ರಾಜ್ಯ

ಮಳೆಯ ಮಧ್ಯೆ ವಿಜಯಪುರದಲ್ಲಿ ಭೂಕಂಪನ: ಆತಂಕದಲ್ಲಿ ಜನತೆ

Shilpa D

ವಿಜಯಪುರ: ನಿರಂತರ  ಜಿಟಿ ಜಿಟಿ ಮಳೆ ಮಧ್ಯೆಯೂ ವಿಜಯಪುರದಲ್ಲಿ ಭೂಕಂಪನದ ಅನುಭವವಾಗಿದೆ. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಇಂದು(ಮಂಗಳವಾರ) ಭೂಮಿ ನಡುಗಿದ ಅನುಭವವಾಗಿದೆ.

ಇಂದು ಬೆಳಿಗ್ಗೆ 9-55ಕ್ಕೆ ಭೂಕಂಪನದ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4ರ ತೀವ್ರತೆಯ ಭೂಕಂಪನ ದಾಖಲಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಭೂಕಂಪನಕ್ಕೆ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ವಿಜಯಪುರ ಜಿಲ್ಲೆಯಲ್ಲಿ ಭೂಕಂಪನ ಆಗಾಗ ಸಂಭವಿಸುತ್ತಿದೆ. ಇದೀಗ ಜಿಟಿ ಜಿಟಿ ಮಳೆಗೆ ಮನೆಯ ಛಾವಣಿ ನೆನದಿವೆ. ಹೀಗಾಗಿ ಜನರು ಆತಂಕದಲ್ಲಿದ್ದಾರೆ.

ಭೂಕಂಪನದ 'ಸೆಸ್ಮಿಕ್ ಇಂಟೆನ್ಸಿಟಿ ಮ್ಯಾಪ್' ಪ್ರಕಾರ, ಗಮನಿಸಿದ ತೀವ್ರತೆಯು ತುಂಬಾ ಕಡಿಮೆಯಾಗಿದೆ. ಭೂಕಂಪದ ಕೇಂದ್ರದಿಂದ 15-20 ಕಿಮೀ ರೇಡಿಯಲ್ ದೂರದವರೆಗೂ ತೀವ್ರತೆ ಹರಡಿದೆ.

"ಈ ರೀತಿಯ ಭೂಕಂಪವು ಜನರಿಗೆ ಯಾವುದೇ ಹಾನಿ ಉಂಟು ಮಾಡುವುದಿಲ್ಲ ಏಕೆಂದರೆ ತೀವ್ರತೆಯು ತುಂಬಾ ಕಡಿಮೆಯಾಗಿದೆ. ಪ್ರಮಾಣ ಮತ್ತು ತೀವ್ರತೆ ಕಡಿಮೆ ಇರುವುದರಿಂದ ಸಮುದಾಯ ಆತಂಕಪಡುವ ಅಗತ್ಯವಿಲ್ಲ ಎಂದು ಕೆಎಸ್‌ಎನ್‌ಡಿಎಂಸಿ ಪ್ರಕಟಣೆಯಲ್ಲಿ ತಿಳಿಸಿದೆ.

SCROLL FOR NEXT