ರಾಜ್ಯ

ಸುರಾನಾ ಗ್ರೂಪ್ ಮೇಲೆ ಚಾಟಿ ಬೀಸಿದ ಜಾರಿ ನಿರ್ದೇಶನಾಲಯ: 124 ಕೋಟಿ ರೂ.ಮೌಲ್ಯದ ಆಸ್ತಿ ಮುಟ್ಟುಗೋಲು

Sumana Upadhyaya

ಬೆಂಗಳೂರು: ಚೆನ್ನೈ ಮೂಲದ ಸುರಾನಾ ಗ್ರೂಪ್ ಆಫ್ ಕಂಪನೀಸ್‌ಗೆ ಸಂಬಂಧಿಸಿದ ವಿವಿಧ ವ್ಯಕ್ತಿಗಳು ಮತ್ತು ಘಟಕಗಳ ಸ್ವಾಧೀನದಲ್ಲಿ ಸುಮಾರು 124 ಕೋಟಿ ರೂಪಾಯಿ ಮೌಲ್ಯದ 78 ಸ್ಥಿರಾಸ್ತಿ ಮತ್ತು 16 ಚರ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ED) ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ. 

ಅಕ್ರಮ ಹಣ ವರ್ಗಾವಣೆ ಕಾಯ್ದೆ(PMLA), 2002ರಡಿಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ 3,986 ಕೋಟಿ ಅಸಲು ಬಾಕಿ ಮೊತ್ತವನ್ನು ಒಳಗೊಂಡಿರುವ ಬ್ಯಾಂಕ್ ವಂಚನೆಯ ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಇಡಿ ಈ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. 

124.95 ಕೋಟಿ (ಅಂದಾಜು) ಮೌಲ್ಯದ ಆಸ್ತಿಯನ್ನು ಇಡಿ ಮೊದಲು ಜಪ್ತಿ ಮಾಡಿತ್ತು. ಇದೀಗ ಪ್ರಕರಣದ ಒಟ್ಟು ಮೊತ್ತ 248.98 ಕೋಟಿ ರೂಪಾಯಿಗಳಾಗಿವೆ. 

ಸುರಾನಾ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಇತರರು, ಸುರಾನಾ ಪವರ್ ಲಿಮಿಟೆಡ್ ಮತ್ತು ಇತರರು ಮತ್ತು ಸುರಾನಾ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಇತರರ ವಿರುದ್ಧ ಬೆಂಗಳೂರಿನ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ದಾಖಲಿಸಿದ ಮೂರು ಎಫ್‌ಐಆರ್‌ಗಳ ಆಧಾರದ ಮೇಲೆ ಅಕ್ರಮ ಹಣ ವರ್ಗಾವಣೆ ತನಿಖೆಯನ್ನು ಆರಂಭಿಸಿದ ಕೇಂದ್ರೀಯ ಸಂಸ್ಥೆ ಕಳೆದ ಜುಲೈಯಿಂದ ನಾಲ್ವರನ್ನು ಬಂಧಿಸಿದೆ. 

SCROLL FOR NEXT