲ್ಲಿ ಸಿಸಿಟಿವಿ ಪರಿಶೀಲಿಸಿದಾಗ ಕಾರು ಗುರುತು ಪತ್ತೆಯಾಗಿದ್ದು, ಕಾರು ಮಾಲೀಕನನ್ನು ಸಂಪರ್ಕಿಸಿದಾಗ ಅದನ್ನು ಕೆಲ ತಿಂಗಳ ಹಿಂದೆ ಅರವಿಂದ್ ಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ. ನಂತರ ಅರವಿಂದ್ ವಿಚಾರಣೆ ನಡೆಸಿದಾಗ ಅದು ಅಪಘಾತವಲ್ಲಾ, ಕೊಲೆ ಮಾಡಲು ಮಾಡಿದ ಸ್ಕೆಚ್ ಎಂಬುದು ತಿಳಿದುಬಂದಿದೆ. ಕೇಸ್ ನ್ನು ಬಾಗಲೂರು ಠಾಣೆಗೆ ವರ್ಗಾಯಿಸಿದ್ದು, ಅರವಿಂದ್ ನೀಡಿದ ಮಾಹಿತಿ ಆಧಾರದ ಮೇಲೆ ಉದಯ್ ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

SCROLL FOR NEXT