ರಾಜ್ಯ

ಬುರ್ಖಾ ಧರಿಸಿ ಬಾ... ಇಲ್ಲದಿದ್ದರೆ ಬಸ್ಸಿಗೆ ಹತ್ತಲು ಬಿಡೋದಿಲ್ಲ: ಕಲಬುರಗಿಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ಮೇಲೆ ಬಸ್ ಚಾಲಕ ಆವಾಜ್!

Sumana Upadhyaya

ಕಲಬುರಗಿ: ಬುರ್ಖಾ ಧರಿಸದೆ ಬಂದ ವಿದ್ಯಾರ್ಥಿನಿಯನ್ನು ಬಸ್ಸಿಗೆ ಹತ್ತಲು ಚಾಲಕ ಬಿಡದಿದ್ದ ಘಟನೆ ಕಲಬುರಗಿಯಲ್ಲಿ ನಡೆದಿದೆ. ತಮ್ಮೂರಿಗೆ ಹೊರಟಿದ್ದ ಹಿಜಬ್‌ಧಾರಿ ವಿದ್ಯಾರ್ಥಿನಿಯರಿಗೆ, ಬುರ್ಖಾ (Burqa) ಧರಿಸಿ ಬರುವಂತೆ ಹೇಳಿ ಬಸ್‌ ಹತ್ತಲು ಸರ್ಕಾರಿ ಬಸ್‌ ಚಾಲಕ ಅವಕಾಶ ನೀಡಲಿಲ್ಲ. ಕಮಲಾಪುರ ತಾಲೂಕಿನಲ್ಲಿ ಘಟನೆ ನಡೆದಿದ್ದು, ಬುರ್ಖಾ ಧರಿಸಿಯೇ ಬನ್ನಿ ಎಂದು ವಿದ್ಯಾರ್ಥಿನಿಯರನ್ನು ಬಸ್‌ನಿಂದ ಚಾಲಕ ಕೆಳಗಿಳಿಸಿರುವ ಘಟನೆ ನಡೆದಿದೆ.

ತಮ್ಮೂರಿಗೆ ಹೋಗಲು ವಿದ್ಯಾರ್ಥಿನಿಯರು ಬಸವಕಲ್ಯಾಣಕ್ಕೆ ಹೋಗುವ ಬಸ್ ಹತ್ತಿದ್ದರು. ವರನಾಳ ಗ್ರಾಮಕ್ಕೆ ಹೋಗುವ ವಿದ್ಯಾರ್ಥಿಗಳನ್ನ ಹತ್ತಿಸಿಕೊಂಡಿರಿ. ನಾವು ಓಕಳಿ ವರೆಗೆ ಬರ್ತೀವಿ ಎಂದ ವಿದ್ಯಾರ್ಥಿನಿಯರು ಚಾಲಕನ ಬಳಿ ಪ್ರಸ್ತಾಪಿಸಿದ್ದಾರೆ. ಈ ವೇಳೆ ಹಿಜಬ್ ಧರಿಸಿದ್ದ ವಿದ್ಯಾರ್ಥಿನಿಯನ್ನು ‘ನೀನು ಮುಸ್ಲಿಂ ಇದಿಯಲ್ವ.. ಬುರ್ಖಾ ಧರಿಸಿ ಬಾ.. ಆಗ ಮಾತ್ರ ಬಸ್ ಹತ್ತಲು ಬಿಡುತ್ತೇನೆ’ ಎಂದಿದ್ದಾರೆ ಚಾಲಕ.

ಕಳೆದ ಬಿಜೆಪಿ ಸರ್ಕಾರದ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿ ಕರಾವಳಿ ಪ್ರದೇಶದಲ್ಲಿ ಆರಂಭವಾದ ಬುರ್ಖಾ ವಿವಾದ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. 

ಸರ್ಕಾರದ ಆದೇಶ ಪ್ರಕಾರ ಶಾಲೆಗಳಲ್ಲಿ ಬುರ್ಖಾ ಧರಿಸುವಂತಿಲ್ಲ. ಈಗ ಬಂದಿರುವ ಕಾಂಗ್ರೆಸ್ ಸರ್ಕಾರ ತಂದಿರುವ ಶಕ್ತಿ ಯೋಜನೆಯಡಿ ವಿದ್ಯಾರ್ಥಿನಿಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಉಚಿತವಾಗಿದೆ.

SCROLL FOR NEXT