ರಾಜ್ಯ

NEP-ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಿ 3 ವರ್ಷ; ಯೋಜನೆ ಬಗ್ಗೆ ಸಂಬಂಧಪಟ್ಟ ಸಂಪನ್ಮೂಲ ವ್ಯಕ್ತಿಗಳು ಏನಂತಾರೆ?

Sumana Upadhyaya

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ(NEP)ಯನ್ನು ಜಾರಿಗೆ ತಂದ ನಂತರ ನಿಗದಿತವಾಗಿ ಆನ್ ಲೈನ್ ಕೋರ್ಸ್ ಗಳಿಗೆ ಸೇರ್ಪಡೆಯಾಗುವವರ ಸಂಖ್ಯೆ ಹೆಚ್ಚಾಗಿದೆ ಎನ್ನುತ್ತಾರೆ ಇಂಡಿಯನ್ ಇನ್ಸ್ಟ್ ಟ್ಯೂಟ್ ಆಫ್ ಸೈನ್ಸ್ ನ ನಿರ್ದೇಶಕ ಗೋವಿಂದನ್ ರಂಗರಾಜನ್. ಎನ್ ಇಪಿಯಲ್ಲಿನ ಬಹು ಶಿಸ್ತೀಯ ವಿಧಾನ ಹಲವು ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣಕ್ಕೆ ಹಲವು ಪ್ರಮುಖ ಶಿಕ್ಷಣ ಸಂಸ್ಥೆಗಳಿಗೆ ಸೇರಿಕೊಳ್ಳುವಂತೆ ಮಾಡಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯ ಮೂರನೇ ವಾರ್ಷಿಕೋತ್ಸವ ಇದೇ ಜುಲೈ 29ರಂದು ನೆರವೇರಲಿದ್ದು ಅದರ ಸಲುವಾಗಿ ನಡೆದ ಚರ್ಚಾ ಸಂವಾದದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಅವರು ಹಲವು ವಿಚಾರಗಳನ್ನು ಹಂಚಿಕೊಂಡರು.

ಶಿಕ್ಷಣ ನೀತಿಯ ಒಳಿತುಗಳು: ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದ ನಂತರ ಹಲವು ವಿದ್ಯಾರ್ಥಿಗಳು ವಿದೇಶಗಳಿಗೆ ಅಧ್ಯಯನಕ್ಕೆ ಹೋಗುವ ಬದಲು ಭಾರತದಲ್ಲಿಯೇ ಉಳಿದುಕೊಳ್ಳುತ್ತಿದ್ದಾರೆ. ಆದರೆ ಬಹು ಶಿಸ್ತೀಯ ವಿಷಯಗಳ ಕಲಿಕೆಗೆ ಬೋಧಕ ವರ್ಗವನ್ನು ನೇಮಿಸುವುದು ಸದ್ಯ ಸರ್ಕಾರಕ್ಕೆ ಸವಾಲಾಗಿದೆ. ಅದು ಇನ್ನು ಕೆಲವು ವರ್ಷಗಳಲ್ಲಿ ಸಮಸ್ಯೆ ಬಗೆಹರಿಯಬಹುದು ಎನ್ನುತ್ತಾರೆ.

ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಪ್ರಾದೇಶಿಕ ನಿರ್ದೇಶಕ ಬಿ ಎನ್ ಶ್ರೀಧರ್, ಎನ್ ಇಪಿಯಿಂದ ಶಾಲಾ-ಕಾಲೇಜುಗಳು ಶಿಕ್ಷಣದ ಕೇಂದ್ರಗಳಾಗಿ ಅಭಿವೃದ್ಧಿಯಾಗುವಲ್ಲಿ ಸಹಾಯವಾಗಿದೆ. ಶಿಕ್ಷಣ ಇಲಾಖೆ ಇನ್ಫೋಸಿಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಲಿಂಕೆಡ್ ಇನ್, ಐಬಿಎಂ, ಅಮೆಜಾನ್ ನಂತಹ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಂಡಿವೆ. ಆ ಮೂಲಕ ವಿದ್ಯಾರ್ಥಿಗಳು, ಉದ್ಯೋಗ ಬಯಸುವವರಲ್ಲಿ ಕೌಶಲ್ಯಾಭಿವೃದ್ಧಿ ಮಾಡುತ್ತಿವೆ. ಮಹಿಳೆಯರು ಮುಂದೆ ಬರುವಂತಾಗಲು ಸರ್ಕಾರ ಇತರ ಹಲವು ವೃತ್ತಿಪರ ಕೌಶಲ್ಯ ಕಾರ್ಯಕ್ರಮಗಳನ್ನು ಆರಂಭಿಸಲು ಯೋಚಿಸುತ್ತಿದೆ ಎಂದರು.

ಕರ್ನಾಟಕ ಸರ್ಕಾರದ ಹೊಸ ಶಿಕ್ಷಣ ನೀತಿಯ ಬಗ್ಗೆ ಸುದ್ದಿಗಾರರು ಕೇಳಿದಾಗ ಈ ಅಧಿಕಾರಿಗಳು ಪ್ರತಿಕ್ರಿಯಿಸಲು ನಿರಾಕರಿಸಿದರು. ಎನ್ಇಪಿ ದಕ್ಷಿಣ ಭಾರತದ ಭಾಷೆಗಳಿಗೆ ಪ್ರೋತ್ಸಾಹ ನೀಡುವುದಿಲ್ಲವೇ ಎಂದಾಗ, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಕ್ಕಳು ತಮ್ಮ ಮಾತೃಭಾಷೆಯಲ್ಲಿ ಕಲಿಕೆಗೆ ಪ್ರೋತ್ಸಾಹ ನೀಡಲಾಗುತ್ತದೆ. ಪಠ್ಯಪುಸ್ತಕಗಳನ್ನು ವಿವಿಧ ಭಾಷೆಗಳಲ್ಲಿ ಪ್ರಕಟಿಸಲಾಗುತ್ತದೆ ಎಂದರು.

ಸಾಮಾನ್ಯವಾಗಿ ಸಿಬಿಎಸ್ ಇ ಸಿಲೆಬಸ್ ಗಳು ಇಂಗ್ಲಿಷ್ ಅಥವಾ ಹಿಂದಿ ಭಾಷೆಗಳಲ್ಲಿರುತ್ತವೆ. ಎನ್ ಇಪಿ ಜಾರಿಗೆ ತಂದ ನಂತರ ಶಾಲೆಗಳು ವಿವಿಧ ಭಾಷೆಗಳಲ್ಲಿ ಬೋಧನೆಯನ್ನು ಮಾಡುತ್ತವೆ ಎಂದು ಸಿಬಿಎಸ್ ಇ ಬೆಂಗಳೂರು ಪ್ರಾದೇಶಿಕ ಕಚೇರಿಯ ಪಿ ರಮೇಶ್ ಹೇಳುತ್ತಾರೆ. 5+3+3+4 ಕಲಿಕಾ ವಿಧಾನ ಸ್ವಾಗತಕಾರಿ ಎನ್ನುತ್ತಾರೆ.

SCROLL FOR NEXT