ಮಹಿಳೆ ರಕ್ಷಿಸಿದ ಪೊಲೀಸ್. 
ರಾಜ್ಯ

ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ರಕ್ಷಣೆ: ಸಂಚಾರಿ ಪೊಲೀಸ್ ಕಾರ್ಯಕ್ಕೆ ಮೆಚ್ಚುಗೆ

ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯೊಬ್ಬರನ್ನು ಟ್ರಾಫಿಕ್ ಕಾನ್ಸ್‌ಸ್ಟೇಬಲ್‌ ರಕ್ಷಣೆ ಮಾಡಿದ್ದು, ಪೇದೆಯ ಈ ಕಾರ್ಯಕ್ಕೆ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ.

ಬೆಳಗಾವಿ: ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯೊಬ್ಬರನ್ನು ಟ್ರಾಫಿಕ್ ಕಾನ್ಸ್‌ಸ್ಟೇಬಲ್‌ ರಕ್ಷಣೆ ಮಾಡಿದ್ದು, ಪೇದೆಯ ಈ ಕಾರ್ಯಕ್ಕೆ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ.

ಜೀವನದಲ್ಲಿ ಜಿಗುಪ್ಸೆ ಹೊಂದಿದ್ದ 42 ವರ್ಷದ ಮಹಿಳೆ ಶಿವಲೀಲಾ ಅವರು, ಶನಿವಾರ ಸಂಜೆ ಬೆಳಗಾವಿಯ ಕೋಟೆ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಮಹಿಳೆ ಕೆರೆಗೆ ಹಾರುತ್ತಿದ್ದುದನ್ನು ಕಂಡ ಕೆಲವರು ಸಹಾಯಕ್ಕಾಗಿ ಕೂಗಿಕೊಂಡಿದ್ದರು.

ಈ ವೇಳೆ ಕೋಟೆ ಕೆರೆ ಬಳಿಯ ಅಶೋಕ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಚಾರಿ ಪೊಲೀಸ್ ಕಾಶಿನಾಥ ಇರಗಾರ ಅವರು ಕೂಡಲೇ ಸ್ಥಳಕ್ಕೆ ಧಾವಿಸಿದ್ದರು. ನಂತರ ಸ್ವಲ್ಪವೂ ಯೋಚಿಸದೆ ಕೆರೆಗೆ ಹಾರಿ ಮಹಿಳೆ ಕೆರೆಯಲ್ಲಿ ಮುಳುಗುವ ಮುನ್ನವೇ ರಕ್ಷಣೆ ಮಾಡಿ ಕೆರೆಯಿಂದ ಹೊರ ತಂದಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಹಿಳೆಯನ್ನು ರಕ್ಷಿಸಿದ ಟ್ರಾಫಿಕ್ ಪೊಲೀಸ್ ಕಾಶಿನಾಥ್ ಅವರ ಸಮಯೋಚಿತ ಕ್ರಮಕ್ಕೆ ಜನರು ಮತ್ತು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Indian Stock Market: ರಕ್ತಪಾತ.. ಒಂದೇ ಗಂಟೆಯಲ್ಲಿ ಹೂಡಿಕೆದಾರರಿಗೆ 7,60,00,00,00,000 ನಷ್ಟ!

North Korea Election: ಇತಿಹಾಸದಲ್ಲೇ ಮೊದಲು, Kim Jong Un ವಿರುದ್ಧ ಮತ ಚಲಾವಣೆ, ಆದರೂ ಶೇ. 99.99% ಮತದಾನ.. ಸರ್ವಾಧಿಕಾರಿಗೆ ಭರ್ಜರಿ ಜಯ

ಯುದ್ಧ ನಮ್ಮದಲ್ಲ: ಶಶಿತರೂರ್ ಬಳಿಕ ಮೋದಿ ಸರ್ಕಾರವನ್ನು ಸಮರ್ಥಿಸಿಕೊಂಡ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ

ಭಾರತ- ಪಾಕಿಸ್ತಾನದ ಸಂಘರ್ಷ ಅಣ್ವಸ್ತ್ರದ ಅಪಾಯದಲ್ಲೇ ಇದೆ, ಪಾಕ್ ನಿಂದ ನಮಗೂ ಅಪಾಯ ತಪ್ಪಿದ್ದಲ್ಲ: ಅಮೆರಿಕ

ಸಮುದ್ರದಲ್ಲೇ ಬಿಗ್ ಡೀಲ್‌: ಚೀನಾದತ್ತ ಹೊರಟಿದ್ದ ರಷ್ಯಾದ ತೈಲ ನೌಕೆ ಭಾರತಕ್ಕೆ ಯು-ಟರ್ನ್!

SCROLL FOR NEXT