ಪೋಷಕರು ಹಾಗೂ ಶರತ್ 
ರಾಜ್ಯ

ಬೆಂಗಳೂರು: ರಾಡ್​ನಿಂದ ಹೊಡೆದು ಹೆತ್ತ ತಂದೆ, ತಾಯಿಯನ್ನು ಕೊಂದ ಪಾಪಿ ಪುತ್ರ

ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ತನ್ನ ಹೆತ್ತ ತಂದೆ, ತಾಯಿಯನ್ನು ರಾಡ್​ನಿಂದ ಹೊಡೆದು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಮಂಗಳವಾರ ನಡೆದಿದೆ.

ಬೆಂಗಳೂರು: ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ತನ್ನ ಹೆತ್ತ ತಂದೆ, ತಾಯಿಯನ್ನು ರಾಡ್​ನಿಂದ ಹೊಡೆದು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಮಂಗಳವಾರ ನಡೆದಿದೆ.

ತನ್ನ ಪೋಷಕರನ್ನು ಹತ್ಯೆ ಮಾಡಿದ ಪಾಪಿ ಪುತ್ರನನ್ನು 27 ವರ್ಷದ ಶರತ್ ಎಂದು ಗುರುತಿಸಲಾಗಿದೆ.  ಘಟನೆಯ ನಂತರ ಆರೋಪಿ ಶರತ್ ನಾಪತ್ತೆಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ನಡೆದಿದೆ.

ಮೃತ ಪೋಷಕರನ್ನು ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದ ಭಾಸ್ಕರ್(64) ಮತ್ತು ಕೇಂದ್ರ ಸರ್ಕಾರಿ ನಿವೃತ್ತ ಉದ್ಯೋಗಿ ಶಾಂತಾ(60) ಎಂದು ಗುರುತಿಸಲಾಗಿದೆ.

ಪೋಲೀಸರ ಪ್ರಕಾರ, ಶರತ್ ಕುಡಿದ ಅಮಲಿನಲ್ಲಿ ಕಬ್ಬಿಣದ ರಾಡ್‌ನಿಂದ ತಂದೆ, ತಾಯಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಭಾಸ್ಕರ್ ಹಾಗೂ ಅವರ ಪತ್ನಿ ಶಾಂತಾ ಅವರು ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ.

ಶರತ್ ಮಾನಸಿಕವಾಗಿ ನೊಂದಿದ್ದು, ಪೋಷಕರೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದ. ಮೃತ ದಂಪತಿ ಮಂಗಳೂರು ಮೂಲದವರಾಗಿದ್ದು, 20 ವರ್ಷಗಳಿಂದ ನಗರದಲ್ಲಿ ನೆಲೆಸಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳು. ಇಬ್ಬರಲ್ಲಿ ಹಿರಿಯ ಮಗ ಕೆಲಸಕ್ಕೆ ಹೋಗುತ್ತಿದ್ದರು. ಶಶಾಂಕ್ ಮನೆಯಲ್ಲಿಯೇ ಇರುತ್ತಿದ್ದನು. ಕೆಲಸವಿಲ್ಲದೇ ಮನೆಯಲ್ಲಿರುತ್ತಿದ್ದ ಶರತ್ ವರ್ತನೆ ಸೈಕೋ ರೀತಿಯಲ್ಲಿತ್ತು ಎಂದು ತಿಳಿದು ಬಂದಿದೆ.

ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ಇಂದು ಬೆಳಗ್ಗೆ ಹಿರಿಯ ಮಗ ತಂದೆ-ತಾಯಿಗೆ ಕರೆ ಮಾಡಿದ್ದಾನೆ. ಯಾರೂ ಫೋನ್ ರಿಸೀವ್ ಮಾಡದಿದ್ದಾಗ ಪಕ್ಕದ್ಮನೆಯವರಿಗೆ ಕರೆ ಮಾಡಿ ಪೋಷಕರ ಬಗ್ಗೆ ವಿಚಾರಿಸಿದ್ದಾನೆ.

ಪಕ್ಕದ್ಮನೆ ಜನರು ಬಂದು ನೋಡಿದಾಗ ಜೋಡಿ ಕೊಲೆ ನಡೆದಿರೋದು ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಈಶಾನ್ಯ ವಿಭಾಗ ಡಿಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT